'World famous Lover' ಆಗಲು ಹೋಗಿ, ಪಬ್ಲಿಕ್ಕಲ್ಲಿ ಲುಂಗಿ ಉದುರಿಸಿಕೊಂಡ ವಿಜಯ್?

By Suvarna News  |  First Published Feb 13, 2020, 3:06 PM IST

ವಿಜಯ್ ದೇವರಕೊಂಡ 'ವರ್ಲ್ಡ್‌ ಫೇಮಸ್‌ ಲವರ್‌' ಚಿತ್ರ ಪ್ರಚಾರದಲ್ಲಿ ಧರಿಸಿದ ಲುಂಗಿ ಸೋಷಿಯಲ್‌ ಮೀಡಿಯಾ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಈ ಘಟನೆ ನಿಜಕ್ಕೆ ನಡೆದದ್ದು ಹೌದಾ?
 


ಟಾಲಿವುಡ್‌ ಲವರ್‌ ಬಾಯ್‌ ನೋಡಿದ್ರೆ ಯಾರಿಗೆ ಲವ್‌ ಆಗೋಲ್ಲ ಹೇಳಿ? ಕಿಸ್ಸಿಂಗ್‌ ಹೀರೋ ಹಿಮ್ರಾನ್‌ ಹಶ್ಮಿಯನ್ನೂ ಮೀರಿಸುತ್ತೆ ವಿಜಯ್ ಕಿಸ್ಸಿಂಗ್ ಲಿಸ್ಟ್‌. ಅದರಲ್ಲೂ ಹೀರೋಹಿನ್ಸೇ ಹೆಚ್ಚಾಗಿ ವಿಜಯ್ ಮುತ್ತಿಡೋದು, ಸ್ಮೂಚ್ ಮಾಡೋದು! 

ಮೊದಲೇ ಲವರ್‌ ಬಾಯ್‌, ಅದರಲ್ಲೂ ಮತ್ತೂ ಫೇಮಸ್‌ ಆಗ್ಬೇಕಾ? ಫೆಬ್ರವರ್‌ 14ರಂದು ತೆರೆ ಕಾಣಲು ಸಜ್ಜಾಗಿರುವ 'World Famous Lover' ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಿ ರಾಶಿ ಖನ್ನಾ ಮಿಂಚಿದ್ದಾರೆ. ಜೊತೆಗೆ ಐದೈದು ನಟಿ ಮಣಿಯರು ಇವರೊಂದಿಗೆ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ಸ್ಪೆಷಲ್. ಚಿತ್ರ ಪ್ರಚಾರ ಅದ್ಧೂರಿಯಾಗಿಯೇ ನಡೆದಿದ್ದು ವಿಜಯ್ ಉಡುಗೆ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದೆ. 

Tap to resize

Latest Videos

undefined

ಇದೇನ್ ಗತಿ!ಫ್ಲಾಪ್‌ ಆಗ್ತೀನಿ ಅಂತ ಹೆಸರು ಬದಲಾಯಿಸಿಕೊಂಡ್ರಾ ವಿಜಯ್ ದೇವರಕೊಂಡ?
 
ಲುಂಗಿ, ಶರ್ಟ್‌, ಶಲ್ಯಾ ಮತ್ತು ಚಪ್ಪಲಿ ಧರಿಸಿ ಬಂದ ವಿಜಯ್‌ ಅವರನ್ನು ವೇದಿಕೆ ಮೇಲೆ ನಿರೂಪಕಿ ಹೂಗುಚ್ಛ ನೀಡಿ ಸ್ವಾಗತಿಸುತ್ತಾರೆ. ತಕ್ಷಣವೇ ಹೂಗುಚ್ಛವನ್ನು ಅಭಿಮಾನಿಗಳೆಡೆಗೆ ಎಸೆದರು. ಎಸೆದ ರಭಸಕ್ಕೆ ಅವರ ಲುಂಗಿ ಲೂಸ್‌ ಆಗಿ, ಬೀಳುವ ಸ್ಥಿತಿಗೆ ಬಂದಿತ್ತು. ತಕ್ಷಣವೇ ಎಚ್ಚರಗೊಂಡು ವಿಜಯ್ ಲುಂಗಿ ಸರಿಮಾಡಿಕೊಂಡರು, ಪಕ್ಕದಲ್ಲಿಯೇ ರಾಶಿ ನಾಚಿ ನೀರಾದರು!

ವಲ್ಲಭ ನಿರ್ದೇಶನಕ ವರ್ಲ್ಡ್‌ ಫೇಮಸ್‌ ಚಿತ್ರದಲ್ಲಿ 4-5 ನಟಿಯರು ಕಾಣಿಸಿಕೊಡಿದ್ದಾರೆ. ವಿಜಯ್ ಪ್ರತಿಯೊಂದೂ ಚಿತ್ರದಲ್ಲಿಯೂ ಒಂದಲ್ಲಾ ಒಂದು ರೀತಿ ಪ್ರೇಕ್ಷಕರ ಗಮನ ಸೆಳೆದಿದೆ. ಅದೇ ರೀತಿ ಈ ಸಿನಿಮಾವೂ ಹೆಸರು ಮಾಡುತ್ತಾ ಎಂದು ಕಾದು ನೋಡಬೇಕಿದೆ.

'ಗೀತಾ ಗೋವಿಂದಂ' ನೋಡಿ ವಿಜಯ್ ದೇವರಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸುಧಾಮೂರ್ತಿ!

click me!