ನಟಿ ಮೀನಾ ಪತಿ ನಿಧನಕ್ಕೆ ಸಿನಿ ಗಣ್ಯರ ಕಂಬನಿ; ಮಧ್ಯಾಹ್ನ 2ಗಂಟೆಗೆ ವಿದ್ಯಾಸಾಗರ್ ಅಂತ್ಯಕ್ರಿಯೆ

By Shruiti G Krishna  |  First Published Jun 29, 2022, 11:00 AM IST

ದಕ್ಷಿಣ ಭಾರತದ ಖ್ಯಾತ ನಟಿ ಮೀನಾ (Meena) ಪತಿ ವಿದ್ಯಾಸಾಗರ್ (Vidyasagar) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ನಟಿ ಮಿತಾ ಪತಿ ವಿದ್ಯಾಸಾಗರ್ ನಿನ್ನೆ ರಾತ್ರಿ  (ಜೂನ್ 28) ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದರು. ವಿದ್ಯಾಸಾಗರ್ ಅವರನ್ನು ಕಳೆದ ಎರಡು ದಿನಗಳ ಹಿಂದೆಯೇ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾಸಾಗರ್ ಇಹಲೋಕ ತ್ಯಜಿಸಿದರು.


ದಕ್ಷಿಣ ಭಾರತದ ಖ್ಯಾತ ನಟಿ ಮೀನಾ (Meena) ಪತಿ ವಿದ್ಯಾಸಾಗರ್ (Vidyasagar) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ನಟಿ ಮಿತಾ ಪತಿ ವಿದ್ಯಾಸಾಗರ್ ನಿನ್ನೆ ರಾತ್ರಿ (ಜೂನ್ 28) ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದಾರೆ.  ವಿದ್ಯಾಸಾಗರ್ ಅವರನ್ನು ಕಳೆದ ಎರಡು ದಿನಗಳ ಹಿಂದೆಯೇ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾಸಾಗರ್ ಇಹಲೋಕ ತ್ಯಜಿಸಿದರು. 48 ವರ್ಷದ ವಿದ್ಯಾಸಾಗರ್ ಈ ಮೊದಲು ಕೊರೊನಾ ಸೋಂಕಿಗೆ ಒಳಗಾಗಿದ್ದರು.  ಬಳಿಕ ರೋಗದಿಂದ ಚೇತರಿಸಿಕೊಂಡಿದ್ದರು. ನಂತರ, ಮಾರ್ಚ್ 2022 ರ ಅಂತ್ಯದ ವೇಳೆಗೆ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

ಶ್ವಾಸಕೋಶ ಸಮಸ್ಯೆ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಕ್ರಮೇಣ ಅವರ ಸ್ಥಿತಿ ಹದಗೆಟ್ಟಿತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ವಿದ್ಯಾಸಾಗರ್ ಸಾವನ್ನಪ್ಪಿದ್ದರು. ವಿದ್ಯಾಸಾಗರ್ ನಿಧನಕ್ಕೆ ದಕ್ಷಿಣ ಭಾತದ ಅನೇಕ ಖ್ಯಾತ ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶರತ್ ಕುಮಾರ್ (Sarath Kumar), ಖುಷ್ಬೂ ಸುಂದರ್ (Venkatesh), ವೆಂಕಟೇಶ್ (Khushbu) ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಶರತ್ ಕುಮಾರ್ ಟ್ವೀಟ್ ಮಾಡಿ ನಿಜಕ್ಕೂ ಆಘಾತಕಾರಿ ಸುದ್ದಿ ಎಂದು ಹೇಳಿದ್ದಾರೆ. ಶರತ್ ಕುಮಾರ್ ಮತ್ತು ಮೀನಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಮೀನಾ ಇತ್ತೀಚಿಗಷ್ಟೆ ರಿಲೀಸ್ ಆಗಿ ಸೂಪರ್ ಸಕ್ಸಸ್ ಆಗಿರುವ ದೃಶ್ಯಂ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇದಲ್ಲದೇ ಇನ್ನು ಅನೇಕ ಸಿನಿಮಾಗಳಲ್ಲಿ ಮೀನಾ ನಟಿಸಿದ್ದಾರೆ.

It is shocking to hear the news of the untimely demise of Actor Meena's husband Vidyasagar, our family's heartfelt condolences to Meena and the near and dear of her family, may his soul rest in peace pic.twitter.com/VHJ58o1cwP

— R Sarath Kumar (@realsarathkumar)

Tap to resize

Latest Videos


ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್‌ ಇನ್ನಿಲ್ಲ

 

ನಟ ವೆಂಕಟೇಶ್ ಟ್ವೀಟ್ ಮಾಡಿ, 'ವಿದ್ಯಾಸಾಗರ್ ನಿಧನ ನಿಜಕ್ಕೂ ಆಘಾತಕಾರಿ. ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನೀಡಲಿ' ಎಂದು ಟ್ವೀಟ್ ಮಾಡಿದ್ದಾರೆ.

Extremely sad and shocked by the demise of Vidyasagar gaaru! My heartfelt condolences to Meena gaaru and the entire family! Wishing them with all the strength to sail through this! 🙏🏼

— Venkatesh Daggubati (@VenkyMama)

ನಟಿ ಖುಷ್ಬೂ ಟ್ವೀಟ್ ಮಾಡಿ, 'ಇಷ್ಟು ಭಯಾನಕ ಸದ್ದಿಯೊಂದಿಗೆ ಬೆಳಗ್ಗೆ ಪ್ರಾರಂಭವಾಯಿತು. ಮೀನಾ ಪತಿ ವಿದ್ಯಾಸಾಗರ್ ಇನ್ನಿಲ್ಲ ಎನ್ನುವ ಸುದ್ದಿ ನಂಬಲು  ಸಾದ್ಯವಾಗುತ್ತಿಲ್ಲ. ದೀರ್ಘ ಸಮಯದಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಹೇಳಿದರು.   

ವಿದ್ಯಾಸಾಗರ್  ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 2 ಗಂಟೆಗೆ ಚೆನ್ನೈನ ಬೆಸೆಂಟ್ ನಗರದ ಸ್ಮಶಾನದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನಟಿ ಮೀನಾ ದಕ್ಷಿಣ ಭಾರತದ ಖ್ಯಾತ ನಟಿ. ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ಮೀನಾ 90 ದಶಕದ ಬಹುಬೇಡಿಯ ನಟಿ. ಬಾಲನಟಿಯಾಗಿ ಸಿನಿಮಾರಂಗ ಪ್ರವೇಶ ಮಾಡಿದ ನಟಿ ಮೀನಾ ಬಳಿಕ ಸ್ಟಾರ್ ಆಗಿ ಮೆರೆದರು. ದಕ್ಷಿಣ ಭಾರತದ ಅನೇಕ  ಸ್ಟಾರ್ ನಟರ ಜೊತೆ ಮೀನಾ ತೆರೆ ಹಂಚಿಕೊಂಡಿದ್ದಾರೆ.  2009ರಲ್ಲಿ ಮೀನಾ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ ಅವರ ಜೊತೆ ಹಸಮಣೆ ಏರಿದರು. ವಿದ್ಯಾಸಾಗರ್ ಮತ್ತು ಮೀನಾ ದಾಂಪತ್ಯಕ್ಕೆ ನೈನಿಕಾ ಎನ್ನುವ ಮುದ್ದಾದ ಮಗಳಿದ್ದಾಳೆ.      

click me!