
ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಅವರ ಕಿರಿಯ ಮಗಳು ಅಹಾನಾ ಡಿಯೋಲ್ ವೊಹ್ರಾ ನವೆಂಬರ್ 26ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಹಾನಾ ಮತ್ತು ಅವರ ಪತಿ ವೈಭವ ವೊಹ್ರಾ ತಮ್ಮ ಅವಳಿ ಮಕ್ಕಳಿಗೆ ಅಸ್ತ್ರಯಾ ಮತ್ತು ಅಡಿಯಾ ವೋಹ್ರಾ ಎಂದು ಹೆಸರಿಟ್ಟಿದ್ದಾರೆ. ಅಹಾನಾ ಅವರು ಇನ್ನಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ.
ಅಹಾನಾ ಅವರು ಅವರ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಈ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಕೆಲವು ಅದ್ಭುತಗಳು ಜೋಡಿಯಾಗಿ ಬರುತ್ತವೆ. ನಮ್ಮ ಇಬ್ಬರು ಅವಳಿ ಹೆಣ್ಮಕ್ಕಳ ಜನನದ ಬಗ್ಗೆ ಹೇಳಲು ಖುಷಿಯಾಗುತ್ತಿದೆ ಎಂದಿದ್ದಾರೆ. ಅವರ ಪೋಸ್ಟ್ ಹೀಗಿದೆ ನೋಡಿ.
ಬಾಲಿವುಡ್ ನಟಿ ಇಶಾ ಡಿಯೋಲ್ ಅವರ ಸಹೋದರಿ ಅಹಾನಾ ಡಿಯೋಲ್ ಉದ್ಯಮಿ ವೈಭವ್ ವೊಹ್ರಾ ಅವರನ್ನು ವರಿಸಿದ್ದರು. 2014 ಫೆಬ್ರವರಿ 2ರಂದು ಇವರ ವಿವಾಹವಾಗಿತ್ತು.
ಕೋಲ್ಡ್ ಶೋಲ್ಡರ್ ವೈಟ್ ಕ್ರಾಪ್ ಟಾಪ್‌ನಲ್ಲಿ ಸನ್ನಿ ಲಿಯೋನ್ ಕಂಡಿದ್ದು ಹೀಗೆ
2015 ಜೂನ್‌ನಲ್ಲಿ ಈ ಜೋಡಿ ಮೊದಲ ಮಗುವನ್ನು ಸ್ವಾಗತಿಸಿದ್ದರು. ಅಹಾನಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಗುಝಾರಿಶ್ ಸಿನಿಮಾದಲ್ಲಿ ನೆರವಾಗಿದ್ದರು. ಇದರಲ್ಲಿ ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.