ಯುವತಿ ಮೇಲೆ ಲೈಂಗಿಕ ಕಿರುಕುಳ; ಕಿರುತೆರೆ ನಟನ ವಿರುದ್ಧ FIR!

Suvarna News   | Asianet News
Published : Feb 13, 2020, 01:48 PM ISTUpdated : Feb 13, 2020, 01:53 PM IST
ಯುವತಿ ಮೇಲೆ ಲೈಂಗಿಕ ಕಿರುಕುಳ; ಕಿರುತೆರೆ ನಟನ ವಿರುದ್ಧ FIR!

ಸಾರಾಂಶ

ಹಿಂದಿ ಕಿರುತೆರೆ ವಾಹಿನಿಯ ಖ್ಯಾತ ನಟ ಶಹಬಾಜ್‌ ಖಾನ್‌ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಮುಂಬೈ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ಈ ಖಾನ್ ವಿರುದ್ಧ ಏನು ಆರೋಪವಿದೆ?  

ಸುಮಾರು 35ಕ್ಕೂ ಹೆಚ್ಚು ಧಾರಾವಾಹಿ ಹಾಗೂ 100ಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಮಿಂಚಿರುವ ನಟ ಶಹಬಾಜ್‌ ಖಾನ್‌ (53) ವಿರುದ್ಧ ಯವತಿಯೊಬ್ಬಳು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಳೆ. ಈ ಸಂಬಂಧ ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

ಖಾನ್‌ ವಿರುದ್ಧ ಸೆಕ್ಷನ್‌ 354 ಮತ್ತು 509 ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ಶುರು ಮಾಡಿದ್ದು, ಇನ್ನೂ ಶಹಬಾಜ್‌ ಅವರನ್ನು ವಶಕ್ಕೆ ಪಡೆದುಕೊಂಡಿಲ್ಲ ಎನ್ನಲಾಗಿದೆ. 

ಕಿಚ್ಚನ 'ಪೈಲ್ವಾನ್‌' ನೃತ್ಯ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

ಪದ್ಮಭೂಷಣ ಪುರಸ್ಕೃತ ಶಾಸ್ತ್ರೀಯ ಸಂಗಿತ ಗಾಯಕ ಉಸ್ತಾದ್‌ ಅಮೀರ್‌ ಖಾನ್‌ ಅವರ ಪುತ್ರ ಶಹಬಜ್‌ ಖಾನ್‌ ಅವರ ಮೊದಲ ಹೆಸರು ಹೈದರ್‌ ಖಾನ್‌. ಯುಗ್‌, ದಿ ಗ್ರೇಟ್‌ ಮರಾಠಾ, ತೆನಾಲಿ ರಾಮ ಹಾಗೂ ಮುಂತಾದ ಟಿವಿ ಶೋಗಳಲ್ಲೂ ಮಿಂಚುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ
ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!