
'ಧಡಕ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜಾಹ್ನವಿ ಕಪೂರ್ ಈ ಹಿಂದೆ ಕಿರುತೆರೆಯ ಖ್ಯಾತ ಕಾರ್ಯಕ್ರಮದಲ್ಲಿ ಸೌತ್ ಇಂಡಿಯನ್ ನಟ ವಿಜಯ್ ದೇವರಕೊಂಡ ಜೊತೆ ನಟಿಸಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಇದು ಯಾವ ದೇವತೆಯ ಅಸ್ತು ಗೊತ್ತಿಲ್ಲ ಅಂದುಕೊಂಡಂತೆ ಅವಕಾಶ ಹುಡುಕಿಕೊಂಡು ಬಂದಿದೆ.
'ತಲೈವಿ'ಯಲ್ಲಿ ಕಾಂಟ್ರೋವರ್ಸಿ ಹುಟ್ಟು ಹಾಕಲಿದ್ದಾರಾ ವಿಜಯ ದೇವರಕೊಂಡ?
ಹೌದು! ಕರಣ್ ಜೋಹರ್ ಹಾಗೂ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಜಾಹ್ನವಿ ಜೋಡಿಯಾಗಿ ವಿಜಯ್ ದೇವರಕೊಂಡರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರ ತೆಲುಗು ಹಾಗೂ ಹಿಂದಿಯಲ್ಲಿ ತೆರೆಕಾಣಲಿದ್ದು ಜಾಹ್ನವಿ ತಂದೆ ಬೋನಿ ಕಪೂರ್ ನಿರ್ಮಾಣ ಮಾಡಲಿದ್ದಾರೆ.
ಹೊಸ ಮನೆ ಖರೀದಿಸಿದ್ದಾರೆ ದೇವರಕೊಂಡ; ಆದ್ರೆ ಹೋಗಲು ಭಯವಂತೆ!
ಮಾಧ್ಯಮವೊಂದರಲ್ಲಿ ನಿರ್ದೇಶಕ ಮಾತನಾಡುತ್ತಾ, 'ಆಲಿಯಾ ಭಟ್ ಹಾಗೂ ಅನನ್ಯಾ ಪಾಂಡೆ ಚಿತ್ರದ ನಟಿಯರಾಗಬೇಕು ಎಂದು ಅಂದುಕೊಂಡಿದ್ದೆವು. ಆದರೆ ಪಾತ್ರದ ಬೇಡಿಕೆಯೇ ಬೇರೆ ಇತ್ತು. ಈ ಕಾರಣಕ್ಕೆ ಜಾಹ್ನವಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆಕೆಯ ಡೇಟ್ ಫ್ರೀ ಇಲ್ಲದ ಕಾರಣ ಶೆಡ್ಯೂಲ್ ಬಗ್ಗೆ ನಿರ್ಧಾರ ಆಗಿಲ್ಲ. ಆದರೆ ಶೂಟಿಂಗ್ ಫೆಬ್ರವರಿಯಲ್ಲಿ ಶುರುವಾಗಲಿದೆ ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.