ಕತ್ರಿನಾಳನ್ನು ಮದುವೆಯಾಗ್ತೀನಿ ಎಂದಾಗ ತಂದೆ-ತಾಯಿ ರಿಯಾಕ್ಷನ್ ಹೇಗಿತ್ತು ಎಂದು ರಿವೀಲ್ ಮಾಡಿದ ವಿಕ್ಕಿ ಕೌಶಲ್

Published : Dec 21, 2022, 03:08 PM IST
ಕತ್ರಿನಾಳನ್ನು ಮದುವೆಯಾಗ್ತೀನಿ ಎಂದಾಗ ತಂದೆ-ತಾಯಿ ರಿಯಾಕ್ಷನ್ ಹೇಗಿತ್ತು ಎಂದು ರಿವೀಲ್ ಮಾಡಿದ ವಿಕ್ಕಿ ಕೌಶಲ್

ಸಾರಾಂಶ

ಕತ್ರಿನಾ ಕೈಫ್ ಮದುವೆ ಆಗ್ತೀನಿ ಎಂದಾಗ ತಂದೆ-ತಾಯಿ ರಿಯಾಕ್ಷನ್ ಹೇಗಿತ್ತು ಎಂದು ವಿಕ್ಕಿ ಕೌಶಲ್ ರಿವೀಲ್ ಮಾಡಿದ್ದಾರೆ. 

ಬಾಲಿವುಡ್ ಸ್ಟಾರ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯಾಗಿ ಒಂದು ವರ್ಷವೇ ಕಳೆದು ಹೋಯಿತು. ಇಬ್ಬರೂ ಸಂತೋಷದ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಅವರನ್ನು ಮದುವೆಯಾಗಿರುವ ವಿಕ್ಕಿ ಕೌಶಲ್ ಆಗಾಗ ಪತ್ನಿ ಬಗ್ಗೆ ಹೇಳುತ್ತಿರುತ್ತಾರೆ. ಅನೇಕ ಸಂದರ್ಶನಗಳಲ್ಲಿ ಪತ್ನಿ ಕತ್ರಿನಾ ಬಗ್ಗೆ ಹೇಳಿಕೊಂಡಿದ್ದಾರೆ, ತಮ್ಮ ಲವ್ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದೀಗ ವಿಕ್ಕಿ ತನ್ನ ತಂದೆ-ತಾಯಿಯ ಬಗ್ಗೆ ಮಾತನಾಡಿದ್ದಾರೆ. ಕತ್ರಿನಾ ಕೈಫ್ ಅವರನ್ನು ಮಾದುವೆ ಆಗ್ತೀನಿ ಅಂತ ಹೇಳಿದಾಗ ಅವರ ಪೋಷಕರ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ವಿಕ್ಕಿ ಕೌಶಲ್ ಬಹಿರಂಗ ಪಡಿಸಿದ್ದಾರೆ. ವಿಕ್ಕಿ ಕೌಶಲ್ ಅವರ ತಂದೆ ಶ್ಯಾಮ್ ಕೌಶಲ್ ಹಾಗೂ ತಾಯಿ ವೀಣಾ ಕೌಶಲ್ ಕತ್ರಿನಾ ಅವರನ್ನು ತುಂಬಾ ಇಷ್ಟ ಪಡುತ್ತಾರೆ ಎಂದು ಹೇಳಿದ್ದಾರೆ. 

ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಕ್ಕಿ ಕೌಶಲ್ ತಂದೆ-ತಾಯಿ ಬಗ್ಗೆ ಮಾತನಾಡಿದ್ದಾರೆ. ಕತ್ರಿನಾ ಅವರನ್ನು ಮದುವೆಯಾಗುವುದಾಗಿ ಹೇಳಿದಾಗ ಅಪ್ಪ-ಅಮ್ಮ ತುಂಬಾ ಖುಷಿ ಪಟ್ಟರು ಎಂದು ಹೇಳಿದ್ದಾರೆ. ಫಿಲ್ಮ್‌ಫೇರ್ ಜೊತೆ ಮಾತನಾಡಿದ ವಿಕ್ಕಿ ಕೌಶಲ್, 'ಅವರು ತುಂಬಾ ಸಂತೋಷ ಪಟ್ಟರು. ಅಪ್ಪ-ಅಮ್ಮ ಕತ್ರಿನಾಳನ್ನು ತುಂಬಾ ಇಷ್ಟ ಪಡುತ್ತಾರೆ. ಆಕೆಯ ವ್ಯಕ್ತತ್ವ ತುಂಬಾ ಇಷ್ಟ. ನಿಮ್ಮ ಹೃದಯದಲ್ಲಿ ಒಳ್ಳೆಯತನ ಇದ್ದಾಗ, ಅದು ಯಾವಾಗಲೂ ನೀವು ಮಾಡುವ ಎಲ್ಲಾ ಕೆಲಸದಲ್ಲೂ ಮತ್ತು ಎಲ್ಲದರಲ್ಲೂ ಪ್ರತಿಫಲಿಸುತ್ತದೆ' ಎಂದು ಹೇಳಿದರು. 

ಕತ್ರಿನಾ - ವಿಕ್ಕಿ ಮದುವೆಯಾಗಿ 1 ವರ್ಷ; ಯಾರಿಗೂ ಗೊತ್ತಿರದ ಇಂಟ್ರೆಸ್ಟಿಂಗ್ ವಿಚಾರಗಳಿದು!

ಬಳಿಕ ನಿರೂಪಕರು ಕತ್ರಿನಾಳೊಂದಿಗೆ ಮೊದಲ ಬಾರಿಗೆ ಪ್ರೀತಿಯಲ್ಲಿ ಬಿದ್ದ ಕ್ಷಣ ನೆನಪಿದೆಯೇ ಎಂದು ಕೇಳಿದರು. ಆದಕ್ಕೆ ವಿಕ್ಕಿ ಕೌಶಲ್, 'ಅದು ಅತ್ಯಂತ ಖಾಸಗಿಯಾಗಿದೆ ಮತ್ತು ತುಂಬಾ ವಿಶೇಷವಾಗಿದೆ' ಎಂದು ಹೇಳಿದರು. ಇನ್ನು ಒಂದು ವರ್ಷದ ಮದುವೆ ಜೀವನದ ಬಗ್ಗೆ ಮಾತನಾಡಿದ ವಿಕ್ಕಿ, 'ತುಂಬಾ ಸುಂದರವಾಗಿದೆ. ಇದು ನನ್ನ ಜೀವನದ ಅತ್ಯುತ್ತಮ ಅಧ್ಯಾಯದಂತೆ. ಸಂಪೂರ್ಣ ಅರ್ಥಮಾಡಿಕೊಳ್ಳುವ ಸಂಗಾತಿ ಇದ್ದಾಗ ಲೈಫ್ ಅದ್ಭುತವಾಗಿರಲಿದೆ. ಏಕೆಂದರೆ ನಿಮ್ಮನ್ನು ಶಾಂತಿಯುತವಾಗಿ, ಸಂತೋಷವಾದ ಮನಸ್ಥಿತಿಯಲ್ಲಿ ಇರುವಂತೆ ಮಾಡುತ್ತಿದೆ. ಸದಾ ಪ್ರೀತಿಸುವಂತೆ ಮಾಡುತ್ತೆ. ಮನೆಯವರಿಗೆ ಮಾತ್ರವಲ್ಲದೇ ಮನೆಯ ಹೊರಗಿನವರಿಗೂ ಪ್ರೀತಿ ನೀಡಲು ಬಯಸುತ್ತೀರಿ' ಎಂದು ಹೇಳಿದರು. 

ನಿದ್ರೆ ಬಂದಿಲ್ಲ ಅಂದ್ರೆ ವಿಕ್ಕಿ ಹಾಡುತ್ತಾನೆ: ಪತಿ ರೊಮ್ಯಾನ್ಸ್‌ ಬಗ್ಗೆ ಕತ್ರಿನಾ ಕೈಫ್‌ ಮಾತು

ವಿಕ್ಕಿ ಮತ್ತು ಕತ್ರಿನಾ ಕೈಫ್ ಕಳೆದ ವರ್ಷ ಡಿಸೆಂಬರ್ 9 ರಂದು ದೈಂಪತ್ಯಕ್ಕೆ ಕಾಲಿಟ್ಟರು. ರಾಜಸ್ಥಾನದಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮತ್ತು ಚಿತ್ರರಂಗದ ಕೆಲವು ಗಣ್ಯರು ಹಾಜರಾಗಿದ್ದರು. ಸದ್ಯ ಇಬ್ಬರೂ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ಕೌಶಲ್ ಕೊನೆಯದಾಗಿ ಗೋವಿಂದ ಮೇರಾ ನಾಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದು. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಮತ್ತು ಭೂಮಿ ಪಡ್ನೇಕರ್ ಜೊತೆ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 16ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ರಿಲೀಸ್ ಆಗಿದೆ. ಸದ್ಯ ಎರಡು ಸಿನಿಮಾಗಳಲ್ಲಿ ವಿಕ್ಕಿ ಕೌಶಲ್ ಬ್ಯುಸಿಯಾಗಿದ್ದಾರೆ. ಕತ್ರಿನಾ ಕೈಫ್ ಕೊನೆಯದಾಗಿ ಪೋನ್ ಭೂತ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಟೈಗರ್-3 ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Darshan Vs Sudeep War: ಅವ್ರಿಗೆ ಪಾಪ ಏನು ನೋವಿದ್ಯೋ ಗೊತ್ತಿಲ್ಲ- ಸುದೀಪ್​ ರಿಯಾಕ್ಷನ್​ಗೆ ಎಲ್ಲರೂ ಗಪ್​ಚುಪ್​!
ಅಂದು ನಡೆದ ಘಟನೆ ಬಳಸ್ಕೊಂಡು, ದೇಶ-ವಿದೇಶದಲ್ಲಿ ಉದ್ಯಮ ಮಾಡಿ ಗೆದ್ದ Bigg Boss ಸ್ಪರ್ಧಿ! ಯಾರದು?