ಬಾಲಿವುಡ್ ಸೆಲೆಬ್ರಿಟಿಗಳು ಬಟ್ಟೆಗಾಗಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಖರ್ಚು ಮಾಡುವುದರಲ್ಲಿ ಯಾವಾಗಲೂ ಮುಂದಿರುತ್ತಾರೆ. ಒಮ್ಮೆ ಧರಿಸಿದ ಡ್ರೆಸ್‌ನ್ನು ಮತ್ತೆ ರಿಪೀಟ್ ಮಾಡುವುದು ಕಡಿಮೆ. ಫ್ಯಾಷನ್, ಟ್ರೆಂಡ್ ದಿರಿಸಿಗಳಿಗಾಗಿ ಸಾಕಷ್ಟು ದುಡ್ಡು ಸುರಿಯುತ್ತಾರೆ. ಆದ್ರೆ ಬಾಲಿವುಡ್‌ನಲ್ಲಿ ಕೋಟಿಗಟ್ಟಲೆ ದುಡಿಯೋ ಈ ನಟಿಯಲ್ಲಿ ಕೇವಲ ಬೆರಳೆಣಿಕೆ ಸಂಖ್ಯೆಯ ಸ್ಯಾರಿಗಳಿವೆ ಅನ್ನೋದು ನಿಮ್ಗೆ ಗೊತ್ತಿದ್ಯಾ?
ಬಾಲಿವುಡ್ ಅಂದ್ರೆ ಥಳುಕು-ಬಳುಕಿನ ಲೋಕ..ಎಲ್ಲಾ ಫ್ಯಾಷನ್, ಟ್ರೆಂಡ್‌ಗಳು ಇಲ್ಲಿಂದಲೇ ಆರಂಭವಾಗುತ್ತವೆ. ಸ್ಟೈಲಿಶ್ ಸ್ಯಾರಿ, ಡ್ರೆಸ್ ಹೀಗೆ ಉಡುಪಿಗಾಗಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಖರ್ಚು ಮಾಡುವುದರಲ್ಲಿ ಹಿಂದಿ ತಾರೆಯರು ಯಾವಾಗಲೂ ಮುಂದಿರುತ್ತಾರೆ. ಪಾರ್ಟಿ-ಸಮಾರಂಭಗಳಲ್ಲಿ ಎಕ್ಸ್‌ಪೋಸಿಂಗ್ ಡ್ರೆಸ್‌ನಲ್ಲಿ ಮಿಂಚುತ್ತಾರೆ. ಒಮ್ಮೆ ಧರಿಸಿದ ಡ್ರೆಸ್‌ನ್ನು ಮತ್ತೆ ರಿಪೀಟ್ ಮಾಡುವುದು ಕಡಿಮೆ. ಫ್ಯಾಷನ್, ಟ್ರೆಂಡ್ ದಿರಿಸಿಗಳಿಗಾಗಿ ಸೆಲೆಬ್ರಿಟಿಗಳು ಸಾಕಷ್ಟು ಸುರಿಯುತ್ತಾರೆ. ಆದ್ರೆ ಬಾಲಿವುಡ್‌ನಲ್ಲಿ ಕೋಟಿಗಟ್ಟಲೆ ದುಡಿಯೋ ಈ ನಟಿಯಲ್ಲಿ ಕೇವಲ ಬೆರಳೆಣಿಕೆ ಸಂಖ್ಯೆಯ ಸ್ಯಾರಿಗಳಿವೆ ಅನ್ನೋದು ನಿಮ್ಗೆ ಗೊತ್ತಿದ್ಯಾ?
ಪ್ರಸ್ತುತ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ನಟಿಯರಲ್ಲಿ ವಿದ್ಯಾಬಾಲನ್ ಸಹ ಒಬ್ಬರು. ಯಾವಾಗ್ಲೂ ಸ್ಯಾರಿ ಲುಕ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ವಿದ್ಯಾಬಾಲನ್ ತಾವು ಫ್ಯಾಷನ್‌ನ್ನು ಅತೀ ಕಡಿಮೆ ಅನುಸರಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಬಟ್ಟೆಗಾಗಿ ನಾನು ಅತೀ ಕಡಿಮೆ ಖರ್ಚು ಮಾಡುತ್ತೇನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
undefined
ಸ್ಯಾರಿ ಲುಕ್‌ಗೇ ಫೇಮಸ್ ಆಗಿರೋ ವಿದ್ಯಾ ಬಾಲನ್ ಬಳಿಯಿರೋದು ಇಷ್ಟೇ ಸೀರೆನಾ?
ಇತ್ತೀಚಿನ ಸಂದರ್ಶನದಲ್ಲಿ ವಿದ್ಯಾ ಬಾಲನ್ ತಾನು ಮಿನಿಮಲಿಸ್ಟ್ ಎಂದು ಹೇಳಿದ್ದಾರೆ. ನಾನು ಕೇವಲ 25 ಸೀರೆಗಳನ್ನು ಹೊಂದಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ, ವಿದ್ಯಾ ಯೂಟ್ಯೂಬ್ ಟಾಕ್ ಶೋ, ಅನ್‌ಫಿಲ್ಟರ್ ಬೈ ಸಮ್ದೀಶ್‌ನಲ್ಲಿ ಕಾಣಿಸಿಕೊಂಡ ವಿದ್ಯಾ ಬಾಲನ್ ತಮ್ಮ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡರು.
'ನಾನು ಯಾವಾಗ್ಲೂ ಸ್ಟೈಲಿಶ್ ಸೀರೆ ಧರಿಸುವ ಕಾರಣ ಜನರು ಹೆಚ್ಚು ಸ್ಯಾರಿ ಕಲೆಕ್ಷನ್ ಹೊಂದಿದ್ದೇನೆ ಎಂದು ಅಂದುಕೊಳ್ಳುತ್ತಾರೆ. ಆದರೆ ನಾನು ಕೇವಲ 25 ಸೀರೆಗಳನ್ನು ಹೊಂದಿದ್ದೇನೆ ಮತ್ತು ಸಾಮಾನ್ಯವಾಗಿ ತನ್ನ ಸೀರೆಗಳನ್ನು ಎಂದಿಗೂ ಪುನರಾವರ್ತಿಸುವುದಿಲ್ಲವಾದ ಕಾರಣ ಅವುಗಳನ್ನು ಜನರಿಗೆ ನೀಡುತ್ತಿರುತ್ತೇನೆ' ಎಂದು ವಿದ್ಯಾ ಬಾಲನ್ ಹೇಳಿದ್ದಾರೆ. 'ನನಗೆ ಭಾವನಾತ್ಮಕ ಸಂಬಂಧವನ್ನು ಹೊಂದಲು ಕಾರಣವಾಗುವ ಕೆಲವು ಸೀರೆಯನ್ನಷ್ಟೇ ನಾನು ಇಟ್ಟುಕೊಂಡಿರುತ್ತೇನೆ' ಎಂದು ವಿದ್ಯಾ ಬಾಲನ್ ತಿಳಿಸಿದ್ದಾರೆ.
ಬಾಲಿವುಡ್ ಸ್ಟಾರ್ ನಟರ ಇನ್ನೊಂದು ಮುಖ ಅನಾವರಣಗೊಳಿಸಿದ ನಟಿ ವಿದ್ಯಾ ಬಾಲನ್
ವಿದ್ಯಾ ಬಾಲನ್ ಸಿನಿಜರ್ನಿ
ಜನವರಿ 1, 1989ರಂದು ಮಧ್ಯಮ ವರ್ಗದ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ವಿದ್ಯಾ ಬಾಲನ್ ಜನಿಸಿದರು. ಆದರೆ ಬಾಲ್ಯದಲ್ಲಿ ಅವರು ಎಲ್ಲಾ ಮಕ್ಕಳೊಂದಿಗೆ ಆಟವಾಡಲು ಇಷ್ಟಪಡಲಿಲ್ಲ. ಮನೆಯೊಳಗೆ ಕುಳಿತು ತನ್ನ ನೆಚ್ಚಿನ ಆಹಾರವನ್ನು ತಿನ್ನುತ್ತಿದ್ದರು. ಒಂದು ದಿನ, ವಿದ್ಯಾ, ಮಾಧುರಿ ದೀಕ್ಷಿತ್ ಅವರ ಫೇಮಸ್ ಸಾಂಗ್ 'ಏಕ್ ದೋ ತೀನ್' ನೃತ್ಯವನ್ನು ನೋಡಿದರು. ಡ್ಯಾನ್ಸ್ ನೋಡಿ ತಾನೂ ಸಹ ಮಾಧುರಿ ದೀಕ್ಷಿತ್ ಅವರಂತೆ ನಟಿಯಾಗಬೇಕೆಂದು ಬಯಸಿದರು. ಸತತ ಮೂರು ಗಂಟೆಗಳ ಕಾಲ ತಮ್ಮ ಕೋಣೆಯ ಕನ್ನಡಿಯ ಮುಂದೆ ಹಾಡಿಗೆ ನೃತ್ಯ ಮಾಡುತ್ತಿದ್ದರು.
ಕಾಲೇಜಿನಲ್ಲಿ, ವಿದ್ಯಾ ಬಾಲನ್ ನಟನಾ ಕಾರ್ಯಾಗಾರಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಕಾಲೇಜು ಮುಗಿಸಿದ ನಂತರ ವಿದ್ಯಾಗೆ ಏಕ್ತಾ ಕಪೂರ್ ಅವರ ಸಿಟ್ಕಾಮ್ ಹಮ್ ಪಾಂಚ್‌ಗಾಗಿ ಆಫರ್ ಸಿಕ್ಕಿತು. ಹಮ್ ಪಾಂಚ್ ನಂತರ ವಿದ್ಯಾ ಹಲವಾರು ಟಿವಿ ಜಾಹೀರಾತುಗಳನ್ನು ಮಾಡಿದರು. ವಿದ್ಯಾ ಅವರ ಮೊದಲ ಸಂಬಳ ತಿಂಗಳಿಗೆ 1200 ರೂ. ಆಗಿತ್ತು ಜೊತೆಗೆ ಪ್ರಯಾಣ ಭತ್ಯೆ 25 ರೂ. ದೊರಕಿತ್ತು.
ವಿದ್ಯಾ ಬಾಲನ್ ಫ್ಯಾಶನ್ ಸೆನ್ಸ್‌ಗಾಗಿ ಬಾಲಿವುಡ್‌ನ ಮಂದಿ ಆಕೆಯನ್ನು ಕೆಟ್ಟದಾಗಿ ಟ್ರೋಲ್ ಮಾಡಿದ ಸಮಯವಿತ್ತು. ಹಲವಾರು ಪ್ರಾಜೆಕ್ಟ್‌ಗಳಿಂದ ವಿದ್ಯಾ ಬಾಲನ್‌ರನ್ನು ತಿರಸ್ಕರಿಸಲಾಯಿತು. ಪ್ರಸ್ತುತ ವಿದ್ಯಾ ಬಾಲನ್ ಅವರ ನಿವ್ವಳ ಮೌಲ್ಯವು 18 ಮಿಲಿಯನ್ ಅಂದರೆ ಬರೋಬ್ಬರಿ 136 ಕೋಟಿ ರೂ. ಆಗಿದೆ ಎಂದು ತಿಳಿದುಬಂದಿದೆ.