2017ರಲ್ಲಿ ಅಗಲಿರುವ ಹಿರಿಯ ನಟ ವಿನೋದ್ ಖನ್ನಾ ಅವರ ಹುಟ್ಟುಹಬ್ಬವಿಂದು. ಈ ನಿಮಿತ್ತ ಅವರ ಲವ್ ಸ್ಟೋರಿಯ ರೋಚಕ ಕಥೆ ಇಲ್ಲಿದೆ.
ಬಾಲಿವುಡ್ನ ಹಿರಿಯ ನಟ ವಿನೋದ್ ಖನ್ನಾ ಎಲ್ಲರನ್ನೂ ಅಗಲಿ ಐದು ವರ್ಷಗಳೇ ಕಳೆದಿವೆ. ಇಂದು (ಅಕ್ಟೋಬರ್ 6) ಅವರ ಜನುಮ ದಿನ. 1968ರಲ್ಲಿ ಮನ್ ಕಾ ಮೀತ್ ಚಿತ್ರದ ಮೂಲಕ ವಿನೋದ್ ಖನ್ನಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ಸುನಿಲ್ ದತ್ತ ಅವರಿಗೆ ಖಳನಾಯಕರಾಗಿ ಅಭಿನಯಿಸಿದ್ದರು. ನಂತರ ಹಲವಾರು ಚಿತ್ರಗಳಲ್ಲಿ ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ಹಮ್ ತುಮ್ ಔರ್ ವೋ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮರ್ ಅಕ್ಬರ್ ಆಂಟೋನಿ, ಪರ್ವರಿಷ್, ಹೇರಾ ಫೇರಿ, ಮುಖ್ದಾರ್ ಕಾ ಸಿಕಂದರ್ ಇನ್ನೂ ಮುಂತಾದ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ವಿನೋದ್ ಅಭಿನಯಿಸಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ದಬಂಗ್ ಚಿತ್ರದಲ್ಲೂ ವಿನೋದ್ ಖನ್ನಾ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಕೊನೆಯದಾಗಿ ಶಾರೂಖ್ ಖಾನ್ ಹಾಗೂ ಕಾಜೋಲ್ ಅಭಿನಯದ ದಿಲ್‍ವಾಲೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟರಾಗಿ ಅಷ್ಟೇ ಅಲ್ಲದೆ ರಾಜಕಾರಣಿಯಾಗಿಯೂ ವಿನೋದ್ ಖನ್ನಾ ಗುರುತಿಸಿಕೊಂಡವರು. ಪಂಜಾಬ್‍ನ ಗುರುದಾಸ್‍ಪುರ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು.
ಇದೀಗ ಅವರ ಎರಡನೆಯ ಪತ್ನಿ ಕವಿತಾ ಮತ್ತು ವಿನೋದ್ ಅವರ ಇಂಟರೆಸ್ಟಿಂಗ್ ಲವ್ ಸ್ಟೋರಿಯ ವಿಷ್ಯ ಬೆಳಕಿಗೆ ಬಂದಿದೆ. ಓಶೋ ರಜನೀಶ್ ಅವರನ್ನು ಅನುಸರಿಸಲು ಮೊದಲ ಪತ್ನಿ ಗೀತಾಂಜಲಿ ಮತ್ತು ಮಕ್ಕಳನ್ನು ತೊರೆದು ಆಶ್ರಮ ಸೇರಿದ್ದರು ವಿನೋದ್. ಆದರೆ ಆಶ್ರಮ ಕುಸಿದು ಬಿದ್ದಿದ್ದರಿಂದ ಪುನಃ ಮಕ್ಕಳನ್ನು ನೋಡಲು ಹೋದರು. ಪತ್ನಿ ಗೀತಾಂಜಲಿ ಜೊತೆ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ. ಆದ್ದರಿಂದ ಪ್ರೀತಿಗಾಗಿ ಹಂಬಲಿಸುತ್ತಿದ್ದರು. ಆಗ ಅವರಿಗೆ ಸಿಕ್ಕಿದ್ದು ಕವಿತಾ. ಆಕಸ್ಮಿಕವಾಗಿ ಕವಿತಾ ಅವರನ್ನು ಪಾರ್ಟಿಯಲ್ಲಿ ಭೇಟಿಯಾದರು. ಅಷ್ಟಕ್ಕೂ ವಿನೋದ್ ಮತ್ತು ಕವಿತಾ ಬೇರೆ ಬೇರೆ ಲೋಕದಿಂದ ಬಂದವರು. ವಿನೋದ್ ಆಗಲೇ ನಟನಾ ಕ್ಷೇತ್ರದ ಉತ್ತುಂಗದಲ್ಲಿದ್ದರು. ಲಕ್ಷಾಂತರ ಜನರಿಂದ ಪ್ರೀತಿಸಲ್ಪಟ್ಟ ಚಲನಚಿತ್ರ ತಾರೆಯಾಗಿದ್ದರು. ಕವಿತಾ ಬ್ಯಾರಿಸ್ಟರ್ ಆಗಿದ್ದವರು, ಉನ್ನತ ಶಿಕ್ಷಣ ಪಡೆದವರು. ಮೊದಲ ನೋಟಕ್ಕೆ ಪ್ರೇಮವಾಗಲಿಲ್ಲ. ಆದರೆ ವಿನೋದ್ಗೆ ಕವಿತಾರ ಮೇಲೆ ಏನೋ ಆಕರ್ಷಣೆ ಹುಟ್ಟಿತ್ತು. ಅನೇಕ ಬಾರಿ ಕವಿತಾರನ್ನು ಸಂಪರ್ಕಿಸಲು ಬಯಸಿದರೂ ಅವರು ಅದನ್ನು ಕಡೆಗಣಿಸುತ್ತಿದ್ದರು.
ಪತ್ನಿ ಮತ್ತು ಪ್ರಿಯಕರನ ಕೊಲೆ ಮಾಡಿದ್ರಂತೆ ಸಂಜಯ್ ದತ್: ನಟನಿಂದ ಶಾಕಿಂಗ್ ವಿಷ್ಯ ರಿವೀಲ್!
ಆಗ ಸಿನಿಮಾದಲ್ಲಿ ವಿನೋದ್ ಲವರ್ ಬಾಯ್ ಎನಿಸಿಕೊಂಡಿದ್ದರು. ಆದರೆ ಕವಿತಾ ಅವರ ಬಲೆಗೆ ಬಿದ್ದಿರಲಿಲ್ಲ. ಆದರೂ ಪಟ್ಟುಬಿಡದೇ ಕವಿತಾರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದರು. ಹೀಗೆ ನಿಧಾನವಾಗಿ ಮಾತುಕತೆ ಶುರುವಾಗಿ, ಪ್ರೇಮ ಮೊಳಗಿತು. ಕವಿತಾ ವಿನೋದ್ರನ್ನು ಮದುವೆಯಾಗಲು ನಿರ್ಧರಿಸಿದರು. ಆಗ ಅವರಿಗೆ 28 ವರ್ಷ ವಯಸ್ಸು. ಆದರೆ ವಿನೋದ್ ಮೊದಲೇ ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು. ನಾನು ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲವೆಂದು. ಇದು ಕವಿತಾರ ಕುಟುಂಬವನ್ನು ಚಿಂತೆಗೀಡು ಮಾಡಿತ್ತು. ಏಕೆಂದರೆ ಹೇಳಿ ಕೇಳಿ ಉತ್ತುಂಗದಲ್ಲಿರುವ ನಟ. ನಾಳೆ ಮಗಳಿಗೆ ಕೈಕೊಟ್ಟುಬಿಟ್ಟರೆ ಎನ್ನುವ ಭಯ ಇತ್ತು. ಆದರೆ ಕವಿತಾ ಅವರಿಗೆ ವಿನೋದ್ ಮೇಲೆ ಗಾಢವಾದ ಪ್ರೀತಿ ಇತ್ತು. ಅವರ ಮೇಲೆ ನಂಬಿಕೆ ಇತ್ತು. ಕವಿತಾರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದ ವಿನೋದ್ ತಮ್ಮ ಮನಸ್ಸನ್ನು ಬದಲಾಯಿಸಿದರು. ಆಕೆಯನ್ನು ಹೆಚ್ಚು ಆಳವಾಗಿ ಪ್ರೀತಿಸಿದರು. ಕೊನೆಗೂ ಮದುವೆಯಾಗೋಣವಾ ಎಂದು ಬೆವರುತ್ತಲೇ ಕೇಳಿದೆ ಎಂದು ಒಮ್ಮೆ ವಿನೋದ್ ಆ ದಿನಗಳನ್ನು ನೆನಪಿಸಿಕೊಂಡಿದ್ದದರು. ಇದನ್ನು ಕೇಳಿ ಕವಿತಾ ಅವರಿಗೂ ಅಚ್ಚಿಯಾಗಿತ್ತು. ನಂತರ ಇಬ್ಬರೂ 1990ರಲ್ಲಿ ಮದುವೆಯಾಗಿದ್ದರು.
ಅವರ ಮೊದಲ ಪತ್ನಿ ಗೀತಾಂಜಲಿ ಅವರು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಕುಟುಂಬದ ಫಾರ್ಮ್‌ಹೌಸ್‌ನಲ್ಲಿ ಇದೇ ಕಳೆದ ಡಿಸೆಂಬರ್ನಲ್ಲಿ 70ನೇ ವಯಸ್ಸಿನಲ್ಲಿ ನಿಧನರಾದರು. ಈ ಜೋಡಿಗೆ ಇಬ್ಬರು ಮಕ್ಕಳು.ವಿನೋದ್ ಖನ್ನಾ ಮತ್ತು ಗೀತಾಂಜಲಿ 1985 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.
ಸಸ್ಯಾಹಾರದ ಪ್ರಚಾರಕ್ಕೆ ಮತ್ಸ್ಯಕನ್ಯೆಯಾದ ಪಾಲಕ್: ಸೈಫ್ ಅಲಿ ಪುತ್ರಂಗೂ ನಾನ್ವೆಜ್ ಬಿಡಿಸುವೆಯಾ ಅಂದ ಫ್ಯಾನ್ಸ್!