ಅಪ್ಪ ನಾನು ಚಿಕ್ಕವನಿದ್ದಾಗಲೇ ಆತ್ಮಹತ್ಯೆ ಮಾಡ್ಕೊಂಡಿದ್ರು, ಮಗಳು ಹೀಗ್ಮಾಡಿದ್ಲು; ನಟ ವಿಜಯ್ ಆಂಟೋನಿ

By Vinutha Perla  |  First Published Sep 20, 2023, 12:07 PM IST

ನಟ ಮತ್ತು ಸಂಗೀತ ಸಂಯೋಜಕ ವಿಜಯ್ ಆಂಟೋನಿ ಅವರ 16 ವರ್ಷದ ಮಗಳು ಮೀರಾ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಸುದ್ದಿ ತಮಿಳು ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ.  ಹೀಗಿರುವಾಗ, ಆತ್ಮಹತ್ಯೆ ಜಾಗೃತಿ ಕುರಿತು ವಿಜಯ್ ಅವರ ಹಳೆಯ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 


ನಟ ಮತ್ತು ಸಂಗೀತ ಸಂಯೋಜಕ ವಿಜಯ್ ಆಂಟೋನಿ ಅವರ 16 ವರ್ಷದ ಮಗಳು ಮೀರಾ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಸುದ್ದಿ ತಮಿಳು ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ.  ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ  ಸಂತಾಪ ಸೂಚಿಸುತ್ತಿದ್ದಾರೆ. ಇನ್ನೊಂದೆಡೆ ಹದಿಹರೆಯದವರಲ್ಲಿನ ಖಿನ್ನತೆಯ ಸಮಸ್ಯೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಿರುವಾಗ, ಆತ್ಮಹತ್ಯೆ ಜಾಗೃತಿ ಕುರಿತು ವಿಜಯ್ ಅವರ ಹಳೆಯ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ, ವಿಜಯ್ ತನ್ನ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆಯನ್ನು ಆತ್ಮಹತ್ಯೆಯಂದ ಕಳೆದುಕೊಂಡಿದ್ದು, ಕುಟುಂಬ ಅದರಿಂದ ಹೊರ ಬರಲು ತುಂಬಾ ಕಷ್ಟಪಡಬೇಕಾಯಿತು. ಜನರು ಬದುಕನ್ನು ಕೊನೆಗಾಣಿಸುವ ಮುನ್ನ ಯೋಚಿಸಬೇಕು ಎಂದು ನೋವಿನಿಂದ ಹೇಳಿದ್ದರು.

'ಜೀವನವು ಎಷ್ಟೇ ನೋವಿನಿಂದ ಕೂಡಿದ್ದರೂ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಯಾಕೆಂದರೆ ಇದು ನಿಮ್ಮನ್ನು ಪ್ರೀತಿಸುವವರ ಪಾಲಿಗೆ ಹೃದಯ ವಿದ್ರಾವಕ ಕ್ಷಣವಾಗಿದೆ. ನನ್ನ ತಂದೆ ನನಗೆ 7 ವರ್ಷದವನಾಗಿದ್ದಾಗ ಮತ್ತು ನನ್ನ ಸಹೋದರಿಗೆ (Sister) 5 ವರ್ಷದವಳಿದ್ದಾಗ ಆತ್ಮಹತ್ಯೆ ಮಾಡಿಕೊಂಡರು. ನಂತರ ನನ್ನ ತಾಯಿ (Mother) ಎಷ್ಟು ಕಷ್ಟಪಟ್ಟರು ಮತ್ತು ಅವರು ಅನುಭವಿಸಿದ ಕಷ್ಟಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ಎಂದು ವಿಜಯ್ ಒಮ್ಮೆ ಸಂದರ್ಶನ (Interview)ವೊಂದರಲ್ಲಿ ಹೇಳಿದ್ದರು.

Tap to resize

Latest Videos

ನಟ ವಿಜಯ್ ಪುತ್ರಿ ಆತ್ಮಹತ್ಯೆ ಕಾರಣ ನಿಗೂಢ: ಅಪ್ಪ-ಅಮ್ಮನ ಹಳೆಯ ವಿಡಿಯೋ ವೈರಲ್​!

ಮಕ್ಕಳಲ್ಲಿ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ್ದ ವಿಜಯ್
'ಕಲಿಕೆಯ ಬಗೆಗಿನ ಒತ್ತಡ'ದಿಂದ ಮಕ್ಕಳಲ್ಲಿ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾಗುತ್ತಿರುವ ಬಗ್ಗೆಯೂ ವಿಜಯ್ ಮಾತನಾಡಿದ್ದರು. "ಶಾಲೆ ಮುಗಿದ ತಕ್ಷಣ ಅವರನ್ನು ಟ್ಯೂಷನ್‌ಗೆ ಕಳುಹಿಸಲಾಗುತ್ತದೆ. ನೀವು ಅವರಿಗೆ ಯೋಚಿಸಲು ಸಹ ಸಮಯವನ್ನು ನೀಡುತ್ತಿಲ್ಲ, ದಯವಿಟ್ಟು ಹಾಗೆ ಮಾಡಬೇಡಿ. ಅವರಿಗೆ ಸ್ವಲ್ಪ ಅವಕಾಶ ನೀಡಿ. ಯಾಕೆಂದರೆ ಇದು ಸ್ವತಂತ್ರವಾಗಿರುವ ಸಮಯ. ಯಶಸ್ಸಿನ ಬೆನ್ನು ಬಿದ್ದು ಅವರು ನೆಮ್ಮದಿ ಕಳೆದುಕೊಳ್ಳುವಂತೆ ಮಾಡಬೇಡಿ' ಎಂದು ವಿಜಯ್ ಹೇಳಿದ್ದರು.

ಮೀರಾ ಶಾಲಾ-ಕಾಲೇಜಿನಲ್ಲಿ ತುಂಬಾ ಬುದ್ಧಿವಂತೆಯಾಗಿದ್ದರು ಎನ್ನಲಾಗಿದೆ. ಇದರ ನಡುವೆಯೇ ಆಕೆಗೆ ಯಾವುದರ ಮೇಲೆ ಒತ್ತಡ ಇತ್ತು ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ. ಆದರೆ ಹಿಂದೊಮ್ಮೆ ಸಿಟಿ ಟೈಮ್ಸ್‌ಗೆ ನಟ ವಿಜಯ್ ಆಂಟೋನಿ ಸಂದರ್ಶನ ನೀಡಿದ್ದರು. ಅದರ ವಿಡಿಯೋ ವೈರಲ್​ ಆಗಿತ್ತು. ಅದರಲ್ಲಿ ನಟ ತಮಗೆ ದುಬೈ ಮೇಲೆ ಇರುವ ಪ್ರೀತಿಯನ್ನು ಹೇಳಿಕೊಂಡಿದ್ದರು. ದುಬೈನಲ್ಲಿ ಅವಕಾಶಗಳು ಹೇರಳವಾಗಿ ಸಿಗುತ್ತದೆ, ಅದು ಅವಕಾಶಗಳ ನಗರ ಎಂದು ಹೇಳಿದ್ದ ನಟ ವಿಜಯ್​, ತಮ್ಮ ಇಡೀ ಕುಟುಂಬವನ್ನು ದುಬೈಗೆ ಶಿಫ್ಟ್​ ಮಾಡಲು ಯೋಜಿಸುತ್ತಿರುವುದಾಗಿ ತಿಳಿಸಿದ್ದರು. ದುಬೈ ಉತ್ಸಾಹದ, ಅವಕಾಶಗಳ ನಗರ ಎಂದು ಹೊಗಳಿದ್ದ ಅವರು, ತಮ್ಮ ಮಕ್ಕಳ ಶಿಕ್ಷಣವನ್ನೂ ಅಲ್ಲಿಯೇ ಮುಂದುವರೆಸುವ ಆಸಕ್ತಿ ತೋರಿದ್ದರು. ತಮ್ಮ ಮಕ್ಕಳಿಗೆ ದುಬೈನಲ್ಲಿ ಉತ್ತಮ ಭವಿಷ್ಯವಿದ್ದು, ಅಲ್ಲಿಯೇ ಶಿಕ್ಷಣವನ್ನು ಮುಂದುವರಿಸುವುದಾಗಿ ಹೇಳಿದ್ದರು.  

ಖ್ಯಾತ ನಟ ವಿಜಯ್ ಪುತ್ರಿ ಖಿನ್ನತೆಯಿಂದ ಆತ್ಮಹತ್ಯೆ

ಅದೇ ಇನ್ನೊಂದೆಡೆ ಮೀರಾಳ ತಾಯಿ ಹಿಂದೊಮ್ಮೆ ತಮ್ಮ ಪುತ್ರಿಗೆ ಅಭಿನಂದನೆ ಸಲ್ಲಿಸಿದ್ದ ಪೋಸ್ಟ್​ ಕೂಡ ವೈರಲ್​ ಆಗಿದೆ. ಇದರಲ್ಲಿ ಫಾತಿಮಾ ಅವರು ಯಾವ ಕಾರಣಕ್ಕೆ ಮಗಳಿಗೆ ಅಭಿನಂದನೆ ಸಲ್ಲಿಸಿದ್ದರು ಎನ್ನುವುದು ತಿಳಿದಿಲ್ಲ.  ಆದರೆ ಶಾಲೆಯಲ್ಲಿ  ಉನ್ನತ ಅಂಕ ಗಳಿಸಿರುವ ಕಾರಣಕ್ಕೆ ಅಭಿನಂದನೆ ಸಲ್ಲಿಸಿದಂತಿದೆ.  ಮಗಳು ಮೀರಾ ಶಾಲೆಯ ಯೂನಿಫಾರಂನಲ್ಲಿರುವ ಫೋಟೋವನ್ನು ತಾಯಿ ಶೇರ್ ಮಾಡಿದ್ದ ಅಮ್ಮ ಫಾತೀಮಾ,  ಮಗಳ ಸಾಧನೆಯನ್ನು  ಕೊಂಡಾಡಿದ್ದರು. ನೀನೇ ನನ್ನ ಶಕ್ತಿ,  ನನಗೆ ಸಾಂತ್ವನ ಹೇಳುವ ಗೆಳತಿ, ಸದಾ ನಮ್ಮನ್ನು ನಗಿಸುವ ಪೋರಿ ಮೀರಾ ಬೇಬಿಗೆ ಅಭಿನಂದನೆಗಳು ಎಂದು ತಾಯು ಫಾತಿಮಾ ಬರೆದುಕೊಂಡಿದ್ದರು. ಇವೆಲ್ಲವೂ ಈಗ ಮುನ್ನೆಲೆಗೆ ಬಂದಿದೆ. ಮೀರಾಳ ಸಾವಿಗೆ, ಆಕೆಗೆ ಇರುವ ಒತ್ತಡದ ಕುರಿತು ಈಗ ಬೇರೆ ಬೇರೆ ಆ್ಯಂಗಲ್​ಗಳಲ್ಲಿ ಜನರು ಯೋಚನೆ ಶುರು ಮಾಡಿದ್ದಾರೆ. 

click me!