ನಟ ವಿಜಯ್ ಆಂಟೋನಿ ಅವರ ಪುತ್ರಿ ಆತ್ಮಹತ್ಯೆ ಇನ್ನೂ ನಿಗೂಢವಾಗಿದೆ. ಆಕೆಯ ಒತ್ತಡಕ್ಕೆ ಕಾರಣವೇನು ಎನ್ನುವ ನಡುವೆಯೇ ವಿಜಯ್ ಮತ್ತು ಪತ್ನಿಯ ಹಳೆಯ ವಿಡಿಯೋ-ಪೋಸ್ಟ್ ವೈರಲ್ ಆಗಿದೆ.
ನಟ ಮತ್ತು ಸಂಗೀತ ಸಂಯೋಜಕ ವಿಜಯ್ ಆಂಟೋನಿ ಅವರ 16 ವರ್ಷದ ಮಗಳು ಮೀರಾ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಸುದ್ದಿ ತಮಿಳು ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ. ಹಲವಾರು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸುತ್ತಿದ್ದರೆ, ಅದೇ ಇನ್ನೊಂದೆಡೆ ಹದಿಹರೆಯದವರಲ್ಲಿನ ಖಿನ್ನತೆಯ ಪ್ರಶ್ನೆಯನ್ನು ಎತ್ತಿತೋರಿಸುತ್ತಿದೆ. ಏಕೆಂದರೆ ಮೀರಾ ಖಿನ್ನತೆಯಿಂದ ಬಳಲುತ್ತಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದ್ದರಿಂದ ಯುವ ಸಮಯದಾಯದಲ್ಲಿನ ಖಿನ್ನತೆ, ಒತ್ತಡದ ಕುರಿತು ಇದೀಗ ಸಾಕಷ್ಟು ಚರ್ಚೆ ಉಂಟು ಮಾಡಿದೆ. ಮೀರಾಗೆ ಯಾವ ರೀತಿಯ ಖಿನ್ನತೆ, ಒತ್ತಡ ಇತ್ತು ಎನ್ನುವ ಬಗ್ಗೆ ಇದುವರೆಗೂ ಸ್ಪಷ್ಟವಾಗಿಲ್ಲ. ಕುಟುಂಬಸ್ಥರು ಕೂಡ ಈ ಬಗ್ಗೆ ಮಾತನಾಡಲಿಲ್ಲ. ಆದರೆ ಆಕೆಯ ಸಾವಿನ ನಂತರ ನಟ ವಿಜಯ್ ಅವರ ಹಳೆಯ ವಿಡಿಯೋ ಹಾಗೂ ಮೀರಾಳ ಅಮ್ಮ ತಾಯು ಫಾತಿಮಾ ಅವರ ಪೋಸ್ಟ್ ಒಂದು ಸಕತ್ ಸುದ್ದಿ ಮಾಡುತ್ತಿದೆ.
ಮೀರಾ ಶಾಲಾ-ಕಾಲೇಜಿನಲ್ಲಿ ತುಂಬಾ ಬುದ್ಧಿವಂತೆಯಾಗಿದ್ದರು ಎನ್ನಲಾಗಿದೆ. ಇದರ ನಡುವೆಯೇ ಆಕೆಗೆ ಯಾವುದರ ಮೇಲೆ ಒತ್ತಡ ಇತ್ತು ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ. ಆದರೆ ಹಿಂದೊಮ್ಮೆ ಸಿಟಿ ಟೈಮ್ಸ್‌ಗೆ ನಟ ವಿಜಯ್ ಆಂಟೋನಿ ಸಂದರ್ಶನ ನೀಡಿದ್ದರು. ಅದರ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ನಟ ತಮಗೆ ದುಬೈ ಮೇಲೆ ಇರುವ ಪ್ರೀತಿಯನ್ನು ಹೇಳಿಕೊಂಡಿದ್ದರು. ದುಬೈನಲ್ಲಿ ಅವಕಾಶಗಳು ಹೇರಳವಾಗಿ ಸಿಗುತ್ತದೆ, ಅದು ಅವಕಾಶಗಳ ನಗರ ಎಂದು ಹೇಳಿದ್ದ ನಟ ವಿಜಯ್, ತಮ್ಮ ಇಡೀ ಕುಟುಂಬವನ್ನು ದುಬೈಗೆ ಶಿಫ್ಟ್ ಮಾಡಲು ಯೋಜಿಸುತ್ತಿರುವುದಾಗಿ ತಿಳಿಸಿದ್ದರು. ದುಬೈ ಉತ್ಸಾಹದ, ಅವಕಾಶಗಳ ನಗರ ಎಂದು ಹೊಗಳಿದ್ದ ಅವರು, ತಮ್ಮ ಮಕ್ಕಳ ಶಿಕ್ಷಣವನ್ನೂ ಅಲ್ಲಿಯೇ ಮುಂದುವರೆಸುವ ಆಸಕ್ತಿ ತೋರಿದ್ದರು. ತಮ್ಮ ಮಕ್ಕಳಿಗೆ ದುಬೈನಲ್ಲಿ ಉತ್ತಮ ಭವಿಷ್ಯವಿದ್ದು, ಅಲ್ಲಿಯೇ ಶಿಕ್ಷಣವನ್ನು ಮುಂದುವರಿಸುವುದಾಗಿ ಹೇಳಿದ್ದರು.
ಬಾಲಿವುಡ್ ಬ್ಯೂಟಿ ಶ್ರುತಿ ಹಾಸನ್ ಹಿಂಬಾಲಿಸಿದ ನಿಗೂಢ ವ್ಯಕ್ತಿ! ಬೆಚ್ಚಿಬಿದ್ದ ನಟಿ
ಅದೇ ಇನ್ನೊಂದೆಡೆ ಮೀರಾಳ ತಾಯಿ ಹಿಂದೊಮ್ಮೆ ತಮ್ಮ ಪುತ್ರಿಗೆ ಅಭಿನಂದನೆ ಸಲ್ಲಿಸಿದ್ದ ಪೋಸ್ಟ್ ಕೂಡ ವೈರಲ್ ಆಗಿದೆ. ಇದರಲ್ಲಿ ಫಾತಿಮಾ ಅವರು ಯಾವ ಕಾರಣಕ್ಕೆ ಮಗಳಿಗೆ ಅಭಿನಂದನೆ ಸಲ್ಲಿಸಿದ್ದರು ಎನ್ನುವುದು ತಿಳಿದಿಲ್ಲ. ಆದರೆ ಶಾಲೆಯಲ್ಲಿ ಉನ್ನತ ಅಂಕ ಗಳಿಸಿರುವ ಕಾರಣಕ್ಕೆ ಅಭಿನಂದನೆ ಸಲ್ಲಿಸಿದಂತಿದೆ. ಮಗಳು ಮೀರಾ ಶಾಲೆಯ ಯೂನಿಫಾರಂನಲ್ಲಿರುವ ಫೋಟೋವನ್ನು ತಾಯಿ ಶೇರ್ ಮಾಡಿದ್ದ ಅಮ್ಮ ಫಾತೀಮಾ, ಮಗಳ ಸಾಧನೆಯನ್ನು ಕೊಂಡಾಡಿದ್ದರು. ನೀನೇ ನನ್ನ ಶಕ್ತಿ, ನನಗೆ ಸಾಂತ್ವನ ಹೇಳುವ ಗೆಳತಿ, ಸದಾ ನಮ್ಮನ್ನು ನಗಿಸುವ ಪೋರಿ ಮೀರಾ ಬೇಬಿಗೆ ಅಭಿನಂದನೆಗಳು ಎಂದು ತಾಯು ಫಾತಿಮಾ ಬರೆದುಕೊಂಡಿದ್ದರು. ಇವೆಲ್ಲವೂ ಈಗ ಮುನ್ನೆಲೆಗೆ ಬಂದಿದೆ. ಮೀರಾಳ ಸಾವಿಗೆ, ಆಕೆಗೆ ಇರುವ ಒತ್ತಡದ ಕುರಿತು ಈಗ ಬೇರೆ ಬೇರೆ ಆ್ಯಂಗಲ್ಗಳಲ್ಲಿ ಜನರು ಯೋಚನೆ ಶುರು ಮಾಡಿದ್ದಾರೆ.
ಅಂದಹಾಗೆ ಮೀರಾಗೆ 16 ವರ್ಷ ವಯಸ್ಸಾಗಿತ್ತು. ಚೆನ್ನೈನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವರದಿಗಳ ಪ್ರಕಾರ, ಆಕೆ ಒತ್ತಡದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು ಎನ್ನಲಾಗಿದೆ. ಚೆನ್ನೈನಲ್ಲಿಯೇ ದ್ವಿತೀಯ ಪಿಯುಸಿ ಓದುತ್ತಿದ್ದ ಮೀರಾ, ಕಲಿಕೆಯಲ್ಲಿ ಜಾಣ ಹುಡುಗಿ. ವಿಜಯ್ ಆಂಟೋನಿ ತನ್ನ ಕುಟುಂಬದೊಂದಿಗೆ ಚೆನ್ನೈನ ಡಿಡಿಕೆ ರಸ್ತೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬೆಳಗ್ಗೆ ಮೀರಾಳ ಕೊಠಡಿಯ ಬಾಗಿಲು ಬಹಳ ಹೊತ್ತಾದರೂ ತೆರೆಯದ ಕಾರಣ ಬಾಗಿಲು ತೆರೆದು ನೋಡಿದಾಗ ಲಾರಾ ನೇಣು ಬಿಗಿದುಕೊಂಡಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಮನೆಯ ಸಹಾಯಕರು ಕೋಣೆಯಲ್ಲಿದ್ದ ಮೀರಾ ಅವರನ್ನು ಚೆನ್ನೈನ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಳುವ ಬಗ್ಗೆ ರಶ್ಮಿಕಾಗೆ ಅಮ್ಮನ ಪಾಠ: ಇಲ್ಲಸಲ್ಲದ ಅಡ್ವೈಸ್ ಕೊಟ್ಟು ಜನರ ತಲೆಕೆಡಿಸಬೇಡಿ ಎಂದ ಫ್ಯಾನ್ಸ್!