ಹಾಕಿದ್ದೇ ಚೋಟುದ್ದ ಡ್ರೆಸ್​, ಗಾಳಿಗೆ ಹಾರೋದಾ? ಬಾಯ್​ಫ್ರೆಂಡ್​ ಜತೆಗಿರುವಾಗ ಹೃತಿಕ್​ ಮಾಜಿ ಪತ್ನಿಗೆ ಹೀಗಾಗೋದಾ?

Published : Apr 25, 2024, 05:30 PM ISTUpdated : Apr 25, 2024, 05:35 PM IST
ಹಾಕಿದ್ದೇ ಚೋಟುದ್ದ ಡ್ರೆಸ್​, ಗಾಳಿಗೆ ಹಾರೋದಾ? ಬಾಯ್​ಫ್ರೆಂಡ್​ ಜತೆಗಿರುವಾಗ ಹೃತಿಕ್​ ಮಾಜಿ ಪತ್ನಿಗೆ ಹೀಗಾಗೋದಾ?

ಸಾರಾಂಶ

ನಟ ಹೃತಿಕ್​ ರೋಷನ್​ ಮಾಜಿ ಪತ್ನಿ ಸುಸ್ಸಾನೆ ಖಾನ್​ ಬಾಯ್​ಫ್ರೆಂಡ್​​ ಜೊತೆಗಿರುವಾಗ ಗಾಳಿ ಬಂದು ಮಿನಿ ಸ್ಕರ್ಟ್​ ಹಾರಿದ್ದು ಮುಂದೇನಾಯ್ತು ನೋಡಿ..   

ಈಗೀಗ ನಟಿಯರಂತೂ ಪೈಪೋಟಿಗೆ ಬಿದ್ದವರಂತೆ ಚೋಟುದ್ದದ ಡ್ರೆಸ್​ ಹಾಕುತ್ತಾರೆ. ಅಲ್ಲಲ್ಲಿ ಮುಚ್ಚಿದ್ದು ಬಿಟ್ಟರೆ ಬಹುತೇಕ  ಅಂಗಾಂಗಳು ಕಾಣುತ್ತಲೇ ಇರುವುದು ಮಾಮೂಲಾಗಿದೆ. ಇನ್ನು ಕೆಲವರು ದೊಡ್ಡ ದೊಡ್ಡ ಪಾರ್ಟಿಗಳಿಗೆ ಬರುವಾಗ ಮೂರ್ನಾಲ್ಕು ಮಂದಿ ಹಿಡಿದುಯುವಷ್ಟು ತೂಕದ ಡ್ರೆಸ್​ ಹಾಕಿಕೊಂಡು ನಡೆದಾಡಲು ಪರದಾಡುತ್ತಾರೆ. ಅವರ ಡ್ರೆಸ್​ ಹಿಡಿದುಕೊಳ್ಳುವುದಕ್ಕಾಗಿಯೇ ನಾಲ್ಕೈದು ಸಹಾಯಕರನ್ನೂ ನೇಮಿಸಿಕೊಂಡಿರುತ್ತಾರೆ. ಹೈ ಹೀಲ್ಸ್​ ಚಪ್ಪಲಿ ಧರಿಸಿ, ನಡೆಯಲು ಆಗದೇ ಒದ್ದಾಡುತ್ತಾರೆ. ಭಾರಿ ಡ್ರೆಸ್​ ಕಾಲಿಗೆ ಎಟುಕಿ ಬೀಳಿರುವ ಉದಾಹರಣೆಗಳೂ ಇವೆ. ಇನ್ನು ಕೆಲವು ನಟಿಯರು ಇಡೀ ದೇಹ ಪ್ರದರ್ಶನ ಮಾಡುವಂಥ ಇಲ್ಲವೇ ಸಾಧ್ಯವಾದಷ್ಟು ಮೇಲೆ ಇರುವ ಮಿನಿ ಸ್ಕರ್ಟ್​ ಧರಿಸಿ ಬಂದು ಅದನ್ನು ಸರಿಪಡಿಸಿಕೊಳ್ಳುವುದರಲ್ಲಿಯೇ ದಿನ ಕಳೆಯುತ್ತಾರೆ. ಇವೆಲ್ಲಾ ನೋಡಿದಾಗ ಭಾರಿ ವಿಚಿತ್ರ ಎನಿಸಿದರೂ ಸಿನಿ ತಾರೆಯರ ಫ್ಯಾಷನ್​ ಲೋಕವೇ ಬಲು ವಿಚಿತ್ರ ಎನಿಸುವುದು ಉಂಟು. 

ಇದೀಗ ಬಾಲಿವುಡ್​ ನಟ ಹೃತಿಕ್​ ರೋಷನ್​ ಮಾಜಿ ಪತ್ನಿ ಸುಸ್ಸಾನೆ ಖಾನ್​ ಅವರ ವಿಚಿತ್ರ ಎನಿಸುವ ವಿಡಿಯೋ ಒಂದು ಸಕತ್​ ವೈರಲ್​ ಆಗಿದ್ದು, ಟ್ರೋಲ್​ ಕೂಡ ಆಗುತ್ತಿದೆ. ಅಷ್ಟಕ್ಕೂ ಇದರಲ್ಲಿ ಸುಸ್ಸಾನೆ ಖಾನ್​, ಹಾಕಿದ್ದೇ ಚೋಟುದ್ದ ಡ್ರೆಸ್​. ಬಾಯ್​ಫ್ರೆಂಡ್​​ ಜೊತೆಗೆ ಫೋಟೋಶೂಟ್​ ಮಾಡಿಸಿಕೊಳ್ತಿರುವಾಗಲೇ ಗಾಳಿ ಬಂದಿದೆ. ಡ್ರೆಸ್​ ಅನ್ನು ಆದಷ್ಟು ಹಿಡಿದುಕೊಳ್ಳಲು ನೋಡಿದರೂ ಅದು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರು ಫೋಟೋಶೂಟ್​ ಮಾಡಿಕೊಳ್ಳದೇ ಮುಜುಗರಕ್ಕೆ (?) ಒಳಗಾಗಿ ಅಲ್ಲಿಂದ ಹೋದರು. ಈ ವಿಡಿಯೋ ಸಕತ್​ ಟ್ರೋಲ್​ ಆಗುತ್ತಿದೆ. ಹೃತಿಕ್​ ರೋಷನ್​ ಬಿಟ್ಟ ಮೇಲೆ 48 ವರ್ಷದ ಸುಸ್ಸಾನೆ ಖಾನ್​ ಬಾಯ್​ಫ್ರೆಂಡ್​ ಜೊತೆ ಡೇಟಿಂಗ್​ನಲ್ಲಿದ್ದಾರೆ. ಈ ಸಮಯದಲ್ಲಿ ಇಂಥ ಡ್ರೆಸ್​ ಹಾಕಿ ಬಂದು ಈಗ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

ಸತ್ತೆನೆಂದು ಸುದ್ದಿ ಮಾಡಿದ ಬಳಿಕ ಈ ಅವತಾರದಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ: ವಿಡಿಯೋ ನೋಡಿ ತರಾಟೆ

ಹೃತಿಕ್​ ರೋಷನ್​ ಮತ್ತು ಸುಸ್ಸಾನೇ ಖಾನ್​ ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಮದ್ವೆಯಾಗಿರುವಾಗಲೇ ಕಂಗನಾ ರಣಾವತ್​ ಜೊತೆ ಅಫೇರ್​ ಇಟ್ಟುಕೊಂಡಿದ್ದ ಹೃತಿಕ್​ ಕೊನೆಗೂ ಅವರಿಗೂ ಕೈಕೊಟ್ಟು, ಸುಸ್ಸಾನೇ ಖಾನ್​ಗೂ ಡಿವೋರ್ಸ್​ ಕೊಟ್ಟು, ಸದ್ಯ  ಗಾಯಕಿ ಸಬಾ ಅಜಾದ್ ಜೊತೆ ಸಂಬಂಧದಲ್ಲಿದ್ದಾರೆ. ಇವರ ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ. ಕೆಲ ತಿಂಗಳ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ತಿಳಿಸಿದ್ದರು. ಇದರ ವಿಡಿಯೋ ಭಾರಿ ಸದ್ದು ಮಾಡಿತ್ತು. ಸಬಾ ಜೊತೆ ಡೇಟಿಂಗ್ ಮಾಡುತ್ತಾ ಕೆಲ ವರ್ಷಗಳೇ ಆಗಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಜೋಡಿ ಮಾತ್ರ ತುಟಿಕ್​ ಪಿಟಿಕ್​ ಅಂದಿರಲಿಲ್ಲ.  ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. 

ಸಿನಿಮಾ ಕೆಲಸಗಳಿಂದ ಸಣ್ಣ ಬ್ರೇಕ್​ ತೆಗೆದುಕೊಂಡಿರೋ ನಟ,  ಅರ್ಜೆಂಟೀನಾದಲ್ಲಿ ಗರ್ಲ್​ಫ್ರೆಂಡ್​ ಜೊತೆ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅದರ ಫೋಟೋಗಳನ್ನು ಕೆಲ ತಿಂಗಳ ಹಿಂದೆ ಖುಲ್ಲಂ ಖುಲ್ಲಾ ಆಗಿ ಶೇರ್ ಮಾಡಿಕೊಂಡಿದ್ದರು. ಮದುವೆಯ ಬಗ್ಗೆ ಏನೂ ಹೇಳದ ಈ ಜೋಡಿ ಮಾತ್ರ ಟೂರ್​ ಎಂಜಾಯ್​ ಮಾಡುತ್ತಿದ್ದು, ಅವರ ಫೋಟೋ ವೈರಲ್​ ಆಗುತ್ತಿವೆ. ಅದೇ ಇನ್ನೊಂದೆಡೆ ಸುಸ್ಸಾನೇ ಖಾನ್ ತಮಗಿಂತ ಸುಮಾರು ಹತ್ತು ವರ್ಷ ಚಿಕ್ಕವರಾಗಿರುವ  ನಟ ಆರ್ಸ್ಲಾನ್ ಗೋನಿಯ ಜೊತೆ ಡೇಟಿಂಗ್​ನಲ್ಲಿದ್ದಾರೆ.  ಆಗಾಗ್ಗೆ ತಮ್ಮ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. 

ಚಿಕ್ಕ ವಯಸ್ಸಲ್ಲೇ ಅಲ್ಲಿ ಕರೆದೊಯ್ದರು.. ಏನಾಗ್ತಿದೆ ಎಂದು ಅರಿವಷ್ಟರಲ್ಲಿಯೇ.. ಪೋರ್ನ್​ ಸ್ಟಾರ್​ ಕರಾಳ ಅಧ್ಯಾಯ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ
ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!