ವಿಕ್ರಾಂತ್‌ ರೋಣ ಸಿನಿಮಾದ ಗಡಾಂಗ್ ರುಕ್ಕಮ್ಮ ಹಾಡು ಬಿಡುಗಡೆ

Published : May 23, 2022, 10:13 AM ISTUpdated : May 23, 2022, 10:19 AM IST
 ವಿಕ್ರಾಂತ್‌ ರೋಣ ಸಿನಿಮಾದ ಗಡಾಂಗ್ ರುಕ್ಕಮ್ಮ ಹಾಡು ಬಿಡುಗಡೆ

ಸಾರಾಂಶ

ಗಡಾಂಗ್ ರುಕ್ಕಮ್ಮ ಹಾಡು ಬಿಡುಗಡೆ ಐದು ಭಾಷೆಗಳಲ್ಲಿ ಹಾಡು ಬಿಡುಗಡೆ ಸುದೀಪ್ ಹಾಗೂ ಜಾಕ್ವೆಲಿನ್‌ ನಟನೆಯ ಹಾಡು

ನಟ ಸುದೀಪ್‌ ಅವರ ‘ವಿಕ್ರಾಂತ್‌ ರೋಣ’ (Vikranth Rona) ಸಿನಿಮಾ ತೆರೆಗೆ ಬರುವುದಕ್ಕೆ ಹತ್ತಿರವಾಗುತ್ತಿರುವಂತೆ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ವಿತರಣೆ ಹಕ್ಕು, ವಿದೇಶಗಳಲ್ಲಿ ಬಿಡುಗಡೆ ಮಾಡುವ ಪ್ಲಾನು, ಸಲ್ಮಾನ್‌ ಖಾನ್‌ (Salman Khan) ಜತೆಯಾಗಿರುವುದು, ಉತ್ತರ ಭಾರತದ ರಾಜ್ಯಗಳಲ್ಲಿ ಈ ಚಿತ್ರದ ವಿತರಣೆ ಹಕ್ಕು ಪಡದುಕೊಂಡಿರುವ ಪಿವಿಆರ್‌... ಹೀಗೆ ಸಾಕಷ್ಟುವಿಚಾರಗಳಿಂದ ಸುದ್ದಿಯಾಗುತ್ತಿರುವ ‘ವಿಕ್ರಾಂತ್‌ ರೋಣ’ ಈಗ, ಹಾಡಿನ ಸಂಭ್ರಮಕ್ಕೆ ಸಜ್ಜಾಗುತ್ತಿದೆ.

ಈ ಚಿತ್ರದ ‘ಗಡಾಂಗ್‌ ರುಕ್ಕಮ್ಮ’ ಹಾಡು ಅನಾವರಣಗೊಳ್ಳುತ್ತಿದೆ. ಇದು ಚಿತ್ರದ ಮೊದಲ ಹಾಡಾಗಿದೆ. ಒಂದೊಂದು ದಿನ ಒಂದೊಂದು ಭಾಷೆ ಸೇರಿ ಐದು ಭಾಷೆಗಳಲ್ಲಿ ಹಾಡು ಬಿಡುಗಡೆ ಆಗುತ್ತಿದೆ. ಮೊದಲಿಗೆ ಮೇ. 23ಕ್ಕೆ ಕನ್ನಡದಲ್ಲಿ, ಮೇ.24ರಂದು ಹಿಂದಿಯಲ್ಲಿ, (Hindi) ಮೇ.25ಕ್ಕೆ ತೆಲುಗಿನಲ್ಲಿ, ಮೇ.26ಕ್ಕೆ ತಮಿಳಿನಲ್ಲಿ ಹಾಗೂ ಮಲಯಾಳಂನಲ್ಲಿ (Maleyalam)  ಮೇ.27ರಂದು ಹಾಡು ಬಿಡುಗಡೆ ಆಗುತ್ತಿದೆ. ಆ ಮೂಲಕ ವಾರ ಪೂರ್ತಿ ‘ಗಡಾಂಗ್‌ ರುಕ್ಕಮ್ಮ’ ಹಾಡಿನ ಸಂಭ್ರಮ ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.

'ವಿಕ್ರಾಂತ್ ರೋಣ' ಗೆ ಪಿವಿಆರ್ ಸಾಥ್, ಜೋರಾಗಿದೆ ಪವರ್, ಖದರ್..!

ಇದು ಸುದೀಪ್‌ ಹಾಗೂ ಬಾಲಿವುಡ್‌ ಬೆಡಗಿ ಜಾಕ್ವೆಲಿನ್‌ ಫರ್ನಾಡಿಸ್‌ ಕಾಂಬಿನೇಶನ್‌ನ ಹಾಡಾಗಿದೆ. ಈಗಾಗಲೇ ಹಾಡಿನ ಬಿಡುಗಡೆ ಸುದ್ದಿಯನ್ನು ನಟ ಸುದೀಪ್‌ (Actor Sudeep) ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅನೂಪ್‌ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ಶಾಲಿನಿ ಆರ್ಟ್ಸ್‌ (Shalini Arts) ಮೂಲಕ ಜಾಕ್‌ ಮಂಜು (Jack Manju) ಅವರು ನಿರ್ಮಿಸಿದ್ದಾರೆ. ಅಲಾಂಕಾರ್‌ ಪಾಂಡ್ಯನ್‌ (Alankar Pandyan) ಅವರು ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಜುಲೈ 28ರಂದು ಪ್ರಪಂಚದ್ಯಾಂತ ಸಿನಿಮಾ ತೆರೆಗೆ ಬರುತ್ತಿದೆ.

ಒಂದೇ ದಿನ ಹಾಡನ್ನು ಐದು ಭಾಷೆಯಲ್ಲಿ ಬಿಡುಗಡೆ ಮಾಡುವುದಕ್ಕಿಂತ ಒಂದೊಂದು ದಿನ ಒಂದೊಂದು ಭಾಷೆಯಲ್ಲಿ ಬಿಡುಗಡೆ ಮಾಡಿದರೆ ಹೆಚ್ಚು ಜನಕ್ಕೆ ತಲುಪುತ್ತದೆ. ಜತೆಗೆ ಹಾಡಿನ ಬಿಡುಗಡೆ ಸಂಭ್ರಮ ಒಂದು ದಿನಕ್ಕೆ ಸೀಮಿತ ಆಗಬಾರದು ಎನ್ನುವ ಕಾರಣಕ್ಕೆ ಐದು ದಿನ ಹಾಡು ಬಿಡುಗಡೆ ಮಾಡುತ್ತಿದ್ದೇವೆ. ಸುದೀಪ್‌ ಅವರ ಅಭಿಮಾನಿಗಳಿಗೂ ಸೇರಿದಂತೆ ಎಲ್ಲರಿಗೂ ಈ ಹಾಡು ಇಷ್ಟವಾಗುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ.

- ಜಾಕ್‌ ಮಂಜು, ನಿರ್ಮಾಪಕ

ಕಿಚ್ಚನ ಪ್ಯಾನ್ ಇಂಡಿಯಾ ಪಯಣಕ್ಕೆ ಜೊತೆಯಾದ ಸಲ್ಮಾನ್; ವಿಕ್ರಾಂತ್ ರೋಣನ ಜವಾಬ್ದಾರಿ ಹೊತ್ತ ಖಾನ್
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?