ಸಮಂತಾ ಅಭಿಮಾನಿಗಳಿಗೆ ಮತ್ತೆ ಬೇಸರ; ಹೇಳಿಕೆ ಬಿಡುಗಡೆ ಮಾಡಿದ ತಂಡ

Published : Feb 07, 2023, 04:39 PM IST
ಸಮಂತಾ ಅಭಿಮಾನಿಗಳಿಗೆ ಮತ್ತೆ ಬೇಸರ; ಹೇಳಿಕೆ ಬಿಡುಗಡೆ ಮಾಡಿದ ತಂಡ

ಸಾರಾಂಶ

ಸಮಂತಾ ಅಭಿಮಾನಿಗಳಿಗೆ ಮತ್ತೆ ಬೇಸರ ಮೂಡಿಸಿದ್ದಾರೆ. ಈ ಬಗ್ಗೆ ತಂಡ ಹೇಳಿಕೆ ಬಿಡುಗಡೆ ಮಾಡಿದೆ. 

ಟಾಲಿವುಡ್ ಸ್ಟಾರ್ ಸಮಂತಾ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ್ದಾರೆ. ಸ್ಯಾಮ್‌ನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಸಮಂತಾ ಶಾಕುಂತಲೆಯಾಗಿ ತೆರೆಮೇಲೆ ಬರಬೇಕಿತ್ತು. ಆದರೆ ಸ್ಯಾಮ್‌ನನ್ನು ನೋಡುವ ಭಾಗ್ಯ ಅಭಿಮಾನಿಗಳಿಗೆ ಇನ್ನು ಸಿಕ್ಕಿಲ್ಲ. ಸಮಂತಾ ದರ್ಶನ ಮತ್ತೆ ಮುಂದಕ್ಕೆ ಹೋಗಿದೆ. ಹೌದು ಸಮಂತಾ ನಟನೆಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ಚಿತ್ರತಂಡ ಫೆಬ್ರವರಿ 17ರಂದು ರಿಲೀಸ್ ಮಾಡುವುದಾಗಿ ಬಹಿರಂಗ ಪಡಿಸಿದ್ದರು. ಅಲ್ಲದೇ ಪ್ರಮೋಷನ್ ಕೂಡ ಪ್ರಾರಂಭಿಸಿದ್ದರು. ಆದರೀಗ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. 

ಫೆಬ್ರವರಿ 17 ರಂದು ಶಾಕುಂತಲಂ ಸಿನಿಮಾ ಬಿಡುಗಡೆಯಾಗುವುದಿಲ್ಲ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿನಿಮಾತಂಡ, 'ನಮ್ಮ ಪ್ರೀತಿಯ ಪ್ರೇಕ್ಷಕರಿಗೆ ಈ ವಿಷಯ ತಿಳಿಸಲು ನಾವು ವಿಷಾದಿಸುತ್ತೇವೆ, ಅಂದುಕೊಂಡ ದಿನಕ್ಕೆ ಶಾಕುಂತಲಂ ಬಿಡುಗಡೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ನಾವು ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸುತ್ತೇವೆ. ನಿಮ್ಮ ನಿರಂತರ ಬೆಂಬಲ ಮತ್ತು ಪ್ರೀತಿಗಾಗಿ ಧನ್ಯವಾದಗಳು' ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಆದರೆ ಯಾವಾಗ ರಿಲೀಸ್ ಮಾಡುತ್ತಾರೆ ಇನ್ನು ರಿವೀಲ್ ಮಾಡಿಲ್ಲ. ಹಾಗಾಗಿ ಹೊಸ ದಿನಾಂಕದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

ಅನಾರೋಗ್ಯದ ಬಳಿಕ ಮೊದಲ ಬಾರಿಗೆ ಶೂಟಿಂಗ್‌ನಲ್ಲಿ ಸಮಂತಾ ಭಾಗಿ; ವರುಣ್ ಧವನ್ ನಾಯಕ

ಶಾಕುಂತಲಂ, ನಿರ್ದೇಶಕ ಗುಣಶೇಖರ್ ಸಾರಥ್ಯದಲ್ಲಿ ಬಂದ ಸಿನಿಮಾವಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ ಶಾಕುಂತಲಂ ಹೇಗೆ ಮೂಡಿಬಂದಿದೆ ಎಂದು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಇದು ಕಾಳಿದಾಸ ಅವರ ಅಭಿಜ್ಞಾನ ಶಾಕುಂತಲ ಆಧಾರಿತ ಸಿನಿಮಾವಾಗಿದೆ. ಈ ಸಿನಿಮಾ ಶಾಕುಂತಲಾ ಮತ್ತು ರಾಜ ದುಶ್ಯಂತ ಮಹಾಕಾವ್ಯದ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ಸಮಂತಾ ಮತ್ತು ದೇವ್ ಮೋಹನ್ ಜೊತೆಗೆ ಕಬೀರ್ ಬೇಡಿ, ಪ್ರಕಾಶ್ ರಾಜ್, ಸಚಿನ್ ಖೇಡೇಕರ್, ಜಿಶು ಸೇನ್‌ಗುಪ್ತ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ.

Citadel First Look: ಅನಾರೋಗ್ಯದ ಬಳಿಕ ಸಮಂತಾ ಮಾಸ್ ಎಂಟ್ರಿ; ಫ್ಯಾನ್ಸ್ ಫುಲ್ ಖುಷ್

ಸಮಂತಾ ಕೊನೆಯದಾಗಿ ಯಶೋದಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅನಾನರೋಗ್ಯದ ಬಳಿಕ ರಿಲೀಸ್ ಆದ ಸಮಂತಾ ಅವರ ಮೊದಲ ಸಿನಿಮಾವಾಗಿತ್ತು. ಇದೀಗ ಚೇತರಿಸಿಕೊಂಡಿರುವ ಸಮಂತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಹಿಂದಿಯ ಸಿಟಾಡೆಲ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಮಂತಾ ಶಾಕುಂತಲಂ ಆಗಿ ಯಾವಾಗ ಎಂಟ್ರಿ ಕೊಡ್ತಾರೆ ಎಂದು ಇನ್ನು ಸ್ವಲ್ಪ ದಿನ ಕಾಯಬೇಕಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಉರಿ, ಧುರಂಧರ್‌ದಂತಹ ಸಿನಿಮಾಗಳು ದೇಶದಲ್ಲಿ ಚಿತ್ರ ದ್ವೇಷ ಹರುಡುತ್ತವೆ: ಪ್ರೊ. ಮನು ಚಕ್ರವರ್ತಿ
ಕುಶಾಲನಗರದ ತೋಟದಲ್ಲಿ ನಟಿ ಸನ್ನಿ ಲಿಯೋನ್ 'ಪ್ರತ್ಯಕ್ಷ'; ರೈತನ ಶ್ರೀಮಂತಿಕೆ ಕಂಡು ನೆಟ್ಟಿಗರು ಫಿದಾ, ವಿಡಿಯೋ ವೈರಲ್!