Besharam Rang Controversy: ಶಾರುಖ್ ಖಾನ್‌ನ ಜೀವಂತವಾಗಿ ಸುಡುತ್ತೇನೆ; ಅಯೋಧ್ಯೆ ಸ್ವಾಮಿ ಕಿಡಿ

By Shruthi Krishna  |  First Published Dec 21, 2022, 1:25 PM IST

ಶಾರುಖ್ ಖಾನ್‌ ಬಂದರೆ ಜೀವಂತವಾಗಿ ಸುಡುತ್ತೇನೆ ಎಂದು ಅಯೋಧ್ಯೆ ಸ್ವಾಮಿ ಕಿಡಿಕಾರಿದ್ದಾರೆ.  


ಬಾಲಿವುಡ್ ಸ್ಟಾರ್ ಶಾರುಖ್ ಖಾನ್  ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ಮೊದಲ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ರಿಲೀಸ್ ಆದ 'ಬೇಷರಂ ರಂಗ್...'ಹಾಡು ದೊಡ್ಡ ವಿವಾದ ಸೃಷ್ಟಿಸಿದೆ. ಅನೇಕ ಕಾರಣಗಳಿಗೆ ಈ ಹಾಡು ಚರ್ಚೆಯಾಗುತ್ತಿದೆ. ಈ ಹಾಡಿನ್ನು ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ, ದೀಪಿಕಾ ಕೇಸರಿ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದಿದ್ದಾರೆ ಅಂತ ಅನೇಕರು ವಿರೇಧ ವ್ಯಕ್ತಪಡಿಸಿದರು. ಅಲ್ಲದೇ ಪಠಾಣ್ ಸಿನಿಮಾ ಬ್ಯಾನ್ ಮಾಡಬೇನ್ನುವ ಒತ್ತಾಯ ಕೂಡ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬೈಕಾಟ್ ಪಠಾಣ್ ಟ್ರೆಂಡ್ ಆಗಿದೆ. ಬೇಷರಂ ರಂಗ್ ಹಾಡಿನ ವಿವಾದದ ಬಗ್ಗೆ ಇದೀಗ ಅಯೋಧ್ಯೆಯ ಸ್ವಾಮಿ ಮಹಂತ್ ಪರಮಹಂಸ ಆಚಾರ್ಯ ಪ್ರತಿಕ್ರಿಯೆ ನೀಡಿದ್ದು ಶಾರುಖ್ ಖಾನ್ ಅವರನ್ನು ಭೇಟಿಯಾದರೆ ಅವರನ್ನು ಜೀವಂತವಾಗಿ ಸುಡುವ ಹಂತಕ್ಕೂ ಹೋಗುತ್ತೇನೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಪರಮಹಂಸ  ಆಚಾರ್ಯರ ಹೇಳಿಕೆ ಇದೀಗ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. 

‘ಬೇಷರಂ ರಂಗ್’ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಕಿಡಿ ಕಾರಿರುವ ಪರಮಹಂಸ ಆಚಾರ್ಯ, ಶಾರುಖ್ ವಿರುದ್ಧ ವಾಗ್ದಾಳಿ ನಡೆಸಿದರು. 'ನಮ್ಮ ಸನಾತನ ಧರ್ಮದ ಜನರು ಈ ಬಗ್ಗೆ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಜಿಹಾದಿ ಶಾರುಖ್ ಖಾನ್ ಅವರು ಭೇಟಿಯಾಗಲು ಬಂದರೆ  
ನಾನು ಅವರನ್ನು ಜೀವಂತವಾಗಿ ಸುಡುತ್ತೇನೆ' ಎಂದು ಹೇಳಿದರು. ಇಷ್ಟಕ್ಕೆ ಸುಮ್ಮನಾಗದ ಪರಮಹಂಸ  ಆಚಾರ್ಯ, ‘ಪಠಾಣ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ್ದರು. ಜೊತೆಗೆ ಈ ಸಿನಿಮಾವನ್ನು ಬೈಕಾಟ್ ಮಾಡಿ ಎಂದು ಜನತೆಗೆ ಒತ್ತಾಯ ಮಾಡಿದರು. 

Tap to resize

Latest Videos

ಪಠಾಣ್ ಸಿನಿಮಾದ ಹಾಡಿನ ವಿರುದ್ಧ ಅನೇಕ ಜನ ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿಯ ಅನೇಕ ನಾಯಕರು ಸಹ ಪಠಾಣ್ ವಿರುದ್ಧ ಕಿಡಿಕಾರಿದ್ದರು. ಸಿನಿಮಾ ಬ್ಯಾನ್  ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ವಿರೋಧದ ನಡುವೆಯೂ ಪಠಾಣ್ ಸಿನಿಮಾದ ಬೇಷರಂಗ್ ರಂಗ್ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೂಟ್ಯೂಬ್ ನಲ್ಲಿ ಈ ಹಾಡು ಲಕ್ಷಗಟ್ಟಲೇ ವ್ಯೂವ್ಸ್  ಪಡೆದುಕೊಂಡಿದೆ. ದೀಪಿಕಾ ಮತ್ತು ಶಾರುಖ್ ಖಾನ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

Pathan; ಬೇಷರಂ ರಂಗ್ ವಿವಾದ; ದೀಪಿಕಾ ಪರ ಬ್ಯಾಟ್ ಬೀಸಿದ ನಟ ಪ್ರಕಾಶ್ ರಾಜ್

ಪಠಾಣ್ ದೇಶಭಕ್ತ ಎಂದ ಶಾರುಖ್ 

ಅಂದಹಾಗೆ ಪಠಾಣ್ ವಿವಾದ ನಡುವೆ ಶಾರುಖ್ ಖಾನ್ ಇದೊಂದು ದೇಶಭಕ್ತಿ ಸಾರುವ ಸಿನಿಮಾ ಎಂದು ಹೇಳಿದ್ದಾರೆ. ಶಾರುಖ್ ಖಾನ್ ಇತ್ತೀಚಿಗಷ್ಟೆ ಟ್ವಿಟರ್‌ನಲ್ಲಿ ನಡೆದ ‘ಆಸ್ಕ್ ಮಿ ಎನಿಥಿಂಗ್’​ ಸೆಷನ್‌ನಲ್ಲಿ ಈ ಬಗ್ಗೆ ಮಾತನಾಡಿದ್ದರು. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಶಾರುಖ್ ಉತ್ತರ ನೀಡಿದ್ದರು. ಅಭಿಮಾನಿಯೊಬ್ಬರು ಈ ಚಿತ್ರ ದೇಶಭಕ್ತಿ ಸಿನಿಮಾವಾಗಿದೆಯಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ ಶಾರುಖ್, ‘ಪಠಾಣ್ ಕೂಡ ತುಂಬಾ ದೇಶಪ್ರೇಮಿ, ಆದರೆ ಆಕ್ಷನ್ ರೀತಿಯಲ್ಲಿ’ ಎಂದು ಹೇಳಿದರು.  

ಪಠಾಣ್ ಕೂಡ ದೇಶಭಕ್ತ; 'ಬೇಷರಂ ರಂಗ್' ವಿವಾದದ ನಡುವೆ ಶಾರುಖ್ ಖಾನ್ ಟ್ವೀಟ್ ವೈರಲ್

ಪಠಾಣ್ ಸಿನಿಮಾದ ಬಗ್ಗೆ 

ಪಠಾಣ್ ಸಿನಿಮಾಗೆ ಸಿದ್ಧಾರ್ಥ್ ಆನಂದ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳ ಹೆೇಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೋ ಹಾಗೆ ಶಾರುಖ್ ಕೂಡ ಭಾರಿ ನಿರೀಕ್ಷೆ ಇಟ್ಟಿದ್ದಾರೆ. ಕಿಂಗ್ ಖಾನ್ ಗ್ಯಾಪ್‌ನ ಬಳಿಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಲ್ಲದೆ ದೊಡ್ಡ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಶಾರುಖ್​ ಖಾನ್​ ಅವರಿಗಿದೆ. ಈ ಚಿತ್ರಕ್ಕಾಗಿ ಶಾರುಖ್ ತುಂಬಾ ಶ್ರಮಪಟ್ಟಿದ್ದು ದೇಹ ಹುರಿಗೊಳಿಸಿ 6 ಪ್ಯಾಕ್​​ ನಲ್ಲಿ ಕಾಣಿಸಿಕೊಂಡಿದ್ದಾರೆ. ಬೇಷರಂ ರಂಗ್ ಹಾಡಿನಲ್ಲಿ ಶಾರುಖ್ ಅವರ 6 ಪ್ಯಾಕ್ ದರ್ಶನ ಆಗಿದೆ. ಈ ವಯಸ್ಸಿನಲ್ಲೂ ಶಾರುಖ್ ಫಿಟ್ನೆಸ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಸಾಂಗ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

click me!