ಕೃಷ್ಣಕುಮಾರ್ ತೊಡೆ ಮೇಲೆ ಕುಸಿದು ಬಿದ್ದ ಸೋನು ನಿಗಮ್, ತಿಷಾ ಸಾವಿಗೆ ಕಂಗಾಲಾದ ಖ್ಯಾತ ಸಿಂಗರ್!

Published : Jul 24, 2024, 05:04 PM ISTUpdated : Jul 24, 2024, 05:09 PM IST
ಕೃಷ್ಣಕುಮಾರ್ ತೊಡೆ ಮೇಲೆ ಕುಸಿದು ಬಿದ್ದ ಸೋನು ನಿಗಮ್, ತಿಷಾ ಸಾವಿಗೆ ಕಂಗಾಲಾದ ಖ್ಯಾತ ಸಿಂಗರ್!

ಸಾರಾಂಶ

ಮುಂಬೈ ಚಿತ್ರಜಗತ್ತಿನ, ಬಾಲಿವುಡ್‌ ಸಿನಿರಂಗದ ಜನಪ್ರಿಯ ನಿರ್ಮಾಣ ಹಾಗೂ ಮ್ಯೂಸಿಕ್ ಲೇಬಲ್ ಕಂಪನಿ ಟಿ ಸೀರಿಸ್ ಮುಖ್ಯಸ್ಥ ಭೂಷಣ್ ಕುಮಾರ್ ಸಂಬಂಧಿ, ನಿರ್ಮಾಪಕ ಕೃಷ್ಣ ಕುಮಾರ್ ಪುತ್ರಿ ತಿಷಾ ಕುಮಾರ್ (Tishaa Kumar) ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. 21ರ ಹರೆಯದ ತಿಶಾ ಕುಮಾರ್ ಆ್ಯನಿಮಲ್ ಚಿತ್ರದ..

ಬಾಲಿವುಡ್ ಸಿಂಗರ್ ಸೋನು ನಿಗಮ್ ಅವರು ತಿಷಾ ಕುಮಾರ್ (Tishaa Kumar) ಅವರ ಸಾವಿನಿಂದ ದುಃಖತಪ್ತರಾಗಿದ್ದು, ಅವರ ತಂದೆ ಕೃಷ್ಣನ್ ಕುಮಾರ್ ತೊಡೆಯ ಮೇಲೆ ಕುಸಿದು ಮಲಗಿದ್ದಾರೆ. ಮುಂಬೈನ ಪ್ರತಿಷ್ಠಿತ ಸಂಗೀತ ಸಂಸ್ಥೆ ಟಿ-ಸಿರೀಸ್‌ ಸಹ-ಮಾಲೀಕರಾದ ಕೃಷ್ಣನ್ ಕುಮಾರ್ ಅವರ ಮಗಳಾಗಿದ್ದರು ಈ ತಿಷಾ ಕುಮಾರ್. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತೊಷಾ ಕುಮಾರ್, ಕಳೆದ ವಾರ ಜರ್ಮನಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದಿದ್ದಾರೆ. 

ಸೋನು ನಿಗಮ್ ಅವರು ತಿಷಾ ಅವರು ಚಿಕ್ಕ ಮಗುವಾಗಿದ್ದ ಸಮಯದಿಂದಲೂ ಅವರನ್ನು ನೋಡಿದ್ದು, ಅವರ ಸಾವಿಸ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದಾರೆ. ಅಂತಿಮ ಸಂಸ್ಕಾರದ ವೇಳೆ ಬಂದ ಸೋನು ನಿಗಮ್ ಅವರು ತಿಷಾ ತಂದೆಯ ತೊಡೆಯ ಮೇಲೆ ಕುಸಿದು ಮಲಗಿದ್ದಾರೆ. ಕಾರಣ, ಚಿಕ್ಕ ಮುಗುವಾಗಿದ್ದ ವೇಳೆಯಿಂದಲೂ ಸೋನು ನಿಗಮ್ ಅವರನ್ನು ನೋಡಿದ್ದಾರೆ, ಮಾತನಾಡಿದ್ದಾರೆ. ಆದರೆ, ಈಗ ಅವರ ಕಣ್ಣೆದುರಿಗೆ ಕೇವಲ 21 ವರ್ಷದ ತರುಣಿ ತಿಷಾ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಹೀಗಾಗಿ ಸೋನು ನಿಗಮ್ ಅವರಿಗೆ ತಡೆದುಕೊಳ್ಳಲು ಆಗಿಲ್ಲ.  

ಅಪರ್ಣಾ ಬೆನ್ನಲ್ಲೇ ಕ್ಯಾನ್ಸರ್‌ಗೆ ಬಲಿಯಾದ ಬಾಲಿವುಡ್ ನಿರ್ಮಾಪಕನ ಪುತ್ರಿ ತಿಶಾ!

ಮುಂಬೈ ಚಿತ್ರಜಗತ್ತಿನ, ಬಾಲಿವುಡ್‌ ಸಿನಿರಂಗದ ಜನಪ್ರಿಯ ನಿರ್ಮಾಣ ಹಾಗೂ ಮ್ಯೂಸಿಕ್ ಲೇಬಲ್ ಕಂಪನಿ ಟಿ ಸೀರಿಸ್ ಮುಖ್ಯಸ್ಥ ಭೂಷಣ್ ಕುಮಾರ್ ಸಂಬಂಧಿ, ನಿರ್ಮಾಪಕ ಕೃಷ್ಣ ಕುಮಾರ್ ಪುತ್ರಿ ತಿಷಾ ಕುಮಾರ್ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. 21ರ ಹರೆಯದ ತಿಶಾ ಕುಮಾರ್ ಆ್ಯನಿಮಲ್ ಚಿತ್ರದ ಪ್ರೀಮಿಯರ್ ಶೂ ವೇಳೆ ಕಾಣಿಸಿಕೊಂಡಿದ್ದರು. ಆ ಬಳಿಕ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.  ಇಷ್ಟು ಚಿಕ್ಕ ವಯಸ್ಸಿನಲ್ಲೇ ತಿಶಾ ಕ್ಯಾನ್ಸರ್‌ಗೆ ಬಲಿಯಾಗಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 

ಕೇವಲ 21 ವರ್ಷದ ತಿಶಾ ಕುಮಾರ್ ಅವರಿಗೆ ಕಳೆದ ವರ್ಷ ಕ್ಯಾನ್ಸರ್ ಮಾರಕ ರೋಗ ಪತ್ತೆಯಾಗಿತ್ತು. ಬಳಿಕ ಚಿಕಿತ್ಸೆ ಪ್ರಾರಂಭಿಸಲಾಗಿತ್ತು. ಆದರೆ, ಇತ್ತೀಚೆಗೆ ಕ್ಯಾನ್ಸರ್ ಅಪಾಯದ ಮಟ್ಟ ತಲುಪಿತ್ತು. ಹೀಗಾಗಿ ಕುಟುಂಬಸ್ಥರು ಜರ್ಮನಿಯ ಪ್ರಖ್ಯಾತ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಕ್ಯಾನ್ಸರ್ ಅಪಾಯದ ಮಟ್ಟ ಮೀರಿದ್ದ ಕಾರಣ ಚಿಕಿತ್ಸೆ ಫಲಿಸದೇ ತಿಶಾ ಕುಮಾರ್ ನಿಧನರಾಗಿದ್ದಾರೆ. 

ತಿಶಾ ಕುಮಾರ್ ಕುಟುಂಬಸ್ಥರು ವಿಶೇಷ ಮನವಿ ಮಾಡಿಕೊಂಡಿದ್ದಾರೆ. 'ಈ ದುಃಖದ ಸಂದರ್ಭದಲ್ಲಿ ದಯವಿಟ್ಟು ನಮ್ಮ ಕುಟುಂಬದ ಖಾಸಗಿ ಕ್ಷಣವನ್ನು ಗೌರವಿಸಿ.. ನಮ್ಮ ನಗುವನ್ನು ಕಳೆದುಕೊಂಡಿದ್ದೇವೆ. ನಮ್ಮ ಎಲ್ಲಾ ಖುಷಿ ಅವಳಾಗಿದ್ದಳು. ಇದು ಅತ್ಯಂತ ಕಠಿಣ ಸಂದರ್ಭ. ಹೀಗಾಗಿ ಈ ಪರಿಸ್ಥಿತಿಯಲ್ಲಿ ನಮ್ಮನ್ನು ಅರ್ಥ ಮಾಡಿಕೊಂಡು ಗೌರವಿಸಬೇಕಾಗಿ ವಿನಂತಿ..' ಎಂದಿದೆ ಕುಟುಂಬ. 

ತಿಶಾ ತಂದೆ ಕೃಷ್ಣಕುಮಾರ್ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಕೊನೆಯದಾಗಿ ಕೃಷ್ಣ ಕುಮಾರ್ ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಅಭಿನಯದ ಆ್ಯನಿಮಲ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೂಲ್ ಬೂಲಯ್ಯ 2, ಆಶಿಖಿ, ತಪ್ಪಡ್ ಸೇರಿದಂತೆ ಬಾಕ್ಸ್ ಆಫೀಸ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಸಾಯುವ ಮುನ್ನ ನಟಿ ಶ್ರೀದೇವಿಯ ಕೊನೆಯ ಆಸೆ ಕೈಗೂಡಲೇ ಇಲ್ಲ; ಹಣೆಬರಹ ಅಂದ್ರೆ ಅದೇನಾ?

ಆಜಾ ಮೇರಿ ಜಾನ್, ಕಸಮ್ ತೇರಿ ಕಸಮ್, ಶಬ್ನಮ್, ಬೇವಫಾ ಸನಮ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ 2000 ಇಸವಿಯಲ್ಲಿ ತೆರೆ ಕಂಡ ಪಾಪಾ ದಿ ಗ್ರೇಟ್ ಚಿತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಬಳಿಕ ಬಾಲಿವುಡ್ ಚಿತ್ರ ನಿರ್ಮಾಣದ ಮೂಲಕ ಯಶಸ್ಸು ಕಂಡಿದ್ದಾರೆ. ಕೃಷ್ಣ ಕುಮಾರ್ ಆಪ್ತ ಸಂಬಂಧಿ ಭೂಷಣ್ ಕುಮಾರ್ ಟಿ ಸೀರಿಸ್ ಕಂಪನಿಯ ಮುಖ್ಯಸ್ಥರಾಗಿದ್ದಾರೆ. ಸೆಲೆಬ್ರಿಟಿ ಕುಟುಂಬ ಕುಡಿ ತಿಶಾ 21ರ ಹರೆಯದಲ್ಲೇ ಮಾರಕ ಆರೋಗ್ಯ ಸಮಸ್ಯೆಗೆ ತುತ್ತಾಗಿ ನಿಧನವಾಗಿರುವುದು ಬಾಲಿವುಡ್ ಲೋಕಕ್ಕೆ ಶಾಕ್ ಆಗಿದೆ!

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?