ಪತ್ನಿ ಜೊತೆ ಆ ಮೊಮೆಂಟ್ ಅನುಭವಿಸ್ಬೇಕು: ಪೆಟರ್ನಿಟಿ ಲೀವ್ ತಗೊಳ್ತಿದ್ದಾರೆ ಕೊಹ್ಲಿ..!

Suvarna News   | Asianet News
Published : Nov 28, 2020, 11:29 AM ISTUpdated : Nov 28, 2020, 12:09 PM IST
ಪತ್ನಿ ಜೊತೆ ಆ ಮೊಮೆಂಟ್ ಅನುಭವಿಸ್ಬೇಕು: ಪೆಟರ್ನಿಟಿ ಲೀವ್ ತಗೊಳ್ತಿದ್ದಾರೆ ಕೊಹ್ಲಿ..!

ಸಾರಾಂಶ

ಹೆಣ್ಮಕ್ಕಳು ಗರ್ಭಿಣಿಯಾಗಿ ಇನ್ನೇನು ಪ್ರಸವದ ದಿನ ಸಮೀಪಿಸಿದಾಗ ಮೆಟರ್ನಿಟಿ ಲೀವ್ ತಗೊಳ್ತಾರೆ. ಇದೀಗ ವಿರಾಟ್ ಕೊಹ್ಲಿ ಪತ್ನಿ ಮತ್ತು ಮಗುವಿಗಾಗಿ ಪೆಟರ್ನಿಟಿ ಲೀವ್ ತಗೊಳ್ತಿದ್ದಾರೆ

ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೆಗ್ನೆನ್ಸಿ ನಡುವೆ ಕೆಲಸ ಮಾಡ್ತಾ ನಟಿ ಅನುಷ್ಕಾ ಸುದ್ದಿಯಾಗ್ತಿದ್ರೆ ಇದೀಗ ಕೊಹ್ಲಿ ತಮ್ಮ ನಿರ್ಧಾರವೊಂದರಿಂದ ಸುದ್ದಿಯಾಗಿದ್ದಾರೆ.

ಹೆಣ್ಮಕ್ಕಳು ಮೆಟರ್ನಿಟಿ ಲೀವ್ ತಗೊಳೋದು ಗೊತ್ತು. ಆದ್ರೆ ವಿರಾಟ್ ಪೆಟರ್ನಿಟಿ ಲೀವ್ ತಗೊಳ್ತಿದ್ದಾರೆ. ಮಗು ಹುಟ್ಟು ಮೊಮೆಂಟ್ ಪತ್ನಿ ಜೊತೆ ಅನುಭವಿಸಬೇಕು ಎನ್ನುವ ಕೊಹ್ಲಿ ಪೆಟರ್ನಿಟಿ ಲೀವ್ ತಗೊಳೋ ನಿರ್ಧಾರದ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಯೆಲ್ಲೋ ಡ್ರೆಸ್‌ನಲ್ಲಿ ಅನುಷ್ಕಾ..! ಕ್ಯಾಮೆರಾ ಫ್ಲಾಶ್ ಆಗ್ತಿದ್ದಂತೆ ಬ್ಯೂಟಿಫುಲ್ ಸ್ಮೈಲ್ ಕೊಟ್ಟ ಕೊಹ್ಲಿ ಪತ್ನಿ

ಪತ್ನಿ ಮೊದಲ ಮಗುವಿಗೆ ಜನ್ಮ ನೀಡೋ ಸಂದರ್ಭ ತಾನು ಜೊತೆಗಿರಬೇಕೆಂಬ ಉದ್ದೇಶದಿಂದ ಕೊಹ್ಲಿ ಆಸ್ಟ್ರೇಲಿಯಾ ಟೆಸ್ಟ್‌ ಸಿರೀಸ್‌ ಟೂರ್ ಕ್ಯಾನ್ಸಲ್ ಮಾಡಿದ್ದಾರೆ. ಮಗು ಹುಟ್ಟೋ ಸುಂದರ ಘಳಿಗೆಯನ್ನು ಅನುಭವಿಸಬೇಕೆಂಬುದು ಕೊಹ್ಲಿ ಅಭಿಪ್ರಾಯ.

ಈ ನಡುವೆ ಅನುಷ್ಕಾ ಬೇಬಿ ಬಂಪ್ ಸ್ಟೈಲ್ ಮೂಲಕ ಸುದ್ದಿಯಾಗ್ತಿದ್ದಾರೆ. ಕೊನೆದಾಗಿ ಝೀರೋ ಸಿನಿಮಾದಲ್ಲಿ ಕಾಣಿಸ್ಕೊಂಡ ನಟಿ, ಸದ್ಯ ತಮ್ಮ ಫ್ಯಾಷನೆಬಲ್ ಡ್ರೆಸ್‌ ಮೂಲಕ ಸುದ್ದಿಯಾಗ್ತಿದ್ದಾರೆ.

ಅನುಷ್ಕಾ ಮುಖದಲ್ಲಿ ಹೊಸ ಕಳೆ: ಆ್ಯಡ್ ಶೂಟ್‌ಗೆ ಬಂದ ನಟಿ ಕಂಡಿದ್ದು ಹೀಗೆ

ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಜೋಡಿಯೂ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕರೀನಾ ಕಪೂರ್ ಕೂಡಾ ತಮ್ಮ ಮೆಟರ್ನಿಟಿ ಫ್ಯಾಷನ್ ಮೂಲಕ ಸುದ್ದಿಯಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮೈಸೂರಿನಲ್ಲಿ ಕಿಚ್ಚನ ಹವಾ; 'ಮಾರ್ಕ್' ಸಕ್ಸಸ್ ಬೆನ್ನಲ್ಲೇ ಅಭಿಮಾನಿಗಳ ಜೊತೆ ಸುದೀಪ್ ಸಿನಿಮಾ ವೀಕ್ಷಣೆ!
'ಅವಳೇ ನನ್ನ ಜೀವನದ ಆಧಾರ ಸ್ತಂಭ'.. ಹೆಂಡ್ತಿ ಬಗ್ಗೆ ಹೀಗ್ ಹೇಳಿದ ರಣವೀರ್ ಸಿಂಗ್; ನೆಟ್ಟಿಗರು ಹೇಳೋದೇನು?