
ಇತ್ತೀಚಿಗೆ ಶಕುಂತಲಾ ದೇವಿ ಬಯೋಪಿಕ್‌ನಲ್ಲಿ ಅಭಿನಯಿಸಿದ ವಿದ್ಯಾ ಬಾಲನ್‌ರ ಮುಂದಿನ ಚಿತ್ರ ಯಾವುದು ಎಂದು ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಬಿಗ್ ಸರ್ಪ್ರೈಸ್. ಕೆಲ ಮೂಲಕಗಳ ಪ್ರಕಾರ ಇದು ಕನ್ಫರ್ಮ್ ನ್ಯೂಸ್ ಎಂದೂ ಹೇಳಬಹುದು.
ಇದೇ ಮೊದಲ ಬಾರಿಗೆ ಮಹೇಶ್ ಬಾಬು ಹಾಗೂ ವಿದ್ಯಾ ಬಾಲನ್ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು. ಇಬ್ಬರು ರೋಮ್ಯಾನ್ಸ್ ಮಾಡಲಿದ್ದಾರಾ? ಅಥವಾ ಖಡಕ್ ಅಧಿಕಾರಿಗಳ ಪಾತ್ರವೇ ಎಂದು ಗೊಂದಲದಲ್ಲಿದ ಫ್ಯಾನ್ಸ್ ಉತ್ತರ ಸಿಕ್ಕಿದೆ.
ಸಹೋದರಿ ವಿದ್ಯಾ:
ಹೌದು! ವಿದ್ಯಾ ಬಾಲನ್ ಚಿತ್ರದಲ್ಲಿ ಮಹೇಶ್ ಬಾಬುಗೆ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಮೊದಲ ಬಾರಿ ಟಾಲಿವುಡ್ ಸ್ಟಾರ್ ನಟನಿಗೆ ವಿದ್ಯಾ ಸಹೋದರಿಯಾಗಿ ಕಾಣಿಸಿಕೊಳ್ಳುತ್ತಿದ್ದು ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಾಪ್ ನಟಿಯಾಗಿ ಸಹೋದರಿಯಾಗಿರುವುದು ನಿಮಗೆ ಓಕೆ ನಾ? ಎಂದು ಪ್ರಶ್ನಿಸಿದ್ದಾರೆ. ಈ ವಿಚಾರದ ಬಗ್ಗೆ ವಿದ್ಯಾ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಾಯಕಿಯಾಗಿ ಮಿಂಚಲಿದ್ದಾರೆ. ವಿಲನ್ ಪಾತ್ರವನ್ನು ಕನ್ನಡ ನಟ ಕಿಚ್ಚ ಸುದೀಪ್ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು ಆದರೆ ಇನ್ನಿತರ ಚಿತ್ರಗಳ ಜೊತೆ ದಿನಾಂಕ ಕ್ಲಾಶ್ ಆಗುವ ಕಾರಣ ಅನಿಲ್ ಕಪೂರ್ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಕೊರೋನಾ ಇದ್ದ ಕಾರಣ ಸಿನಿಮಾ ಕಥೆ ಹಾಗೂ ಪಾತ್ರ ಆಯ್ಕೆಯಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ದಸರಾರ ಹಬ್ಬ ಪ್ರಯುಕ್ತ ಚಿತ್ರೀಕರಣ ಪ್ರಾರಂಭಿಸುತ್ತಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.