
ಅನಂತ್ ಅಂಬಾನಿ ಹಾಗೂ ತೈಮೂರ್ ಅಲಿ ಖಾನ್ ಮಧ್ಯೆ ಒಂದು ನಂಟಿದೆ. ಅನಂತ್ ಅಂಬಾನಿ ನೋಡಿಕೊಳ್ತಿದ್ದ ದಾದಿಯೇ ಕರೀನಾ ಕಪೂರ್ ಮಗ ತೈಮೂರ್ ಅಲಿ ಖಾನ್ ಆರೈಕೆ ಮಾಡಿದ್ದರು. ನಾವೆಲ್ಲ ತೈಮೂರ್ ನೋಡಿಕೊಳ್ತಿದ್ದ ದಾದಿ ಹೆಸರನ್ನು ಸಾವಿತ್ರಿ ಅಂದ್ಕೊಂಡಿದ್ವಿ. ಆದ್ರೆ ಅವರ ಹೆಸರು ಲಲಿತಾ ಡಿಸಿಲ್ವಾ. ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ಲಲಿಯಾ ಡಿಸಿಲ್ವಾ, ಅನಂತ್ ಹಾಗೂ ಮುಖೇಶ್ ಅಂಬಾನಿ ಕುಟುಂಬದ ಜೊತೆ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಲಲಿತಾ ಡಿಸಿಲ್ವಾ (Lalita DSilva), ಬಿಲಿಯನೇರ್ ಅನಂತ್ ಅಂಬಾನಿ (Anant Ambani) ಅವರ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೀತಾ ಅಂಬಾನಿ (Nita Ambani) ಮತ್ತು ಮುಖೇಶ್ ಅಂಬಾನಿ ಜೊತೆಗಿರುವ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಲ್ಲದೆ, ಅನಂತ್ – ರಾಧಿಕಾಗೆ ಆಶೀರ್ವಾದ ನೀಡಿ, ಮುಖೇಶ್ – ನೀತಾ ದಂಪತಿಯನ್ನು ಹೊಗಳಿದ್ದಾರೆ.
ತಿರುಪತಿಗೇ ನಾಮ ಹಾಕಿರುವ ಆರೋಪ ಹೊತ್ತ ನಟಿ ರೋಜಾ ಇನ್ನೊಂದು ಎಡವಟ್ಟು: ಎಲ್ಲೆಡೆ ಆಕ್ರೋಶ
ಲಲಿತಾ ಡಿಸಿಲ್ವಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಅನಂತ್ ಅಂಬಾನಿ ಅವರ ಬಾಲ್ಯದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಡಿಸ್ನಿ ವರ್ಲ್ಡ್ ಪ್ಯಾರಿಸ್ ಪ್ರವಾಸದ ಫೋಟೋಗಳನ್ನು ಇಲ್ಲಿ ನೋಡ್ಬಹುದು. ಅನಂತ್ ಅಂಬಾನಿ ಬಾಲ್ಯದಲ್ಲಿ ತುಂಬಾ ಒಳ್ಳೆಯ ಮಗುವಾಗಿದ್ದರು ಎಂದು ಇದೇ ವೇಳೆ ಲಲಿತಾ ಡಿಸಿಲ್ವಾ ಬರೆದುಕೊಂಡಿದ್ದಾರೆ.
ಡಿಸ್ನಿ ವರ್ಲ್ಡ್ ಪ್ಯಾರಿಸ್‌ನಲ್ಲಿ ನಾನು ಮತ್ತು ಅನಂತ್ ಎಂದು ಶೀರ್ಷಿಕೆ ಹಾಕಿದ ಲಲಿತಾ ಡಿಸಿಲ್ವಾ, ನಾನು ಇಲ್ಲಿಂದಲೇ ಶಿಶುಪಾಲನಾ ಕೆಲಸವನ್ನು ಪ್ರಾರಂಭಿಸಿದೆ. ಅನಂತ್ ಬಾಲ್ಯದಲ್ಲಿ ಮುದ್ದಾದ ಮಗುವಾಗಿದ್ದ. ಕುಟುಂಬಸ್ಥರು, ಸಮಾಜದ ಗಮನ ಸೆಳೆಯುತ್ತಿದ್ದ. ಇಂದು ಅವರ ಜೀವನದ ಮಹತ್ವದ ದಿನ. ಈ ಜೋಡಿಗೆ ಶುಭ ಹಾರೈಸುತ್ತೇನೆ ಎಂದು ಅವರು ಬರೆದಿದ್ದಾರೆ. ಅನಂತ್ ಮತ್ತು ರಾಧಿಕಾ ಅವರಿಗೆ ಬಹಳಷ್ಟು ಪ್ರೀತಿ, ಸಂತೋಷ ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.
ಲಲಿತಾ ಡಿಸಿಲ್ವಾ, ಅನಂತ್ ಮತ್ತು ರಾಧಿಕಾ ಮದುವೆ, ಆರತಕ್ಷತೆ ಸೇರಿದಂತೆ ಅನೇಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಆರತಕ್ಷತೆ ಫೋಟೋ ಹಂಚಿಕೊಂಡ ಅವರು, ಅನಂತ್ ಬಾಬಾ ಮತ್ತು ಅಂಬಾನಿ ಕುಟುಂಬ ನನ್ನ ಜೀವನದಲ್ಲಿ ಸಾಕಷ್ಟು ಸಂತೋಷ ಮತ್ತು ಪ್ರೀತಿ ನೀಡಿದ್ದು, ನಾನದಕ್ಕೆ ಕೃತಜ್ಞ ಎಂದು ಬರೆದಿದ್ದಾರೆ.
ಅನಂತ್ ಬಾಲ್ಯದ ನೆನಪನ್ನು ಮರೆಯಲು ಸಾಧ್ಯವಿಲ್ಲ. ಅಚಲ ಪ್ರೀತಿ ಮತ್ತು ಗೌರವಕ್ಕೆ ನಾನು ಆಭಾರಿ. ಇಷ್ಟು ವರ್ಷಗಳ ನಂತರವೂ ಅವರ ವಿನಯ, ದಯೆ ಮತ್ತು ಉದಾರತೆ ನನಗೆ ಸ್ಫೂರ್ತಿ. ನನ್ನ ಜೀವನದಲ್ಲಿ ನೀತಾ ಭಾಭಿ ಮತ್ತು ಮುಖೇಶ್ ಸರ್ ಬಂದಿದ್ದು ನನ್ನ ಭಾಗ್ಯ. ಈಗ್ಲೂ ಅವರು ನನ್ನನ್ನು ತಮ್ಮ ಕುಟುಂಬಸ್ಥರಂತೆ ಭಾವಿಸ್ತಾರೆ ಎಂದು ಲಲಿತಾ ಡಿಸಿಲ್ವಾ ಬರೆದುಕೊಂಡಿದ್ದಾರೆ.
ಕೊನೆಗೂ ಸಿಹಿಯ ರಹಸ್ಯ ದೇಸಾಯಿ ಕುಟುಂಬಕ್ಕೆ ಗೊತ್ತಾಗೋಯ್ತು! ಮುಂದೇನು?
ಲಲಿತಾ ಡಿಸಿಲ್ವಾ ಸೆಲೆಬ್ರಿಟಿ ದಾದಿ. ಅವರು ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮಗ ತೈಮೂರ್ ಅಲಿ ಖಾನ್ ದಾದಿಯಾಗಿ ಕೆಲಸ ಮಾಡಿದ್ದಾರೆ. ಅನೇಕ ಬಾರಿ ತೈಮೂರ್ ಅಲಿ ಖಾನ್ ಜೊತೆ ಅವರು ಕಾಣಿಸಿಕೊಂಡಿದ್ದಾರೆ. ಅಲ್ಲದೆ ಕರಿನಾ ಕಪೂರ್ ಮಗಳು ಜೆಹ್ ಅಲಿ ಖಾನ್ ಆರೈಕೆ ಮಾಡಿದ್ದು ಕೂಡ ಲಲಿತಾ ಡಿಸಿಲ್ವಾ. ಸದ್ಯ ಲಲಿತಾ ಡಿಸಿಲ್ವಾ, ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳು ಕ್ಲಿನ್ ಕರ ಕೊನಿಡೇಲಾ ಅವರ ದಾದಿಯಾಗಿದ್ದು, ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಅವರು ಆಗಾಗ್ಗೆ ರಾಮ್ ಚರಣ್ ಮತ್ತು ಅಪ್ಸನ್ ಅವರೊಂದಿಗಿನ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿರುವ ಲಲಿತಾ ಡಿಸಿಲ್ವಾ, ಅನೇಕ ಸೂಪರ್ ಸ್ಟಾರ್ ಜೊತೆಗಿರುವ ಫೋಟೋ ಹಂಚಿಕೊಳ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.