ರಾಜಮೌಳಿಯ 'RRR' ಆಸ್ಕರ್ ಗೆದ್ದ ಬೆನ್ನಲ್ಲೇ ನಿರ್ದೇಶಕ ವಿವೇಕ್ ಆಗ್ನಿಹೋತ್ರಿ ಹಿಗ್ಗಾಮುಗ್ಗಾ ಟ್ರೋಲ್

Published : Mar 13, 2023, 05:26 PM IST
ರಾಜಮೌಳಿಯ 'RRR' ಆಸ್ಕರ್ ಗೆದ್ದ ಬೆನ್ನಲ್ಲೇ ನಿರ್ದೇಶಕ ವಿವೇಕ್ ಆಗ್ನಿಹೋತ್ರಿ ಹಿಗ್ಗಾಮುಗ್ಗಾ ಟ್ರೋಲ್

ಸಾರಾಂಶ

ರಾಜಮೌಳಿ ಅವರ 'RRR' ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಗೆದ್ದ ಬೆನ್ನಲ್ಲೇ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಆಗ್ನಿಹೋತ್ರಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. 

ಆಸ್ಕರ್ 2023ಕ್ಕೆ ಅದ್ದೂರಿ ತೆರೆ ಬಿದ್ದಿದೆ. ಈ ಬಾರಿಯ ಆಸ್ಕರ್ ಭಾರತೀಯರಿಗೂ ವಿಶೇಷವಾಗಿತ್ತು. 95ನೇ ಅಕಾಡೆಮಿ ಅವಾರ್ಡ್‌ ಸಮಾರಂಭದಸಲ್ಲಿ ಭಾರತ ಎರಡು ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದೆ. ಆರ್ ಆರ್ ಆರ್ ಸಿನಿಮಾ ನಾಟು ನಾಟು..ಹಾಡು ಮತ್ತು ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ದಿ ಎಲಿಫೆಂಡ್ ವಿಸ್ಪರ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ನಾಟು ನಾಟು...ಹಾಡು ಆಸ್ಕರ್ ಗೆಲ್ಲುತ್ತಿದ್ದಂತೆ ಇಡೀ ಆರ್ ಆರ್ ಆರ್ ತಂಡ ಸಂಭ್ರಮಿಸಿದೆ. ಆರ್ ಆರ್ ಆರ್ ತಂಡಕ್ಕೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಸಿನಿಮಾ, ರಾಜಕೀಯ ಗಣ್ಯರು ಸೇರಿದಂತೆ ಎಲ್ಲರೂ ವಿಶ್ ಮಾಡುತ್ತಿದ್ದಾರೆ, ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ಕಾಶ್ಮೀರ್ ಫೈಲ್ಸ್ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ರಾಜಮೌಳಿ ಮತ್ತು ತಂಡಕ್ಕೆ ವಿಶ್ ಮಾಡಿರುವ ನಿರ್ದೇಶಕ ಅಗ್ನಿಹೋತ್ರಿ, 'ನಾಟು ನಾಟುಗಾಗಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಎಂ ಎಂ ಕೀರವಾಣಿ ಮತ್ತು ರಾಜಮೌಳಿ ಅವರಿಗೆ ಅಭಿನಂದನೆಗಳು. ದಿ ಎಲಿಫಎಂಟ್ ವಿಸ್ಪರ್ಸ್ ಅದ್ಭುತ. ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಗೆದ್ದಿದ್ದಕ್ಕಾಗಿ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವ್ಸ್ ಅವರಿಗೆ ಅಭಿನಂದನೆಗಳು. ಇದು ಭಾರತೀಯ ಚಿತ್ರರಂಗದ ವರ್ಷ' ಎಂದು ಹೇಳಿದ್ದಾರೆ. ವಿವೇಕ್ ಅಗ್ನಿಹೋತ್ರಿ ವಿಶ್ ಮಾಡುತ್ತಿದ್ದಂತೆ ನೆಟ್ಟಿಗರು ಸಿಕ್ಕಾಪಟ್ಟೆ ಕಾಲೆಳೆಯುತ್ತಿದ್ದಾರೆ. 

ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಗೆದ್ದು ಬೀಗಿದ ಬೆನ್ನಲ್ಲೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ. ವಿವೇಕ್ ಅಗ್ನಿಹೋತ್ರಿ ಮತ್ತು ನಟ ಅನುಪಮ್ ಖೇರ್ ಅವರ ಪೋಟೋಗಳನ್ನು ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಎಂ ಎಂ ಕೀರವಾಣಿ ಮತ್ತು ಚಂದ್ರಬೋಷ್ ಇ್ಬಬರೂ ಆಸ್ಕರ್ ಪ್ರಶಸ್ತಿ ಹಿಡಿದಿರುವ ಫೋಟೋವನ್ನು ಎಡಿಟ್ ಮಾಡಿ ವಿವೇಕ್ ಅಗ್ನಿಹೋತ್ರಿ ಮತ್ತು ಅನುಪಮ್ ಖೇರ್ ಮುಖವನ್ನು ಸೇರಿಸಿ ಟ್ರೋಲ್ ಮಾಡಲಾಗುತ್ತಿದೆ. ಆಸ್ಕರ್ ಪ್ರಶಸ್ತಿ ಬೆನ್ನಲ್ಲೇ ಟ್ವಿಟ್ಟರ್ ನಲ್ಲಿ ವಿವೇಕ್ ಅಗ್ನಿಹೋತ್ರಿ ಟ್ರೆಂಡ್ ಆಗಿದ್ದರು. ನೆಟ್ಟಿಗರು ವಿವೇಕ್ ಅಗ್ನಿಹೋತ್ರಿ ಅವರನ್ನು ಕಾಲೆಳೆಯುತ್ತಿದ್ದಾರೆ. 

Oscar 2023; ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ದೀಪಿಕಾ ನಿರೂಪಕಿ; 'ಅಚ್ಚೇ ದಿನ್' ಎಂದ ವಿವೇಕ್ ಅಗ್ನಿಹೋತ್ರಿ

ನೆಟ್ಟಿಗರು ಕಾಮೆಂಟ್ ಮಾಡಿ, 'ನಿಮ್ಮ ಆಸ್ಕರ್ ನಾಮನಿರ್ದೇಶನ ಏನಾಯಿತು?' ಎಂದು ಪ್ರಶ್ನೆ ಮಾಡುತ್ತಿದ್ದಾರೆ. 'ನಿಮ್ಮ ಆಸ್ಕರ್ ಬಗ್ಗೆ ಏನು?' ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಕಾಮೆಂಟ್ ಮಾಡಿ "ಕಾಶ್ಮೀರ ಫೈಲ್ಸ್ ಕೂಡ ನಾಮನಿರ್ದೇಶನಗೊಂಡಿದೆ ಎಂದು ನಾನು ಭಾವಿಸಿದ್ದೆ' ಎಂದು ಹೇಳಿದ್ದಾರೆ. ಹೀಗೆ ಕಾಶ್ಮೀರ್ ಫೈಲ್ಸ್ ಬಗ್ಗೆ ತರಹೇವಾರಿ ಕಾಮೆಂಟ್ ಬರುತ್ತಿವೆ.

ನೀವ್ ಯಾವಾಗ ಬದಲಾಗ್ತೀರಾ? ವಿರಾಟ್ ಕೊಹ್ಲಿ ಟೆಂಪಲ್ ರನ್‌ಗೆ ಪ್ರತಿಕ್ರಿಯಿಸಿದ ಅಗ್ನಿಹೋತ್ರಿಗೆ ನೆಟ್ಟಿಗರ ಪ್ರಶ್ನೆ

ಈ ಬಗ್ಗೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ವಿವೇಕ್ ಅಗ್ನಿಹೋತ್ರಿ ಮಾತನಾಡಿ, 'ಭಾರತೀಯ ಚಿತ್ರರಂಗಕ್ಕೆ ಇದು ಉತ್ತಮ ಸಮಯ.  ನಮ್ಮ ಸಿನಿಮಾ ದಿ ಕಾಶ್ಮೀರ್ ಫೈಲ್ಸ್‌ನಿಂದ ಪ್ರಾರಂಭಿಸಿ ಭಾರತದ ಚಿತ್ರಗಳು ಜಾಗತಿಕ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಆರ್‌ಆರ್‌ಆರ್‌ನ ಅಭೂತಪೂರ್ವ ಯಶಸ್ಸು, ಎರಡು ಸಾಕ್ಷ್ಯಚಿತ್ರಗಳು ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್‌ಗಾಗಿ ಆಸ್ಕರ್ ಮತ್ತು ದೀಪಿಕಾ ಪಡುಕೋಣೆ ಆಸ್ಕರ್‌ನಲ್ಲಿ ಒಂದು ವಿಭಾಗವನ್ನು ಪ್ರಸ್ತುತಪಡಿಸಿದರು. ನಟಿ ದೀಪಿಕಾ ಪಡುಕೋಣೆ ಸಮಾರಂಭದಲ್ಲಿ ಪಾಲ್ಗೊಂಡು ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ RRR ಹಾಡು ನಾಟು ನಾಟು ಪರಿಚಯಿಸಿದರು' ಎಂದು ಹೊಗಳಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?