ಶಾರುಖ್‌ ಜೊತೆ ಅನುಷ್ಕಾ ಶರ್ಮಾ ಮೊದಲ ಸಿನಿಮಾ; ತಂದೆ-ತಾಯಿಯಿಂದ ಸತ್ಯ ಮುಚ್ಚಿಡುವಂತೆ ಒತ್ತಾಯಿಸಿದ ನಿರ್ದೇಶಕ

Published : Feb 18, 2023, 11:30 AM IST
ಶಾರುಖ್‌ ಜೊತೆ ಅನುಷ್ಕಾ ಶರ್ಮಾ ಮೊದಲ ಸಿನಿಮಾ; ತಂದೆ-ತಾಯಿಯಿಂದ ಸತ್ಯ ಮುಚ್ಚಿಡುವಂತೆ ಒತ್ತಾಯಿಸಿದ ನಿರ್ದೇಶಕ

ಸಾರಾಂಶ

ಚೊಚ್ಚಲ ಚಿತ್ರದ ಬಗ್ಗೆ ಯಾರಿಗೂ ಹೇಳದಂತೆ ಅನುಷ್ಕಾ ಶರ್ಮಾ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ ಆದಿತ್ಯಾ ಚೋಪ್ರಾ. 

ಬಾಲಿವುಡ್ ಕಿಂಗ್‌ ಶಾರುಖ್ ಖಾನ್‌ ಜೊತೆ ನಟಿಸುವ ಮೂಲಕ ಅನುಷ್ಕಾ ಶರ್ಮಾ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ತಮ್ಮ ಮೊದಲ ಚಿತ್ರದಲ್ಲಿ ಅನುಷ್ಕಾ ನೇಮ್ ಆಂಡ್ ಫೇಮ್‌ ಗಳಿಸುವಂತೆ ಮಾಡಿದ್ದು ನಿರ್ದೇಶಕ ಆದಿತ್ಯಾ ಚೋಪ್ರಾ. ಆದರೆ ಅನುಷ್ಕಾ ಮೊದಲ ಸಿನಿಮಾದ ಬಗ್ಗೆ ತಂದೆ ತಾಯಿಗೂ ಹೇಳಬಾರದು ಎಂದು ನಿರ್ದೇಶಕರು ಆಗ ಹಾಕಿದ ನಿರ್ಬಂಧ ಈಗ ಬೆಳಕಿಗೆ ಬಂದಿದೆ.  ಈ ವಿಚಾರದ ಬಗ್ಗೆ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಅನುಷ್ಕಾ ರಿವೀಲ್ ಮಾಡಿದ್ದಾರೆ.

'Rab Ne Bana Di Jodi ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿತ್ತು. ಯಾರಿಗೂ ಈ ಚಿತ್ರದ ಬಗ್ಗೆ ಗೊತ್ತಿರಲಿಲ್ಲ. ನಾನು ಶಾರುಖ್‌ ಖಾನ್‌ಗೆ ಜೋಡಿ ಮತ್ತು ಈ ಚಿತ್ರದ ಲೀಡ್ ನಟಿ ಎನ್ನುವ ಸತ್ಯ ಯಾರಿಗೂ ಹೇಳಬಾರದು ಎಂದು ಆದಿ ಹೇಳಿದ್ದರು. ಅಷ್ಟೆ ಅಲ್ಲ ಯಾರಿಗೂ ಹೇಳಬಾರದು ಎನ್ನುವ ಅರ್ಥ ಏನೆಂದರೆ ನನ್ನ ತಂದೆ ತಾಯಿಗೂ ಹೇಳಬಾರದು ಎನ್ನುವ ಅರ್ಥ' ಎಂದು ಅನುಷ್ಕಾ ಶರ್ಮಾ ಮಾತನಾಡಿದ್ದಾರೆ. 

2008ರಲ್ಲಿ ರೋಮ್ಯಾಂಟಿಕ್ ಕಾಮಿಡಿ ರಬ್ ನೆ ಬನಾ ದಿ ಜೋಡಿ ಸಿನಿಮಾ ರಿಲೀಸ್ ಆಗಿತ್ತು. ಬಬ್ಲಿ ಹುಡುಗಿ ತನು (ಅನುಷ್ಕಾ ಶರ್ಮಾ) ಪ್ರೀತಿಸುವ ಸರಳ ವ್ಯಕ್ತಿ ಸುರಿಂದರ್‌ (ಶಾರುಖ್ ಖಾನ್) ಸುತ್ತ ಸುತ್ತುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಆಕೆಯನ್ನು ಮದುವೆಯಾಗುತ್ತಾನೆ. ತನುಗೆ ಮಾಡರ್ನ್‌ ಹುಡುಗ ಅಂದ್ರೆ ತುಂಬಾನೇ ಇಷ್ಟ ಹೀಗಾಗಿ ಸುರಿಂದರ್‌ನ ದೂರು ಇಡುವ ಪ್ರಯತ್ನ ಮಾಡುತ್ತಾಳೆ ಆದರೆ ತನು ಹತ್ತಿರವಾಗಬೇಕು ಎಂದು ರಾಜ್‌ ಮೇಕ್‌ಓವರ್ ಮಾಡಿಕೊಂಡು ಆಕೆಯ ಡ್ಯಾನ್ಸ್‌ ಪಾರ್ಟ್‌ನರ್ ಅಗುತ್ತಾನೆ. ಕೊನೆಯಲ್ಲಿ ಸತ್ಯ ತಿಳಿದು ತನು ಸುರಿಂದರ್‌ನ ಒಪ್ಪಿಕೊಳ್ಳುತ್ತಾಳೆ. 

'ಕಂಪನಿಂದ ನಾನು ಒಂದಾದರೂ ಸೂಪರ್ ಹಿಟ್ ಸಿನಿಮಾ ನೀಡಬೇಕು ಎಂದು ಪ್ಲ್ಯಾನ್ ಮಾಡಿ ರಬ್ ನೆ ಬನಾ ದಿ ಜೋಡಿ ಸಿನಿಮಾ ನಿರ್ದೇಶನ ಮಾಡಿದೆ' ಎಂದು ಮಾತು ಆರಂಭಿಸುವ ಆದಿತ್ಯಾ ಚಿತ್ರಕಥೆ ಬರೆಯಲು ಲಂಡನ್‌ಗೆ ಪ್ರಯಾಣ ಮಾಡುತ್ತಾರೆ ಆಗ ದಾಂಪತ್ಯ ಜೀವನದಲ್ಲಿ ಖುಷಿ ಇಲ್ಲದೆ ಒಟ್ಟಿಗೆ ಇರುವ ಜೋಡಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ ಅಲ್ಲದೆ ಪತ್ನಿಗಾಗಿ ಅದೆಷ್ಟೋ ಗಂಡಸರು ಬದಲಾಗಿರುವುದು ಬೆಳಕಿಗೆ ಬರುತ್ತದೆ. 'ಸಿನಿಮಾ ನೋಡಿದಾಗ ಎಲ್ಲರಿಗೂ ಕಾಡುತ್ತಿದ ಪ್ರಶ್ನೆ ಹೇಗೆ ಆಕೆ ರಾಜ್‌ನ ಕಂಡು ಹಿಡಿಯುವುದಿಲ್ಲ ಎಂದು. ಆಕೆ ಕಂಡು ಹಿಡಿದಿದ್ದರೆ ಖಂಡಿತ ಸಿನಿಮಾ ಸೋಲುತ್ತಿತ್ತು'ಎಂದು ಆದಿತ್ಯಾ ಹೇಳಿದ್ದಾರೆ. ಈ ಕಥೆ ಬಗ್ಗೆ ಶಾರುಖ್‌ ಜೊತೆ ಚರ್ಚೆ ಮಾಡಿದಾಗ ಒಂದೇ ಮಾತುಕಥೆಯಲ್ಲಿ ಒಪ್ಪಿಕೊಂಡರಂತೆ. 

 

ಅಯ್ಯೋ..! ವಮಿಕಾ ಫ್ರಾಕ್ ಹಾಕೊಂಡ್ರಾ? ಅನುಷ್ಕಾ ಶರ್ಮಾ ಸಖತ್ ಟ್ರೋಲ್

ರಬ್ ನೆ ಬನಾ ದಿ ಜೋಡಿ ಸಿನಿಮಾ ಹಿಟ್ ಆಗುತ್ತಿದ್ದಂತೆ ಇಂಟ್ರೆಸ್ಟಿಂಗ್‌ ಕಥೆಗಳು ಅನುಷ್ಕಾ ಶರ್ಮಾರನ್ನು ಹುಡುಕಿಕೊಂಡು ಬಂದಿತ್ತು.  ಎರಡನೇ ಸಿನಿಮಾ ಅಷ್ಟಕ್ಕೆ ಅಷ್ಟೆ ಆದರೆ ಮೂರನೇ ಸಿನಿಮಾ ಬ್ಯಾಂಡ್ ಬಾಜಾ ಬಾರಾತ್ ಬಂಪರ್ ಹಿಟ್ ಕಂಡಿತ್ತು. ರಣವೀರ್ ಸಿಂಗ್ ಚೊಚ್ಚಲ ಸಿನಿಮಾ ಇದಾಗಿತ್ತು ಈ ಜೋಡಿ ಒಲ್ಳೆ ಕಥೆ ಕ್ರಿಯೇಟ್ ಮಾಡಿತ್ತು. 

ವೃಂದಾವನ ಆಶ್ರಮದಲ್ಲಿ ವಮಿಕಾ ಜೊತೆ ಅನುಷ್ಕಾ-ವಿರಾಟ್; ವಿಶೇಷ ಪೂಜೆ ಸಲ್ಲಿಸಿದ ಸ್ಟಾರ್ ದಂಪತಿ ಫೋಟೋ ವೈರಲ್

ಸದ್ಯ ಅನುಷ್ಕಾ ಶರ್ಮಾ Chakda Xpress ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಜೀವನ ಚರಿತ್ರೆಯಲ್ಲಿ ಇದಾಗಿದ್ದು ಪ್ರೋಸಿತ್ ರಾಯ್ ನಿರ್ದೇಶನ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಶರ್ಮಾ ತಮ್ಮ ಬ್ಯಾನರ್‌ ಕ್ಲೀನ್‌ ಸ್ಲೇಟ್‌ ಫಿಲ್ಮ್‌ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಓಟಿಟಿಯಲ್ಲಿ ರಿಲೀಸ್ ಆಗಲಿದ್ದು ಶೀಘ್ರದಲ್ಲಿ ದಿನಾಂಕ ಅನೌನ್ಸ್ ಮಾಡಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?