ವಿಕ್ರಾಂತ್ ರೋಣ ನಟಿಗೆ ಮಾತೃ ವಿಯೋಗ: ಕಿಮ್ ಫರ್ನಾಂಡಿಸ್ ನಿಧನ

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ತಾಯಿ ಕಿಮ್ ಫರ್ನಾಂಡಿಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 

Vikrant Rona Actress Jacqueline Fernandezs Mother Passes Away

ಬಾಲಿವುಡ್‌ ನಟಿ ಜಾಕ್ವೇಲಿನ್ ಫರ್ನಾಂಡಿಸ್‌ಗೆ ಮಾತೃ ವಿಯೋಗ ಉಂಟಾಗಿದೆ. ಹಾರ್ಟ್ ಸ್ಟ್ರೋಕ್‌ಗೆ ಒಳಗಾಗಿ ಅಸ್ವಸ್ಥರಾಗಿದ್ದ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಾಕ್ವೇಲಿನ್ ತಾಯಿ ಕಿಮ್ ಫರ್ನಾಂಡಿಸ್‌ ಇಂದು ನಿಧನರಾಗಿದ್ದಾರೆ. ಈ ವಿಚಾರವನ್ನು ಜಾಕ್ವೆಲಿನ್ ಅವರ ಏಜೆನ್ಸಿ ಖಚಿತಪಡಿಸಿದೆ. 

ಹೃದಯಾಘಾತಕ್ಕೀಡಾಗಿ ಅಸ್ವಸ್ಥರಾದ ಜಾಕ್ವೆಲಿನ್ ತಾಯಿ ಕಿಮ್ ಫರ್ನಾಂಡಿಸ್ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಕೆಲವು ವಾರಗಳಲ್ಲಿ, ಆಗಾಗ ಜಾಕ್ವೆಲಿನ್ ಆಸ್ಪತ್ರೆಗೆ ಭೇಟಿ ನೀಡಿ ತಾಯಿಯನ್ನು ನೋಡುತ್ತಿದ್ದರು. ಆದರೆ ಈಗ ಅವರು ನಿಧನರಾಗಿದ್ದಾರೆ. ಕಳೆದ ತಿಂಗಳು, ಜಾಕ್ವೆಲಿನ್ ಅವರು ತಮ್ಮ ತಾಯಿಗೆ ಅನಾರೋಗ್ಯದ ಕಾರಣ ಗುವಾಹಟಿಯಲ್ಲಿ ನಡೆದ ಐಪಿಎಲ್ ಸಮಾರಂಭದಲ್ಲಿ ಪ್ರದರ್ಶನ ನೀಡುವುದರಿಂದ ತಪ್ಪಿಸಿಕೊಂಡಿದ್ದರು

Latest Videos

ಈ ವೇಳೆ ಜಾಕ್ವೆಲಿನ್ ಅವರ ತಂಡವೂ 'ಜಾಕ್ವೆಲಿನ್ ಅವರ ತಾಯಿ ಇನ್ನೂ ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಕುಟುಂಬವು ವೈದ್ಯರಿಂದ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿರುವಾಗ, ಜಾಕ್ವೆಲಿನ್ ಈ ಸಂದರ್ಭದಲ್ಲಿ ತನ್ನ ತಾಯಿಯ ಪಕ್ಕದಲ್ಲಿರಲು ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ದುರದೃಷ್ಟವಶಾತ್ ಐಪಿಎಲ್ ಸಮಾರಂಭದಲ್ಲಿ ಅವರು ಪ್ರದರ್ಶನ ನೀಡುವುದಕ್ಕೆ ಆಗುತ್ತಿಲ್ಲ' ಎಂದು ಮಾಹಿತಿ ನೀಡಿತ್ತು.

ಹಳೆಯ ಸಂದರ್ಶನವೊಂದರಲ್ಲಿ, ಜಾಕ್ವೆಲಿನ್ ತನ್ನ ತಾಯಿಯ ಬಗ್ಗೆ ಇಂಡಿಯಾ ಟಿವಿಗೆ ಮಾತನಾಡುತ್ತಾ, ಆಕೆ ನನ್ನ ಜೀವನದ ಸ್ಪೂರ್ತಿ ಎಂದು ಹೇಳಿದ್ದರು. ನನ್ನ ತಾಯಿ ಯಾವಾಗಲೂ ನನಗೆ ಬೆಂಬಲ ನೀಡುತ್ತಿದ್ದರು. ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಹೆತ್ತವರಿಲ್ಲದೆ ನಾನು ಇಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ಈ ಇಬ್ಬರು ವ್ಯಕ್ತಿಗಳು ತುಂಬಾ ಬಲಶಾಲಿಗಳಾಗಿದ್ದರು ಮತ್ತು ಅವರು ನನಗೆ ಅಂತಹ ಸ್ಫೂರ್ತಿಯಾಗಿದ್ದರು, ಅವರ ಶಕ್ತಿಯೇ ನನ್ನನ್ನು ಯಾವಾಗಲೂ ಮುಂದುವರಿಸಿಕೊಂಡು ಹೋಗಲು ಶಕ್ತಿ ನೀಡುತ್ತದೆ ಎಂದಿದ್ದರು. 

ನಟಿ ಜಾಕ್ವೆಲಿನ್‌ ಬಹ್ರೇನ್‌ ಮನಾಮದಲ್ಲಿ ಜನಿಸಿದ್ದರು. ಅವರ ತಾಯಿ ಕಿಮ್ ಮಲೇಷಿಯ ಮೂಲದ ಕೆನಡಿಯನ್ ಆಗಿದ್ದರೆ ಅವರ ತಂದೆ ಎಲ್ರಾಯ್ ಫೆರ್ನಾಂಡಿಸ್ ಶ್ರೀಲಂಕಾದವರು. ಕಿಮ್ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಪರಸ್ಪರ ಭೇಟಿಯಾಗಿ ಬಳಿಕ ಮದುವೆಯಾಗಿದ್ದರು.  ನಟಿ ಜಾಕ್ವೆಲಿನ್ ಬಹುಭಾಷಾ ನಟಿಯಾಗಿದ್ದು, ಕನ್ನಡಲ್ಲಿಯೂ ನಟಿಸಿದ್ದಾರೆ. ಕನ್ನಡದ ನಟ ಸುದೀಪ್ ನಟನೆಯ ವಿಕ್ರಾಂತ್ ರೋಣಾದಲ್ಲಿ ನಟಿಸಿದ್ದು, ರಾರಾ ರಕ್ಕಮ್ಮ ಹಾಡಿನ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. 

vuukle one pixel image
click me!