ಮರಿ ತಮನ್ನಾ ಭಾಟಿಯಾ! 'ಆಜ್​ ಕೀ ರಾತ್'​ ಹಾಡಿಗೆ ನಟಿಯನ್ನು ಮೀರಿಸಿ ಕುಣಿದ ಬಾಲಕನ ವಿಡಿಯೋ ವೈರಲ್​!

By Suchethana D  |  First Published Jan 12, 2025, 5:55 PM IST

ತಮನ್ನಾ ಭಾಟಿಯಾರ ಸ್ತ್ರೀ-2 ಚಿತ್ರದ ಆಜ್​ ಕೀ ರಾತ್​... ಹಾಡಿಗೆ ಸೊಂಟ ಬಳುಕಿಸಿದ ಬಾಲಕನ ವಿಡಿಯೋ ವೈರಲ್​
 


ಸ್ತ್ರೀ-2 ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾರ ಆಜ್​ ಕೀ ರಾತ್​... ಹಾಡು ಸಕತ್​ ಹಿಟ್​ ಆಗಿರುವುದು ಗೊತ್ತೇ ಇದೆ. ಬಹುತೇಕ ಮಂದಿ, ಅದರಲ್ಲಿಯೂ ಕಿರುತೆರೆ ಕಲಾವಿದರು ಕೂಡ ಈ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಹಲವರು ರೀಲ್ಸ್​ ಮಾಡಿದ್ದಾರೆ.  'ಕಾವಲಾ' ಚಿತ್ರದ ದೊಡ್ಡ ಯಶಸ್ಸಿನ ನಂತರ, ಸ್ತ್ರೀ 2 ಪಾತ್ರ ಭಯ ಹುಟ್ಟಿಸಿತ್ತು ಎನ್ನುತ್ತಲೇ ಇದ್ದ ತಮನ್ನಾ, ಸ್ತ್ರೀ-2 ಅನ್ನೂ ಹಿಟ್​ ಮಾಡಿದ್ದಾರೆ.  ಇದೀಗ ಪುಟ್ಟ ಬಾಲಕನೊಬ್ಬ ಅದೇ ಹಾಡಿಗೆ ರೀಲ್ಸ್​ ಮಾಡಿದ್ದಾನೆ. ನೆಟ್ಟಿಗರು ಉಫ್​ ಎನ್ನುವ ರೀತಿಯಲ್ಲಿ ಈ ಬಾಲಕ ಸೊಂಟ ಕುಣಿಸಿದ್ದಾರೆ.

ಕಚೇರಿಯೊಂದರಲ್ಲಿ ಬಾಲಕ ಟೇಬಲ್​ ಮೇಲೆ ನಿಂತು ಆಜ್​ ಕೀ ರಾತ್​ ಹಾಡಿಗೆ ಡಾನ್ಸ್​ ಮಾಡುವುದನ್ನು ನೋಡಬಹುದು. ಅಲ್ಲಿದ್ದ ಕಚೇರಿ ಸಿಬ್ಬಂದಿ, ಆತನಿಗೆ ಸಪೋರ್ಟ್​ ಮಾಡುತ್ತಲೇ ಹುರಿದುಂಬಿಸುತ್ತಿದ್ದಾರೆ. ಅದನ್ನು ನೋಡಿ ಬಾಲಕ ಮತ್ತಷ್ಟು ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಲೇ ಬಾಲಕನ ಈ ನೃತ್ಯಕ್ಕೆ ಥಹರೇವಾರಿ ಕಮೆಂಟ್ಸ್ ಕಮೆಂಟ್ಸ್​ ಸುರಿಮಳೆಯಾಗಿದೆ. ಮರಿ ತಮನ್ನಾ ಭಾಟಿಯಾ ಎಂದು ಹಲವರು ಹೇಳುತ್ತಿದ್ದಾರೆ. ಇವನ ಡಾನ್ಸ್​ಗೆ ಎಲ್ಲರೂ ಮನ ಸೋತಿದ್ದಾರೆ. 

Tap to resize

Latest Videos

ತಮನ್ನಾ ಜೊತೆ ಸಕತ್​ ಮಜಾ ಬರತ್ತೆ ಎನ್ನುತ್ತಲೇ ಸಂಬಂಧದ ಗುಟ್ಟು ರಟ್ಟು ಮಾಡಿದ ವಿಜಯ್​ ವರ್ಮಾ...

ಇನ್ನು ನಟಿ ತಮನ್ನಾ ಕುರಿತು ಹೇಳುವುದಾದರೆ,  ನಟಿ ತಮನ್ನಾ ಭಾಟಿಯಾ (Tamannaah Bhatia) ಹಾಗೂ ವಿಜಯ್ ವರ್ಮಾ ಅವರು  ಪ್ರೀತಿಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಡೇಟಿಂಗ್​ ಮಾಡಿದ ಮಾತ್ರಕ್ಕೆ ನಟ ನಟಿಯರು ಅವರನ್ನೇ ಮದ್ವೆಯಾಗುತ್ತಾರೆಂದೇನೂ ಇಲ್ಲ. ಆದರೆ ಈ ಜೋಡಿ ಮಾತ್ರ ವಿವಾಹ ಬಂಧನಕ್ಕೆ ಶೀಘ್ರದಲ್ಲಿಯೇ ಒಳಗಾಗಲಿದೆ ಎನ್ನುವ ಸುದ್ದಿ ಮೊದಲಿನಿಂದಲೂ ಇದೆ. ವಿಜಯ್​ ವರ್ಮಾ ಅವರಿಗೂ 38 ವರ್ಷ ವಯಸ್ಸಾಗಿದ್ದು, ಇಬ್ಬರಿಗೂ ಇದಾಗಲೇ ಮದುವೆಯ ವಯಸ್ಸು ಮೀರಿರುವ ಕಾರಣ, ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 1989ರಲ್ಲಿ ಹುಟ್ಟಿರೋ ನಟಿಗೆ ಈಗ 34 ವರ್ಷ ವಯಸ್ಸು.  ನಟ ವಿಜಯ್ ವರ್ಮಾ ಜೊತೆ ಡೇಟಿಂಗ್​ ಮಾಡುತ್ತಿದ್ದರೂ ಮದುವೆಯ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ನಟಿಯ ಮನೆಯಲ್ಲಿ ಸಕತ್​ ಒತ್ತಡ ಬರುತ್ತಿದೆ ಎಂದು ವರದಿಯಾಗಿದೆ. ವಯಸ್ಸಾಗುತ್ತಿರುವ ಕಾರಣ ಹಾಗೂ ಇದಾಗಲೇ ಹಲವಾರು ಬಾಲಿವುಡ್​ ನಟಿಯರು ಮದುವೆ, ಮಕ್ಕಳು ಎಂದೆಲ್ಲಾ ಬಿಜಿಯಾಗಿರುವ ತಮ್ಮ ಮಗಳಿನ್ನೂ ಮದುವೆಯಾಗಿಲ್ಲ ಎನ್ನುವ ಚಿಂತೆ ತಮನ್ನಾ ಪಾಲಕರಿಗೆ ಕಾಡುತ್ತಿದೆಯಂತೆ. ಇದಕ್ಕಾಗಿಯೇ ನಟಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿದೆ. 

ಕೊನೆಗೆ,   ತಮನ್ನಾ ಕುರಿತು ಓಪನ್​ ಆಗಿ ಮಾತನಾಡಿರುವ ವಿಜಯ್ ವರ್ಮಾ, "ನಾನು 2005 ರಲ್ಲಿ ಹೈದರಾಬಾದ್ ತೊರೆದು ಮುಂಬೈಗೆ ಬಂದಿದ್ದೆ.  ಮತ್ತು ಅದೇ ವರ್ಷ ಅವಳು ಮುಂಬೈನಿಂದ  ಹೈದರಾಬಾದ್‌ಗೆ ಬಂದಳು. ಅವಳು ಹೈದರಾಬಾದ್‌ನಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಂಡ ಮುಂಬೈ ಹುಡುಗಿ ಮತ್ತು ನಾನು ಹೈದರಾಬಾದ್​ನಲ್ಲಿ ಸ್ಥಾಪಿತಗೊಂಡಿರುವ  ಹುಡುಗ. ಅವಳು ನಿರರ್ಗಳವಾಗಿ ತಮಿಳು ಮತ್ತು ತೆಲುಗು ಮಾತನಾಡುತ್ತಾಳೆ, ಆದ್ದರಿಂದ ನಮ್ಮ ಸಂಬಂಧವು ತುಂಬಾ ಆಸಕ್ತಿದಾಯಕವಾಗಿದೆ ಎಂದಿದ್ದಾರೆ ವಿಜಯ್​ ವರ್ಮಾ. ತಮ್ಮ ಸಂಬಂಧದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಅವರು,  "ನಮ್ಮ ಸಂಬಂಧವು ಲಸ್ಟ್ ಸ್ಟೋರಿಗಳ ನಂತರ ಪ್ರಾರಂಭವಾಯಿತು, ಮೊದಲು, ನಾವು ಸಹ ನಟರಾಗಿ, ತುಂಬಾ ಚಿತ್ರಗಳಲ್ಲಿ ನಟಿಸಿದ್ದೇವೆ,  ಭೇಟಿಯಾಗಿದ್ದೆವು. ಆದರೆ ಲಸ್ಟ್​ ಸ್ಟೋರೀಸ್​ -2 ಬಳಿಕ ಪ್ರೀತಿ ಗಾಢವಾಯಿತು. ತಮನ್ನಾ ಜೊತೆ ನನಗೆ ತುಂಬಾ ಮಜಾ ಬರುತ್ತದೆ. ಆಕೆಯ ಜೊತೆ ಇರುವುದು ರೋಚಕ ಎಂದಿದ್ದಾರೆ ನಟ. 

ಸೆಕ್ಸ್​ ಸೀನ್​ಗಳಿಗೆ ಮೂಡ್​ ಕ್ರಿಯೇಟ್​ ಮಾಡ್ತಾರೆ, ಭಾವನೆ ತಡೆಯಲು ಆಗಲ್ಲ.. ಆಗ... ವಿಜಯ್‌ ವರ್ಮಾ ಓಪನ್ ಮಾತು

click me!