ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಜೊತೆ ಮಹೇಶ್ ಬಾಬು: ಕುತೂಹಲ ಮೂಡಿಸಿದ ಬಿಲ್ ಗೇಟ್ಸ್ ಭೇಟಿ

Published : Jun 29, 2022, 01:32 PM IST
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಜೊತೆ ಮಹೇಶ್ ಬಾಬು: ಕುತೂಹಲ ಮೂಡಿಸಿದ ಬಿಲ್ ಗೇಟ್ಸ್  ಭೇಟಿ

ಸಾರಾಂಶ

ಮಹೇಶ್ ಬಾಬು ಸದ್ಯ ಯು ಎಸ್ ಎ (USA) ನಲ್ಲಿದ್ದಾರೆ. ಪ್ರವಾಸದ ವೇಳೆ ಮಹೇಶ್ ಬಾಬು ವಿಶ್ವದ ಅಂತ್ಯತ ಶ್ರೀಮಂತ ವ್ಯಕ್ತಿಯನ್ನು (World Richest Man) ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಮೈಕ್ರೋಸಾಫ್ಟ್ ಸಂಸ್ಥಾಪಕ (Microsoft Founder) ಬಿಲ್ ಗೇಟ್ಸ್ (Bill Gates) ಭೇಟಿಯಾಗಿದ್ದಾರೆ. 

ಟಾಲಿವುಡ್ (Tollywood) ಸ್ಟಾರ್ ನಟ ಮಹೇಶ್ ಬಾಬು (Mahesh Babu) ಸದ್ಯ ಕುಟುಂಬದ ಜೊತೆ ವಿದೇಶಿ ಪ್ರವಾದಲ್ಲಿದ್ದಾರೆ. ಮಹೇಶ್ ಬಾಬು ಕೊನೆಯದಾಗಿ ಸರ್ಕಾರು ವಾರಿ ಪಾಠ (Sarkaru Vaari Paata) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಳಿಕ ಮಹೇಶ್ ಬಾಬು ಮುಂದಿನ ಸಿನಿಮಾ ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ. ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡುವ ಮೊದಲು ಕುಟುಂಬದ ಜೊತೆ ವಿದೇಶಿ ಪ್ರವಾಸದಲ್ಲಿದ್ದಾರೆ. ಹೌದು, ಮಹೇಶ್ ಬಾಬು ಸದ್ಯ ಯು ಎಸ್ ಎ (USA) ನಲ್ಲಿದ್ದಾರೆ. ಪ್ರವಾಸದ ವೇಳೆ ಮಹೇಶ್ ಬಾಬು ವಿಶ್ವದ ಅಂತ್ಯತ ಶ್ರೀಮಂತ ವ್ಯಕ್ತಿಯನ್ನು (World Richest Man) ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. 

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಮೈಕ್ರೋಸಾಫ್ಟ್ ಸಂಸ್ಥಾಪಕ (Microsoft Founder) ಬಿಲ್ ಗೇಟ್ಸ್ (Bill Gates) ಭೇಟಿಯಾಗಿದ್ದಾರೆ. ಮಹೇಶ್ ಬಾಬು ದಂಪತಿ ಬಿಲ್ ಗೇಟ್ಸ್ ದಂಪತಿ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿದ್ದಾರೆ. ಅಂದಹಾಗೆ ಬಿಲ್ ಗೇಟ್ಸ್ ಜೊತೆ ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಇಬ್ಬರು ಅಕ್ಕಪಕ್ಕದಲ್ಲಿ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. 

ಪ್ರಿನ್ಸ್ -ರಾಜಮೌಳಿ ಚಿತ್ರಕ್ಕೆ ಆಲ್ ಸೆಟ್: ಒಂದಾಗ್ತಿದೆ ಚಿತ್ರರಂಗದ ಮೋಸ್ಟ್ ಹ್ಯಾಪನಿಂಗ್ ಜೋಡಿ

ಬಿಲ್ ಗೇಟ್ಸ್ ಭೇಟಿಯಾಗಿ ತುಂಬಾ ಸಂತೋಷವಾಯಿತು. ಈ ಜಗತ್ತು ಕಂಡ ಮಹಾನ್ ವ್ಯಕ್ತಿ. ಅತ್ಯಂತ ವಿನಮ್ರ ವ್ಯಕ್ತಿ. ನಿಜವಾಗಿಯೂ ಸ್ಫೂರ್ತಿ' ಎಂದು ಹೇಳಿದ್ದಾರೆ. ಮಹೇಶ್ ಬಾಬು ಪೋಸ್ಟ್2ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಕಾಮೆಂಟ್ ಹರಿದುಬಂದಿದೆ. ನೆಚ್ಚಿನ ನಟನನ್ನು ವಿಶ್ವದ ಶ್ರೀಮಂತ ವ್ಯಕ್ತಿಯ ಜೊತೆ ನೋಡಿ ಅಭಿಮಾನಿಗಳು ಹಾರ್ಟ್ ಇಮೋಜಿ ಹಾಕಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ರಿಮೇಕ್ ಸಿನಿಮಾದಲ್ಲಿ ನಟಿಸಿಲ್ಲ ಮಹೇಶ್ ಬಾಬು, ರೆಕಾರ್ಡ್ ಆಯ್ತು ಆ ದಾಖಲೆ!

 

ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಹಾಗೂ ಇಬ್ಬರು ಮಕ್ಕಳ ಜೊತೆ ವಿದೇಶ ಸುತ್ತಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಿನಿಮಾದಿಂದ ಕೊಂಚ ಬ್ರೇಕ್ ಪಡೆದಿರುವ ಮಹೇಶ್ ಬಾಬು ಯು ಎಸ್ ಎನಿಂದ ವಾಪಾಸ್ ಬಂದ ಬಳಿಕ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಮಹೇಶ್ ಬಾಬು ಮುಂದಿನ ಸಿನಿಮಾ ನಿರ್ದೇಶಕ ತ್ರಿವಿಕ್ರಮ್ ಜೊತೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತವಾಗಿಲ್ಲ. ಈ ಸಿನಿಮಾ ಬಳಿಕ ಮಹೇಶ್ ಬಾಬು ಖ್ಯಾತ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡಲಿದ್ದಾರೆ. 
ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾಗಾಗಿ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.              

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?