
ಪದ್ಮಶ್ರೀ ಪುರಸ್ಕೃತ ವೆಂಡೆಲ್ ರಾಡ್ರಿಕ್ಸ್ ಫ್ಯಾಷನ್ ಡಿಸೈನರ್ ಆಗಿ ಮಾತ್ರವಲ್ಲದೇ, ಉತ್ತಮ ಬರಹಗಾರ, ಸಮಾಜ ಕಾರ್ಯಕರ್ತನಾಗಿಯೂ ಗುರುತಿಸಿಕೊಂಡಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ವೆಂಡೆಲ್ ರಾಡ್ರಿಕ್ಸ್ ಗೋವಾದ ಕ್ಲೋವೆಲ್‌ನ ತಮ್ಮ ನಿವಾಸದಲ್ಲಿ ವಾಸವಿದ್ದರು. ಹೃದಯಘಾತದಿಂದ ವಿಧಿವಶರಾಗಿದ್ದಾರೆ, ಎನ್ನಲಾಗಿದೆ.
ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಮಂಜುನಾಥ್ ವಿಧಿವಶ
ಬಾಲಿವುಡ್ ಬಣ್ಣ ಲೋಕದಲ್ಲಿ ಎಲ್ಲ ನಟ-ನಟಿಯರನ್ನು ಸಮಾನವಾಗಿ ನೋಡುತ್ತಾ, ಕಾರ್ಯ ನಿರ್ವಹಿಸುತ್ತಿದ್ದ ಇವರ ಶೈಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಿಗ್ ಬಿಗೆ ಹೇಗೆ ಡಿಸೈನ್ ಮಾಡುತ್ತಿದ್ದರೋ ಹಾಗೆಯೇ ಈಗ ತಾನೇ ಕಾಲಿಟ್ಟ ಕಲಾವಿದನಿಗೂ ಅಷ್ಟೇ ಪ್ರಮುಖ್ಯತೆ ನೀಡುತ್ತಿದ್ದರು. ವೆಂಡೆಲ್ ರಾಡ್ರಿಕ್ಸ್ ನಿಧನಕ್ಕೆ ಟ್ಟೀಟರ್‌ನಲ್ಲಿ ಬಾಲಿವುಡ್ ಸ್ಟಾರ್ಸ್ ಕಂಬನಿ ಮಿಡಿದಿದ್ದಾರೆ.
'ನನ್ನ ಜೀವನದಲ್ಲಿ ಎಂದೂ ಕೇಳಲು ಬಯಸದ ಸುದ್ದಿ ಕೇಳಿ ಮನ ನೊಂದಿದೆ. ನಿದ್ರೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ. ವೆಂಡೆಲ್ ರಾಡ್ರಿಕ್ಸ್ ಒಬ್ಬ ಐಕಾನಿಕ್ ಡಿಸೈನರ್ ಹಾಗೂ LGBT ರೈಟ್ಸ್ ಚಾಂಪಿಯನ್. ಮುಂಬೈನಲ್ಲಿ ಅವರೊಟ್ಟಿಗೆ ಮಾಡಿದ ಫ್ಯಾಷನ್ ಶೋ ಎಂದಿಗೂ ಮರೆಯುವುದಿಲ್ಲ. ನಾನು 18 ವಯಸ್ಸಿಗೆ ಧೈರ್ಯ ಮಾಡಿ ಬೆಂಗಳೂರಿನಿಂದ ಮುಂಬೈಗೆ ಕಾಲಿಡಲು ಇವರೇ ಕಾರಣ. ನನ್ನ ಶಕ್ತಿ. ನನ್ನ ಗುರು' ಎಂದು ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.