ಪುಷ್ಪ-2ನಲ್ಲಿ ಮತ್ತೋರ್ವ ಸೌತ್ ಸ್ಟಾರ್; ವಿಕ್ರಮ್ ಬಳಿಕ ಮತ್ತೆ ಒಂದಾದ ಫಹಾದ್-ಸೇತುಪತಿ

Published : Jun 29, 2022, 02:47 PM ISTUpdated : Jun 29, 2022, 03:16 PM IST
ಪುಷ್ಪ-2ನಲ್ಲಿ ಮತ್ತೋರ್ವ ಸೌತ್ ಸ್ಟಾರ್; ವಿಕ್ರಮ್ ಬಳಿಕ ಮತ್ತೆ ಒಂದಾದ ಫಹಾದ್-ಸೇತುಪತಿ

ಸಾರಾಂಶ

ಪುಷ್ಪ-2 ಸಿನಿಮಾದಲ್ಲಿ ದಕ್ಷಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ವಿಜಯ್ ಸೇತುಪತಿ (Vijay Sethupathi) ಸಿನಿಮಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. 

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಸದ್ಯ ಪುಷ್ಪ-2 (Pushpa 2) ಸಿನಿಮಾಗಾಗಿ ಸಜ್ಜಾಗುತ್ತಿದ್ದಾರೆ. ಪುಷ್ಪ ಸೂಪರ್ ಹಿಟ್ ಆದ ಬಳಿಕ ಪುಷ್ಪ-2 ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಪುಷ್ಪ ಸಿನಿಮಾಗೆ ದೇಶದ ಎಲ್ಲಾ ಭಗಗಳಿಂದ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್‌ನಲ್ಲೂ ಅಲ್ಲು ಅರ್ಜುನ್ ಭರ್ಜರಿ ಕಮಾಯಿ ಮಾಡಿದೆ. ಈ ಸಿನಿಮಾ ಮೂಲಕ ಅಲ್ಲು ಅರ್ಜುನ್ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಬಾಲಿವುಡ್‌ನಲ್ಲೂ ಅಲ್ಲು ಅರ್ಜುನ್ ಗೆ ಈ ಪರಿ ಬೇಡಿಕೆ ಇದೆ ಎನ್ನುವುದನ್ನು  ಈ ಮೂಲಕ ಬಹಿರಂಗವಾಗಿದೆ. ಮೊದಲ ಭಾಗದ ಸೂಪರ್ ಸಕ್ಸಸ್ ಇದೀಗ ಎರಡನೇ ಭಾಗದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ. 

ಪುಷ್ಪ-2 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಸಿ ನಿಮಾದ ಬಗ್ಗೆ ಒಂದಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇದೆ. ಸಿನಿಮಾದ ಕಥೆ ಬದಲಾಯಿಸಲಾಗಿದೆ, ರಶ್ಮಿಕಾ ಮಂದಣ್ಣ (Rashmika Mandanna) ಪಾತ್ರಕ್ಕೆ ಕತ್ತರಿ ಹಾಕಲಾಗಿದೆ, ಫಾರಿನ್ ಹೀರೋಯಿನ್ ಎಂಟ್ರಿ ಕೊಟ್ಟಿದ್ದಾರೆ ಹೀಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಸಿನಿಮಾತಂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಚಿತ್ರದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಈ ಸುದ್ದಿ ಕೇಳಿಯೇ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಹೌದು, ಪುಷ್ಪ-2 ಸಿನಿಮಾದಲ್ಲಿ ದಕ್ಷಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ವಿಜಯ್ ಸೇತುಪತಿ (Vijay Sethupathi) ಸಿನಿಮಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ವಿಜಯ್ ಸೇತುಪತಿ ಜೊತೆ ಸಿನಿಮಾತಂಡ ಮಾತುಕತೆ ನಡೆಸಿದ್ದು ಮಕ್ಕಳ್ ಸೆಲ್ವನ್ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಿನಿಮಾತಂಡ ಅಧಿಕೃತ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಅಂದಹಾಗೆ ವಿಜಯ್ ಸೇತುಪತಿ ಪುಷ್ಪ-1ರಲ್ಲೇ ನಟಸಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಸಿನಿಮಾದಿಂದ ಹಿಂದೆ ಸರಿದಿದ್ದರು. ಆದರೀಗ ಪಾರ್ಟ್ 2 ನಲ್ಲಿ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ. 

ಹೊಸ ಲುಕ್‌ಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್ ಹಿಗ್ಗಾಮುಗ್ಗಾ ಟ್ರೋಲ್: ವಡಾ ಪಾವ್ ಎಂದು ಕಾಲೆಳೆದ ನೆಟ್ಟಿಗರು

ಮೊದಲ ಭಾಗದಲ್ಲಿ ವಿಜಯ್ ಸೇತುಪತಿ ಆಂಧ್ರ ಪ್ರದೇಶ ಫಾರೆಸ್ಟ್ ಅಧಿಕಾರಿಯಾಗಿ ನಟಿಸಬೇಕಿತ್ತು. ಆದರೆ ಸಿನಿಮಾದಲ್ಲಿ ಆಂಧ್ರದ ಅಧಿಕಾರಿ ತಮಿಳುನಾಡಿನ ಕೆಲವು ಜನರನ್ನು ಸ್ಮಗ್ಲರ್ಸ್ ಎಂದು ಶೂಟ್ ಮಾಡಬೇಕಿತ್ತು. ಹಾಗಾಗಿ ವಿಜಯ್ ಸೇತುಪತಿ ಹಿಂದೆ ಸರಿದಿದ್ದರು ಎನ್ನಲಾಗಿದೆ. ಆದರೀಗ 2ನೇ ಭಾಗದಲ್ಲಿ ವಿಜಯ್ ಸೇತುಪತಿ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಪಾರ್ಟ್-2ನಲ್ಲಿ ಫಹಾದ್ ಫಾಸಿಲ್ ಸಹ ನಟಿಸುತ್ತಿದ್ದಾರೆ. ಮೊದಲ ಭಾಗದ ಕೊನೆಯಲ್ಲಿ ಫಹಾದ್ ಪಾತ್ರ ಎಂಟ್ರಿಯಾಗಿದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಫಹಾದ್ ಕಾಣಿಸಿಕೊಂಡಿದ್ದಾರೆ. ಫಹಾದ್ ಜೊತೆ ವಿಜಯ್ ಕೂಡ ಇರುವುದು ಅಭಿಮಾನಿಗಳಿಗೆ ಥ್ರಿಲ್ ನೀಡಿದೆ.

ಅಲ್ಲು ಅರ್ಜುನ್ 'ಪುಷ್ಪ-2'ನಲ್ಲಿ ಫಾರಿನ್ ಹಿರೋಯಿನ್; ರಶ್ಮಿಕಾ ಕಥೆಯೇನು?

ಅಂದಹಾಗೆ ಫಹಾದ್ ಮತ್ತು ವಿಜಯ್ ಸೇತುಪತಿ ಇಬ್ಬರು ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ಕಾಂಬಿನೇಷನ್ ಅಭಿಮಾನಿಗಳ ಹೃದಯ ಗೆದ್ದಿದೆ. ಇದೀಗ ಮತ್ತೊಮ್ಮೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಸದ್ಯದಲ್ಲೇ ಪುಷ್ಪ-2 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ಪುಷ್ಪ2 ತಂಡ ಇನ್ನು ಏನೆಲ್ಲ ವಿಶೇಷತೆ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ.     

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!