ನಟಿ ಉರ್ಫಿ ಜಾವೇದ್‌ ಸತ್ತರೆ ಸ್ಮಶಾನದಲ್ಲೂ ಜಾಗ ಕೊಡಲ್ಲ: ದೂರು ದಾಖಲಿಸಿದ ಫೈಜಾನ್‌ ಅನ್ಸಾರಿ

Published : Mar 13, 2023, 04:52 PM IST
ನಟಿ ಉರ್ಫಿ ಜಾವೇದ್‌ ಸತ್ತರೆ ಸ್ಮಶಾನದಲ್ಲೂ ಜಾಗ ಕೊಡಲ್ಲ: ದೂರು ದಾಖಲಿಸಿದ ಫೈಜಾನ್‌ ಅನ್ಸಾರಿ

ಸಾರಾಂಶ

ಮತ್ತೆ ದೊಡ್ಡದಾಯ್ತು ಉರ್ಫಿ ಜಾವೇದ್ ಮತ್ತು ಫೈಜಾನ್‌ ಅನ್ಸಾರಿ ಜಗಳ. ಕಟಕಟೆಯಲ್ಲಿ ನಿಂತುಕೊಂಡು ಮಾಡುತ್ತಿರುವ ಕೆಲಸದ ಬಗ್ಗೆ ಮಾತನಾಡಲಿ ಎಂದಿದ್ದಾರೆ...

ಹಿಂದಿ ಕಿರುತೆರೆ ನಟಿ, ಬಿಗ್ ಬಾಸ್ ಹಾಗೂ ಲಾಕಪ್ ಸ್ಪರ್ಧಿ ಉರ್ಫಿ ಜಾವೇದ್‌ ವಿಚಿತ್ರ ವಿಚಿತ್ರ ಡಿಸೈನರ್‌ ಉಡುಪುಗಳಿಂದ ದಿನೇ ದಿನೇ ಸುದ್ದಿ ಆಗುತ್ತಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳಿಂದ ವಸ್ತ್ರ ವಿನ್ಯಾಸ ಮಾಡಿಕೊಂಡು ಮುಂಬೈ ರಸ್ತೆಗಳಲ್ಲಿ ಓಡಾಡುತ್ತಿರುವುದು ತಪ್ಪು ಎಂದು ಅನೇಕು ಧ್ವನಿ ಎತ್ತಿದ್ದಾರೆ ಹಾಗೂ ದೂರು ನೀಡಿದ್ದಾರೆ. ಯಾವುದಕ್ಕೂ ಕೇರ್ ಮಾಡದ ಕಾರಣ ಫೈಜಾನ್‌ ಅನ್ಸಾರಿ ಕಾನೂನು ಮೊರೆ ಹೋಗಿದ್ದಾರೆ. ಇಂದು ದೂರು ದಾಖಲಿಸಿ ಉರ್ಫಿಗೆ ನೋಟಿಸ್‌ ಕಳುಹಿಸಿರುವ ಫೈಜಾನ್‌ ಅನ್ಸಾರಿ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ.

'ನಟಿ ಉರ್ಫಿ ಜಾವೇದ್ ವಿರುದ್ಧ ಫತ್ವಾ ಹೊರಡಿಸಬೇಕು ಎಂದು ಮೌಲಾನಾಗಳಿಗೆ ದೂರು ನೀಡಲಾಗಿದೆ. ಅಲ್ಲದೆ ನಟಿಯ ಸಾವಿನ ನಂತರವೂ ನಾವು ಆಕೆಯನ್ನು ಹೂಳುವುದಕ್ಕೆ ಸ್ಮಶಾನದಲ್ಲಿ ಜಾಗ ನೀಡುವುದಿಲ್ಲ. ಉರ್ಫಿ ಜಾವೇದ್ ಇಸ್ಲಾಂ ಧರ್ಮವನ್ನು ಪದೇ ಪದೇ ಅವಮಾನಿಸಿದ್ದಾರೆ. ತಮ್ಮ ಉಡುಪಿನಿಂದ ಇಡೀ ಸಮುದಾಯ್ಕೆ ದೊಡ್ಡ ಮಟ್ಟದಲ್ಲಿ ಅವಮಾನ ಮಾಡಿದ್ದಾರೆ. ಹೀಗಾಗಿ ನೋಟಿಸ್‌ ನೀಡಿದ್ದೇವೆ. ಅಗತ್ಯವಿದ್ದರೆ ಬಾಂಬೆ ಹೈ ಕೋರ್ಟ್‌ಗೆ ಬಂದು ಹೋಗಲಿ' ಎಂದ ಫೈಜಾನ್‌ ಮಾಧ್ಯಮಗಳ ಎದುರು ಮಾತನಾಡಿದ್ದಾರೆ. 

ಜೀಪ್ ಮೆರಿಡಿಯನ್ SUV ಖರೀದಿಸಿ, ಅದೇ ಕಲರ್ ಬಟ್ಟೆ ತೊಟ್ಟ ಉರ್ಫಿ!

'ನಟಿ ಉರ್ಫಿ ಜಾವೇದ್‌ಗೆ ಧೈರ್ಯ ತುಂಬಾನೇ ಕಡಿಮೆ. ಏನೇ ಆದರೂ ಮುಂದೆ ಬಂದು ಮಾತನಾಡುವ ಧೈರ್ಯ ಆಕೆ ಇಲ್ಲ. ಉರ್ಫಿ ಜೊತೆ ನನ್ನ ಜಗಳ ಈಗಿನಿಂದಲ್ಲ. ನನ್ನನ್ನು ನೇರವಾಗಿ ಎದುರಿಸಿ ಎಂದು ಈ ಮೊದಲೇ ಹೇಳಿದ್ದೆ. ಮತ್ತೆ ಅದನ್ನೇ ಹೇಳುತ್ತೇನೆ. ವಿಚಿತ್ರವಾಗಿ ಮಾಡಿಕೊಳ್ಳುವ ಡಿಸೈನ್‌ ಬಟ್ಟೆಗಳಿಂದ ಇಡೀ ದೇಶದ ವಾತಾವರಣವನ್ನು ಹಾಳು ಮಾಡಿದ್ದಾರೆ. ಈಗಾಗಲೆ ಅನೇಕ ಬಾರಿ ಈ ವಿಚಾರದ ಬಗ್ಗೆ ಮಸೀದಿಗಳು ಮತ್ತು ಸ್ಮಶಾನಗಳಿಗೆ ಉರ್ಫಿ ಕುರಿತು ಪತ್ರಗಳನ್ನು ಬರೆದು ನೀಡಿದ್ದೇನೆ. ದೆಹಲಿ ಮತ್ತು ಮುಂಬೈನಲ್ಲಿ ಪ್ರಮುಖವಾಗಿ ಪ್ರತ ನೀಡಿರುವೆ. ಇದೀಗ ಉರ್ಫಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವೆ. ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಲಿದ್ದೇನೆ' ಎಂದು  ಫೈಜಾನ್‌  ಹೇಳಿದ್ದಾರೆ.

'ಉರ್ಫಿ ತುಂಬಾ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಜನರಿಗೆ ದೇಹ ತೋರಿಸಿ ಹಣ ಗಳಿಸುತ್ತಿರುವುದು ತಪ್ಪು. ಪ್ರಚಾರಕ್ಕೆ ಇದೆಲ್ಲಾ ಮಾಡುತ್ತಿರುವು ಎಂದು ಎಲ್ಲರಿಗೂ ಗೊತ್ತಿದೆ. ಈ ಕಾರಣದಿಂದ ತಮ್ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ಮುಂದೆ ಬಂದಿರುವ ಇನ್ನಿತರ ಬಾಲಿವುಡ್‌ ನಟಿಯರು ಮತ್ತು ಸೂಪರ್‌ ಸ್ಟಾರ್‌ಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಉರ್ಫಿ ಜಾವೇದ್ ತಮ್ಮ ದೇಹವನ್ನು ತೋರಿಸಿ ಹಣ ಸಂಪಾದನೆ ಮಾಡುತ್ತಿರುವುದಕ್ಕೆ ನಾಚಿಕೆ ಆಗಬೇಕು. ಟ್ಯಾಲೆಂಟ್‌ ಇದ್ದರೆ ನಟಿಸಿ, ಸಿನಿಮಾ ಮಾಡಿ ಹಣ ಸಂಪಾದಿಸಲಿ' ಎಂದಿದ್ದಾರೆ ಫೈಜಾನ್‌ .

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?