ಹಿಂದಿನ ಎರಡು ಚಿತ್ರಗಳ ಯಶಸ್ಸಿನ ನಂತರ, ಎಡ್ಡಿ ಬ್ರಾಕ್ ಮತ್ತು ವೆನಮ್ ಕಥೆಯು ಅಂತಿಮವಾಗಿ ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ...
ಹಾಲಿವುಡ್ ಸಿನಿಮಾಗಳನ್ನು ನೋಡುವವರಿಗೆ ವೆನಮ್ ಫ್ರಾಂಚೈಸ್ ಬಗ್ಗೆ ಗೊತ್ತೇ ಇರುತ್ತದೆ. ಈ ಚಿತ್ರದ ಎರಡು ಭಾಗಗಳು ಈಗಾಗಲೇ ಸೂಪರ್ ಹಿಟ್ ಕಂಡಿವೆ. ಇದೀಗ ವೆನಮ್: ದಿ ಲಾಸ್ಟ್ ಡ್ಯಾನ್ಸ್ ಸಿನಿಮಾದ ಕೊನೆಯ ಫ್ರಾಂಚೈಸ್ ಇಂದು ತೆರೆಗೆ ಬಂದಿದೆ. ಈ ಹಿಂದಿನ ಎರಡು ಚಿತ್ರಗಳ ಯಶಸ್ಸಿನ ನಂತರ, ಎಡ್ಡಿ ಬ್ರಾಕ್ ಮತ್ತು ವೆನಮ್ ಕಥೆಯು ಅಂತಿಮವಾಗಿ ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ.
ವೆನಮ್: ದಿ ಲಾಸ್ಟ್ ಡ್ಯಾನ್ಸ್ ಸಿನಿಮಾದ ಪ್ರೀಮಿಯರ್‌ನ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂಗಡ ಟಿಕೆಟ್ ಬುಕ್ಕಿಂಗ್ ನಲ್ಲಿಯೂ ದಾಖಲೆ ಬರೆದಿದ್ದ ಈ ಚಿತ್ರವೀಗ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದೆ. ಪ್ರಬಲ ತಾರಾಗಣ, ಆಕರ್ಷಕ ಪಾತ್ರಗಳು ಮತ್ತು ರೋಮಾಂಚಕ ಕಥಾಹಂದರದೊಂದಿಗೆ, ವೆನಮ್: ದಿ ಲಾಸ್ಟ್ ಡ್ಯಾನ್ಸ್ ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವಂತೆ ಮಾಡಿದೆ.
undefined
'ಕಲಾಸಿಪಾಳ್ಯ' ಡೈರೆಕ್ಟರ್ ಹೀಗಂದ್ರು: ಎಲ್ಲರ ಮನೆ ದೋಸೆನೂ ತೂತೇರಿ, ಯಾಕೆ ಇದೆಲ್ಲಾ ಬೇಕು?
ವೆನಮ್: ದಿ ಲಾಸ್ಟ್ ಡ್ಯಾನ್ಸ್ನಲ್ಲಿ, ಟಾಮ್ ಹಾರ್ಡಿ ವೆನಮ್ ಪಾತ್ರದಲ್ಲಿ ಜೀವಿಸಿದ್ದಾರೆ. ಚಿತ್ರದಲ್ಲಿ ಚಿವೆಟೆಲ್ ಎಜಿಯೋಫೋರ್, ಜುನೋ ಟೆಂಪಲ್, ರೈಸ್ ಇಫಾನ್ಸ್, ಪೆಗ್ಗಿ ಲು, ಅಲನ್ನಾ ಉಬಾಚ್ ಮತ್ತು ಸ್ಟೀಫನ್ ಗ್ರಹಾಂ ಮುಂತಾದವರು ಅಭಿನಯಿಸಿದ್ದಾರೆ. ಹಾರ್ಡಿ ಮತ್ತು ಮಾರ್ಸೆಲ್ ಅವರ ಕಥೆಯನ್ನು ಆಧರಿಸಿ ಕೆಲ್ಲಿ ಮಾರ್ಸೆಲ್ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರವನ್ನು ಅವಿ ಅರಾದ್, ಮ್ಯಾಟ್ ಟೋಲ್ಮಾಚ್, ಆಮಿ ಪಾಸ್ಕಲ್, ಕೆಲ್ಲಿ ಮಾರ್ಸೆಲ್, ಟಾಮ್ ಹಾರ್ಡಿ ಮತ್ತು ಹಚ್ ಪಾರ್ಕರ್ ನಿರ್ಮಿಸಿದ್ದಾರೆ.
ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಇಂಡಿಯಾ ವೆನಮ್: ದಿ ಲಾಸ್ಟ್ ಡ್ಯಾನ್ಸ್ ಭಾರತದಾದ್ಯಂತ ತೆರೆಗೆ ತಂದಿದೆ. ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 3D ಮತ್ತು IMAX 3D ನಲ್ಲಿಯೂ ಈ ಚಿತ್ರ ಬಿಡುಗಡೆ ಮಾಡುತ್ತದೆ. ಹಿಂದಿನ ಎರಡು ಚಿತ್ರಗಳ ಯಶಸ್ಸಿನ ನಂತರ, ಎಡ್ಡಿ ಬ್ರಾಕ್ ಮತ್ತು ವೆನಮ್ ಕಥೆಯು ಅಂತಿಮವಾಗಿ ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದರು. ಅದಕ್ಕೀಗ ಉತ್ತರ ಸಿಕ್ಕಿದಂತಾಗಿದೆ.
ಶ್ರೀವಲ್ಲಿ-ಪುಷ್ಪರಾಜ್ ಬರೋ ದಿನ ಫಿಕ್ಸ್ ಆಗಿದ್ದು ನಿಜ; ಟವೆಲ್ ಹಿಡಿದೇ ನಿಂತ ಫ್ಯಾನ್ಸ್!
ಭಾರತದಲ್ಲಿ ಕೂಡ ಈ ಚಿತ್ರಕ್ಕೆ ಗುಡ್ ರೆಸ್ಪಾನ್ಸ್ ದೊರಕಿದ್ದು, ಚಿತ್ರವು ಸೂಪರ್ ಹಿಟ್ ಆಗಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಲಿವುಡ್ ಚಿತ್ರಗಳನ್ನು ನೋಡುವ ಕ್ರೇಜ್ ಇರುವ ಸಿನಿಪ್ರೇಕ್ಷಕರಿಗೆ ಇದು ಹೇಳಿ ಮಾಡಿಸಿದ್ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.