ಹೆಚ್ಚುತ್ತಿದೆ ಪತಿ-ಪತ್ನಿಯನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳುವ ಟ್ರೆಂಡ್​! ನಟಿ ವಿದ್ಯಾ ಬಾಲನ್​ ಹೇಳಿದ್ದೇನು?

By Suchethana D  |  First Published Sep 27, 2024, 4:13 PM IST

ಏಕಪತ್ನಿಯಲ್ಲಿ ನಂಬಿಕೆ ಇದೆ ಎಂದಿರುವ ನಟಿ ವಿದ್ಯಾ ಬಾಲನ್​, ಸಂಗಾತಿಯನ್ನು ಬೇರೊಬ್ಬರ ಜೊತೆ ಹಂಚಿಕೊಳ್ಳುವ ಟ್ರೆಂಡ್​ ಕುರಿತು ಹೇಳಿದ್ದೇನು? 
 


ದಾಂಪತ್ಯ, ಸಂಬಂಧ ಇವುಗಳಿಗೆಲ್ಲವೂ ಭಾರತದಲ್ಲಿ ಅದರದ್ದೇ ಆದ ಮಹತ್ವವಿದೆ. ಒಂದು ಕುಟುಂಬದ ಪರಿಕಲ್ಪನೆ ಎಂದರೆ ವಿದೇಶಿಗರೂ ಭಾರತದತ್ತ ಬೆರಳು ಮಾಡಿ ತೋರಿಸುತ್ತಾರೆ. ಆದರೆ ಇದ್ದದ್ದು ಬಿಟ್ಟು, ಇಲ್ಲದದುರ ಕಡೆ ಗಮನ ಹೋಗುವುದು ಸಾಮಾನ್ಯವಲ್ಲವೆ. ಇದೇ ಕಾರಣಕ್ಕೆ ಸಂಬಂಧದಲ್ಲಿಯೂ ಕೆಲವು ದೇಶಗಳ ಅಸಂಬಂಧ, ಅತ್ಯಂತ ಅಸಹ್ಯ ಎನ್ನುವ ಪದ್ಧತಿ ಭಾರತಕ್ಕೂ ಕಾಲಿಟ್ಟು ಕೆಲವು ದಶಕಗಳೇ ಕಳೆದು ಹೋಗಿವೆ. ಕೆಲವು ವರ್ಷಗಳ ಹಿಂದೆ ಸೆಲೆಬ್ರಿಟಿಗಳು, ಆಗರ್ಭ ಶ್ರೀಮಂತರಿಗೆ ಸೀಮಿತವಾಗಿದ್ದ ಈ ಅನಿಷ್ಠ ಪದ್ಧತಿ ಇದೀಗ ಸಂಪ್ರದಾಯಸ್ಥರು ಎನಿಸಿಕೊಂಡಿರುವ ಕೆಲವು ಮನೆಗಳಲ್ಲಿಯೂ ನಡೆಯುತ್ತಿದ್ದರೂ ಅದು ಬಾಹ್ಯ ಜಗತ್ತಿಗೆ ಗೊತ್ತಾಗುತ್ತಿಲ್ಲವಷ್ಟೇ. ಅದೇ ಪದ್ಧತಿ ಎಂದರೆ ಗೆಳೆಯ-ಗೆಳತಿ ಅಥವಾ ಪತಿ-ಪತ್ನಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು, ಇಲ್ಲವೇ ಒಂದಕ್ಕಿಂತ ಹೆಚ್ಚು ಜನರ ಜೊತೆ ದೈಹಿಕ ಸಂಬಂಧ ಹೊಂದುವುದು. ಇದನ್ನೇ ಇಂಗ್ಲಿಷ್​ನಲ್ಲಿ ಓಪನ್​ ರಿಲೇಷನ್​ಷಿಪ್​ (Open Relationship) ಎನ್ನುತ್ತಾರೆ.

ಕೆಲ ವರ್ಷಗಳಿಂದ ವೈಫ್​ ಸ್ವ್ಯಾಪಿಂಗ್​ ಎನ್ನುವುದು ಒಂದಷ್ಟು ವರ್ಗದ ಮನೆಗಳಲ್ಲಿ ಕಾಮನ್​ ಆಗಿದೆ. ಸ್ನೇಹಿತರ ಪತ್ನಿಯರ ಜೊತೆ ಇವರು ಸೆಕ್ಸ್​ ಮಾಡುವುದು, ಇವರ ಪತ್ನಿಯನ್ನು ಸ್ನೇಹಿತನಿಗೆ ಒಂದಿಷ್ಟು ದಿನಗಳ ಮಟ್ಟಿಗೆ ನೀಡುವುದು. ಆದರೆ ಇದರ ವ್ಯಾಪ್ತಿ ಈಗ ದೊಡ್ಡದ್ದಾಗಿದ್ದು ಓಪನ್​ ರಿಲೇಷನ್​ಷಿಪ್​ ಎನ್ನುವ ಮಾತು ಕಾಮನ್​ ಎನ್ನುವ ಮಟ್ಟಿಗೆ ಬಂದು ನಿಂತಿದೆ. ಇದರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ವಿದ್ಯಾ ಬಾಲನ್​ ಈ ಟ್ರೆಂಡ್​ ಬಗ್ಗೆ ತುಂಬಾ ವಿಷಾದ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

ಪತ್ನಿಯ ಬಿಕಿನಿ ಆಸೆ ಈಡೇರಿಸಲು 418 ಕೋಟಿ ರೂ. ದ್ವೀಪ ಖರೀದಿಸಿದ ಪತಿ! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು
 
ತಾನು ಏಕಪತ್ನಿತ್ವದಲ್ಲಿ ಬಲವಾದ ನಂಬಿಕೆಯುಳ್ಳವಳು. ಈ ಮುಕ್ತ ಸಂಬಂಧಗಳ ಪರಿಕಲ್ಪನೆ ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ ಎಂದು  ವಿದ್ಯಾ ಬಾಲನ್ ಹೇಳಿದ್ದಾರೆ. ತಮ್ಮ ಸಂಗಾತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಯೋಚನೆಯೇ ವಿಚಿತ್ರವಾಗಿದೆ. ಇದು ಬಹು ಪತ್ನಿತ್ವಕ್ಕೆ ಸರಿಸಮಾನವಾಗಿದೆ ಎಂದಿರುವ ನಟಿ,  ಇಂಥ ಸಂಬಂಧವನ್ನು ಯಾಕೆ ಒಪ್ಪಿಕೊಳ್ಳುತ್ತಾರೆಯೋ ತಿಳಿಯುತ್ತಿಲ್ಲ ಎಂದಿದ್ದಾರೆ. ಮದುವೆಗೆ ಅದರದ್ದೇ ಆದ ಪಾವಿತ್ರ್ಯವಿದೆ.  ಇದು ಗಂಡ  ಮತ್ತು ಹೆಂಡತಿ ಇಬ್ಬರ ನಡುವೆ ಉಳಿಯಬೇಕು. ಬೇರೊಬ್ಬರ ಜೊತೆ ದೇಹ ಹಂಚಿಕೊಳ್ಳುವುದು ಎಂದರೆ ಏನರ್ಥ ಎಂದಿರುವ ನಟಿ,  ಯಾವುದೇ ಮೂರನೇ ವ್ಯಕ್ತಿ, ಅದು ಕುಟುಂಬವಾಗಲಿ ಅಥವಾ ಸ್ನೇಹಿತರಾಗಲಿ ದಂಪತಿಯ ನಡುವೆ ಬರಬಾರದು ಎಂದಿದ್ದಾರೆ.  

ಅಂದಹಾಗೆ ನಟಿ ವಿದ್ಯಾ ಬಾಲನ್​ ಸಿದ್ದಾರ್ಥ್ ರಾಯ್ ಕಪೂರ್ ಜೊತೆ  ಹನ್ನೆರಡು ವರ್ಷಗಳಿಂದ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ಈ ಮೊದಲು ಪ್ರೀತಿಯಲ್ಲಿ ಮೋಸ ಹೋಗಿದ್ದರು ನಟಿ. ಆದರೆ ಆಗಿದ್ದೆಲ್ಲ ಒಳ್ಳೇಯದಕ್ಕೆ ಆಗ್ತಿರುವುದೆಲ್ಲವೂ ಒಳ್ಳೇಯದಕ್ಕೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.  ಕಾಲೇಜು ದಿನಗಳಲ್ಲಿಯೇ  ಒಬ್ಬ ಯುವಕನಿಗೆ ಮನಸ್ಸು ಕೊಟ್ಟಿದ್ದರಂತೆ ನಟಿ. ಆದರೆ  ಪ್ರೇಮಿಗಳ ದಿನದಂದು ನಡೆದ ಚಿಕ್ಕ ಜಗಳ ಪ್ರೀತಿಯ ಬಗ್ಗೆ ವಿದ್ಯಾ ಅವರಲ್ಲಿದ್ದ ಪರಿಕಲ್ಪನೆಯನ್ನೇ ಬದಲಿಸಿತಂತೆ. ಈ ಕುರಿತು ನಟಿ ಹೇಳಿಕೊಂಡಿದ್ದರು, ಅಂದು ನನ್ನ ಲೈಫೇ ಬದಲಾಯಿತು. ನನ್ನ ಜೊತೆ ಕಿತ್ತಾಡಿಕೊಂಡ ಆ ಯುವಕ, ಮರು ಕ್ಷಣವೇ ತನ್ನ ಹಳೆಯ ಪ್ರೇಯಸಿಯನ್ನ ಭೇಟಿ ಮಾಡಲು ಹೋಗಿಯೇ ಬಿಟ್ಟ. ಅವನು ನನ್ನನ್ನು ಮಾತ್ರ ಪ್ರೀತಿಸುತ್ತಿರುವುದಾಗಿ ತಿಳಿದಿದ್ದೆ. ಅದರೆ ಸತ್ಯ ಆಗ ಗೊತ್ತಾಗಿತ್ತು ಎಂದಿರುವ ವಿದ್ಯಾ ಈಗ ಸುಖಿ ಸಂಸಾರ ನಡೆಸುತ್ತಿದ್ದಾರೆ. ಆದರೆ ದಂಪತಿಗೆ ಮಕ್ಕಳಿಲ್ಲ. 
 
ಆರೇಳು ದಶಕಗಳಲ್ಲಿ ಮದುವೆ ಎನ್ನುವುದೇ ಇರಲ್ಲ: ಅಧ್ಯಯನದಿಂದ ಬಯಲಾಗಿದೆ ಶಾಕಿಂಗ್​ ವಿಷಯ!

click me!