ಕಟ್ಟಪ್ಪ ಬಾಹುಬಲಿನ ಕೊಂದಿದ್ದು ಯಾಕೆಂದು ಈಗ ಗೊತ್ತಾಯ್ತು ಎಂದು 'ಆದಿಪುರುಷ್' ನೋಡಿ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪ್ರಭಾಸ್ ಕಾಲೆಳೆದಿದ್ದಾರೆ.
ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ತೆಲುಗು ಮತ್ತು ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಆದಿಪುರುಷ್ ತೆರೆಗೆ ಬಂದಿದೆ. ಜೂನ್ 16ಕ್ಕೆ ರಿಲೀಸ್ ಆದ ಆದಿಪುರುಷ್ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಸಿನಿಮಾ ನೋಡಿ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಅನೇಕ ಕಲಾವಿದರೂ ಕೂಡ ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾದ ವಿಎಕ್ಸ್‌ಎಫ್, ಡೈಲಾಗ್, ಪಾತ್ರಗಳ ಚಿತ್ರಣ ಸೇರಿದಂತೆ ಅನೇಕ ವಿಚಾರಗಳಿಗೆ ಆದಿಪುರುಷ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಬಾಲಿವುಡ್ ನಟಿ ಕಂಗನಾ ಸೇರಿದಂತೆ ಅನೇಕ ಕಲಾವಿದರು ಸಿನಿಮಾದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ ಆ ಸಾಲಿಗೆ ಮಾಡಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಸೇರಿಕೊಂಡಿದ್ದಾರೆ.
ಆದುಪುರುಷ್ ಸಿನಿಮಾ ವೀಕ್ಷಿಸಿದ ಸೆಹ್ವಾಗ್ ಸಿನಿಮಾತಂಡದ ಕಾಲೆಳೆದಿದ್ದಾರೆ. ಚಿತ್ರ ನೋಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಿದ್ದಾರೆ. ಒಂದೇ ಸಾಲಿನಲ್ಲಿ ಸಿನಿಮಾ ಹೇಗಿದೆ ಎಂದು ವಿವರಿಸಿದ್ದಾರೆ. ಪ್ರಭಾಸ್ ಆದಿಪುರುಷ್ ಸಿನಿಮಾಗೆ ಬಾಹುಬಲಿ ಸಿನಿಮಾದ ಲಿಂಕ್ ಮಾಡಿ ವಿಮರ್ಶೆ ಮಾಡಿದ್ದಾರೆ. 'ಆದಿಪುರುಷ್ ಸಿನಿಮಾ ನೋಡಿದ ನಂತರ ಗೊತ್ತಾಯಿತು ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದಿದ್ದಾನೆಂದು' ಎಂದು ಬರೆದುಕೊಂಡಿದ್ದಾರೆ.
2015ರಲ್ಲಿ ಬಂದ ಬ್ಲಾಕ್‌ಬಸ್ಟರ್ ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ತನ್ನ ಚಿಕ್ಕಪ್ಪನ ಕೈಯಲ್ಲೇ ಸಾಯುತ್ತಾನೆ. ಇದು ಪಾರ್ಟ್ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂತೆ ಮಾಡಿತ್ತು. ಬಳಿಕ ಪಾರ್ಟ್-2ನಲ್ಲಿ ರಿವೀಲ್ ಮಾಡಲಾಗಿತ್ತು. ಬಾಹುಬಲಿ ಸಿನಿಮಾದ ಕಥೆಯನ್ನು ಸೆಹ್ವಾಗ್ ಆದಿಪುರುಷ್ ಸಿನಿಮಾಗೆ ಲಿಂಕ್ ಮಾಡಿ ಟ್ರೋಲ್ ಮಾಡಿದ್ದಾರೆ. ಈ ಮೂಲಕ ವೀರೆಂದ್ರ ಸೆಹ್ವಾಗ್ ಕೂಡ ಸಿನಿಮಾದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
Adipurush Contraversy: ಹನುಮಂತ ದೇವ್ರೇ ಅಲ್ಲ ಎಂದವರಿಗೆ ಕೊಲೆ ಬೆದರಿಕೆ- ಬಿಗಿ ಪೊಲೀಸ್ ಬಂದೋಬಸ್ತ್!
ಸೆಹ್ವಾಗ್ ಅವರ ಕಾಮೆಂಟ್‌ಗೆ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬಂದಿದೆ. ಆದರೆ ಇದು ಪ್ರಭಾಸ್ ಅಭಿಮಾನಿಗಳ ಅಸಮಾದಾಕ್ಕೆ ಕಾಣವಾಗಿದೆ. ಕೆಲವರು ಸೆಹ್ವಾಗ್ ಅವರ ಬೆಂಬಲಕ್ಕೆ ನಿಂತರೆ ಇನ್ನೂ ಕೆಲವರು ಬೇಸರ ಹೊರಹಾಕುತ್ತಿದ್ದಾರೆ. ಪ್ರಭಾಸ್ ಅವರಿಗೆ ಅಗೌರವ ತೋರಬೇಡಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಪ್ರಭಾಸ್ ಅವರ ಜೀವನ ಬಾಹುಬಲಿಯಿಂದ ಪ್ರಾರಂಭವಾಗಿ ಬಾಹುಬಲಿಗೆ ಅಂತ್ಯವಾಯಿತು ಎಂದು ಹೇಳುತ್ತಿದ್ದಾರೆ.
Adipurush: ಟ್ರೋಲ್, ಬ್ಯಾನ್ ನಡುವೆಯೂ ಚಿತ್ರ ವೀಕ್ಷಿಸಲು ಇಡೀ ಚಿತ್ರಮಂದಿರ ಬುಕ್ ಮಾಡಿದ 'ಆದಿಪುರುಷ್' ಸೀತೆ ಕೃತಿ
ಆದುಪುರುಷ್ ಸಿನಿಮಾಗೆ ನೆಗೆಟಿವ್ ಕಾಮೆಂಟ್ ಬರುತ್ತಿದ್ದರು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದೆ. ಮೊದಲ 3 ದಿನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಭರ್ಜಿಯಾಗಿತ್ತು. ಆದರೆ ಬಳಿಕ ನಿಧಾನಗತಿಯಲ್ಲಿ ಕಲೆಕ್ಷನ್ ಮುಗ್ಗರಿಸಿದೆ. ಸಿಕ್ಕಾಪಟ್ಟೆ ಟ್ರೋಲ್ ಮತ್ತು ಮೀಮ್‌ಗಳು ಹರಿದಾಡುತ್ತಿದ್ದರೂ ಪ್ರಭಾಸ್ ಯಾವುದೇ ಪ್ರತಿಕ್ರಿಯೆ ನೀಡದೆ ಸೈಲೆಂಟ್ ಆಗಿರುವುದು ಅಚ್ಚರಿ ಮೂಡಿಸಿದೆ.