ಮುಕ್ಕಾಲು ದೇಹ ಕಾಣಿಸುವ ಬಟ್ಟೆ ತೊಟ್ಟು ಬಂದು ಪೇಚಿಗೆ ಸಿಲುಕಿದ ನಟಿ ಅನನ್ಯಾ ಪಾಂಡೆಯವರ ಮಾನವನ್ನು ನಟ ವಿಜಯ ದೇವರಕೊಂಡ ಮುಚ್ಚಿದ್ದು ಹೇಗೆ ನೋಡಿ. ವಿಡಿಯೋ ಆಗಿದೆ ವೈರಲ್
ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ? ಫಂಕ್ಷನ್ಗಳಿಗೆ ಹೋಗುವಾಗ, ರೆಡ್ ಕಾರ್ಪೆಟ್ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಇನ್ನು ಕೆಲವು ಸಂದರ್ಭದಲ್ಲಿ ದೇಹಪೂರ್ತಿ ಪ್ರದರ್ಶನ ಆಗುವಂಥ ಬಟ್ಟೆಯನ್ನು ತೊಟ್ಟು, ಅದನ್ನು ಎಳೆದುಕೊಳ್ಳುತ್ತಾ ಇರುವುದು ಕೂಡ ಮಾಮೂಲು. ಕೆಲವು ಸಂದರ್ಭದಲ್ಲಿ ಡ್ರೆಸ್ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.
ಈಗ ನಟಿ ಅನನ್ಯಾ ಪಾಂಡೆಗೂ ಹಾಗೆಯೇ ಆಗಿದೆ. ಸದಾ ಹಾಟ್, ಬೋಲ್ಡ್ ಲುಕ್ನಿಂದಲೇ ಫೇಮಸ್ ಆಗಿರೋ ನಟಿ ಅನನ್ಯಾ ಪಾಂಡೆ, ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ್ಗೆ ತಮ್ಮ ಬೋಲ್ಡ್ ಫೋಟೋಶೂಟ್ಗಳನ್ನು ಶೇರ್ ಮಾಡಿ ಹಲವು ಬಾರಿ ಟ್ರೋಲ್ಗೆ ಒಳಗಾಗುವುದೂ ಇದೆ. ಅನನ್ಯಾ ಪಾಂಡೆ ಬಾಲಿವುಡ್ ಹಿರಿಯ ನಟ ಚಂಕಿ ಪಾಂಡೆ ಮಗಳಾಗಿದ್ದು, ಸ್ಟಾರ್ ಕಿಡ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟವರು. ಕಡಿಮೆ ಸಮಯದಲ್ಲಿಯೇ ನಟಿ ಫೇಮಸ್ ಆದವರು. ನೆಪೊಟಿಸಂ ಪ್ರಾಡಕ್ಟ್ ಆಗಿರುವ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದರೂ ಸಹ ಬಾಲಿವುಡ್ನಲ್ಲಿ ಅನನ್ಯಾಗೆ ಅವಕಾಶಗಳಿಗೇನೂ ಕೊರತೆ ಇಲ್ಲ. ಕರಣ್ ಜೋಹರ್ ಸೇರಿದಂತೆ ಹಲವು ಗಾಡ್ಫಾದರ್ಗಳು ಅನನ್ಯಾಗೆ ಇರುವುದೇ ಇದಕ್ಕೆ ಕಾರಣ ಎನ್ನುವ ಮಾತುಗಳೂ ಇವೆ.
ಇದೀಗ ನಟಿ ಎಲ್ಲವನ್ನೂ ಕಾಣುವ ಬಟ್ಟೆ ತೊಟ್ಟು ಪೇಚಿಗೆ ಸಿಲುಕಿದ್ದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇದು ಕಳೆದ ವರ್ಷದ ವಿಡಿಯೋ ಎಂದು ಹೇಳಲಾಗುತ್ತಿದ್ದರೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟಿಯನ್ನು ವಾಚಾಮಗೋಚರವಾಗಿ ನಿಂದಿಸಲಾಗುತ್ತಿದೆ. ಇದೇ ವೇಳೆ ಇಂಥ ಅಶ್ಲೀಲ ಬಟ್ಟೆಯಿಂದ ನಟಿಯ ಮಾನ ಕಾಪಾಡಲು ನಟ ವಿಜಯ ದೇವರಕೊಂಡ ಮಾಡಿರುವ ಕಾರ್ಯಕ್ಕೂ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದು ಸಿನಿಮಾವೊಂದರ ಪ್ರಮೋಷನ್ ವೇಳೆ ತೆಗೆದಿರುವ ವಿಡಿಯೋ ಎನ್ನಲಾಗಿದೆ. ಅಂದ ಹಾಗೆ ಈ ಜೋಡಿ ‘ಲೈಗರ್’ ಸಿನಿಮಾದಲ್ಲಿ ಒಟ್ಟಿಗೇ ನಟಿಸಿದ್ದರು. ಆ ಸಂದರ್ಭದ ವಿಡಿಯೋ ಇದು ಎಂದು ಹೇಳಲಾಗುತ್ತಿದೆ.
ಇದರಲ್ಲಿ ನಟಿ, ಸ್ಲಿಟ್ ಡ್ರೆಸ್ ಹಾಕಿಕೊಂಡಿದ್ದಾರೆ. ಕೆಳಗಡೆ ತೊಡೆ ಕಾಣುತ್ತಿದ್ದರೆ, ಮೇಲುಗಡೆ ದೇಹ ಪ್ರದರ್ಶನವಾಗುತ್ತಿದೆ. ಆದರೆ ಈ ಡ್ರೆಸ್ ನಟಿಗೆ ಕನ್ಫರ್ಟ್ ಎನಿಸುತ್ತಿರಲಿಲ್ಲ. ಮೇಲೆ-ಕೆಳಗೆ ಎಲ್ಲಾ ಎಳೆದುಕೊಳ್ಳುತ್ತಲೇ ಇದ್ದರು, ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಕ್ಯಾಮೆರಾ ಕಣ್ಣು ತಮ್ಮ ಮೇಲೆ ಇರುತ್ತದೆ ಎಂದು ತಿಳಿದಿದ್ದರಿಂದಲೋ ಏನೋ, ಅದರ ಅರಿವೂ ಇಲ್ಲದೇ ನಟಿ ಬಟ್ಟೆ ಸರಿಪಡಿಸಿಕೊಳ್ಳುತ್ತಲೇ ಇದ್ದರು. ನಟ ವಿಜಯ ದೇವರಕೊಂಡ ನಟಿಯ ಪೇಚಾಟ ಗಮನಿಸುತ್ತಲೇ ಬಂದರು. ಕೂಡಲೇ ವಿಜಯ್ ಅವರು, ನಟಿಯ ಕಾಲನ್ನು ಅತ್ತ ಕಡೆಯಿಂದ ಇತ್ತ ಕಡೆ ತಿರುಗಿಸಿ ನಟಿಯ ಅಂಗ ಪ್ರದರ್ಶನ ಆಗದಂತೆ ತಕ್ಕಮಟ್ಟಿನ ಮುಜುಗರವನ್ನು ತಪ್ಪಿಸಿದರು. ಈ ಮೂಲಕ ನಟಿ ಸಕತ್ ಟ್ರೋಲ್ ಆಗುತ್ತಿದ್ದರೆ, ವಿಜಯ ದೇವರಕೊಂಡ ಅವರಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
ಕತ್ರಿನಾ ಕೈಫ್ ಹುಟ್ಟುಹಬ್ಬದಂದೇ ಮಂಚದ ವಿಷಯ ರಿವೀಲ್ ಮಾಡಿದ ಪತಿ ವಿಕ್ಕಿ ಕೌಶಲ್!