
ಬಾಲಿವುಡ್ ನಟಿ ಶ್ರುತಿ ಹಾಸನ್ ಮತ್ತು ಶಂತನು ಹಜಾರಿಕಾ ಅವರ ಸಂಬಂಧ, ಲಿವ್ ಇನ್ ರಿಲೇಷನ್ ಮುರಿದು ಬಿದ್ದು ಹಲವು ತಿಂಗಳುಗಳೇ ಕಳೆದಿವೆ. ಈ ಮೂಲಕ ಆರು ಮಂದಿಯ ಜೊತೆ ಕಮಲ್ ಹಾಸನ್ ಪುತ್ರಿಯ ಬ್ರೇಕಪ್ ಆದಂತಾಗಿದೆ. ಶ್ರುತಿ ಅವರು ಶಂತನು ಹಜಾರಿಕಾ ಅವರನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದಾಗ, ಶಂತನು ಕೂಡ ಶ್ರುತಿ ಅವರನ್ನು ಕೈಬಿಟ್ಟಿರುವ ಬಗ್ಗೆ ಸಾಕಷ್ಟು ಚರ್ಚೆಯಾದಾಗಲೇ ಇವರಿಬ್ಬರೂ ಬ್ರೇಕಪ್ ಆಗಿರೋ ಸುದ್ದಿ ಹೊರಗಡೆ ಬಂದಿತ್ತು. ಕೆಲ ತಿಂಗಳ ಹಿಂದೆಯೇ ಇವರಿಬ್ಬರೂ ಪ್ರತ್ಯೇಕ ಆಗಿರುವ ಗುಟ್ಟು ರಟ್ಟಾಗಿದ್ದು, ಅದು ಕನ್‌ಫರ್ಮ್ ಕೂಡ ಆಗಿದೆ. ಇದರ ನಡುವೆಯೇ ಕೆಲ ದಿನಗಳ ಹಿಂದೆ ನಟಿ, ಮಿಡ್ನೈಟ್ ಸೀಕ್ರೇಟ್ ಬಿಚ್ಚಿಟ್ಟಿದ್ದರು. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನಟಿ, ಬೆಳಗಿನ ಜಾವ ಮೂರಕ್ಕೆ ಎಲ್ಲರೂ ಮಲಗಿದ್ದರೆ ನಾನು ಮಾತ್ರ ಗೆಳೆಯರ ಜೊತೆ ರೀಲು, ಮೀಮ್ಸ್ ಹಂಚಿಕೊಳ್ಳುತ್ತಿರುತ್ತೇನೆ ಎಂದಿದ್ದರು. ಇದೇನಾ ನಿಮ್ಮ ಸೀಕ್ರೇಟ್? ಏಳನೇ ಬಾಯ್ಫ್ರೆಂಡ್ ಸಿಗಲಿಲ್ವಾ ಎಂದು ನಟಿಯ ಕಾಲೆಳೆಯುತ್ತಿದ್ದರು ನಡುರಾತ್ರಿ ಮೂರು ಗಂಟೆಯವರೆಗೆ ನಿದ್ದೆ ಬರದಿದ್ದರೆ ಹೇಳಿ, ನಾನು ಬರುವೆ ಎಂದು ಮತ್ತೆ ಕೆಲವರು ಹೇಳಿದ್ದರು.
ಇದೆರಲ್ಲರ ನಡುವೆ, ನಟಿ ಆರು ಮಂದಿ ಜೊತೆ ಬ್ರೇಕಪ್ ಮಾಡಿಕೊಳ್ಳಲು ಹೋಟೆಲ್ ಬಿಲ್ ಕಾರಣನಾ ಎನ್ನುವ ಸಂಶಯ ಕಾಡತೊಡಗಿದೆ. ಅದಕ್ಕೆ ಕಾರಣ, ನಟಿ ಕೊಟ್ಟಿರುವ ಸ್ಟೇಟ್ಮೆಂಟ್. ಹೌದು. ತನ್ನ ಜೊತೆ ಡೇಟಿಂಗ್ಗೆ ಬರುತ್ತಿರುವವರೆಲ್ಲರ ಹೋಟೆಲ್ ಬಿಲ್ ತಾವೇ ಕಟ್ಟಬೇಕಿತ್ತು. ಇದರಿಂದ ನನಗೆ ತುಂಬಾ ಬೇಜಾರಾಗಿತ್ತು ಎಂದು ನಟಿ ಹೇಳಿಕೊಂಡಿದ್ದಾರೆ. 'ಮಧ್ಯಾಹ್ನ, ರಾತ್ರಿಯ ಊಟ, ಉಪಹಾರಕ್ಕೆ ನನ್ನೊಂದಿಗೆ ಹಲವರು ಬರುತ್ತಿದ್ದರು. ಡೇಟಿಂಗ್ಗೆ ಹೋದಾಗಲೂ ಒಟ್ಟಿಗೆ ಹೋಟೆಲ್ ಹೋದರೆ ನಾನೇ ಬಿಲ್ ಕಟ್ಟಬೇಕಿತ್ತು. ನನ್ನ ಬಳಿ ಹೆಚ್ಚು ಹಣ ಇದೆ ಎಂದು ನಾನೇ ಬಿಲ್ ಕಟ್ಟುವಂತೆ ಮಾಡುತ್ತಿದ್ದರು. ಹೀಗಾಗಿ ಬಹಳಷ್ಟು ಹಣವನ್ನು ಕಳೆದುಕೊಂಡೆ. ಹುಡುಗಿಯರು ಕೂಡ ಇದೇ ರೀತಿ ಮಾಡುತ್ತಿದ್ದರೂ ಡೇಟಿಂಗ್ಗೆ ಬಂದ ಹುಡುಗರೆಲ್ಲರೂ ನನ್ನನ್ನು ಈ ವಿಷಯದಲ್ಲಿ ಮಿಸ್ಯೂಸ್ ಮಾಡಿಕೊಂಡರು. ಹೀಗಾಗಿ ನಾನು ಹಲವರನ್ನು ನಂಬಿ ಹಣದ ವಿಚಾರದಲ್ಲಿ ಮೋಸ ಹೋದೆ ಎಂದು ಶ್ರುತಿ ಹೇಳಿದ್ದಾರೆ.
ವೇದಿಕೆಗೆ ಬರುವಾಗ ಪ್ಯಾಂಟ್ ಕಳಚಿ ಬಿತ್ತಾ? ನಟಿ ತಾನಿಯಾ ಶ್ರಾಫ್ ಒಳ ಉಡುಪು ವಿಡಿಯೋ ನೋಡಿ ಫ್ಯಾನ್ಸ್ ಸುಸ್ತು
ಇದೇ ಕಾರಣಕ್ಕೆ ನಟಿ, ಎಲ್ಲರ ಜೊತೆ ಸಂಬಂಧ ಕಳಚಿಕೊಂಡ್ರಾ ಎನ್ನುವ ಪ್ರಶ್ನೆ ಎದುರಾಗಿದೆ. ಅಷ್ಟಕ್ಕೂ ಶ್ರುತಿ ಹೋದಲ್ಲೆಲ್ಲಾ ಏಳನೇ ಎಂಟ್ರಿ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತದೆ. ಕೆಲವು ದಿನಗಳ ಹಿಂದೆ ತರ್ಲೆ ನೆಟ್ಟಿಗನೊಬ್ಬ ಇದೇ ಪ್ರಶ್ನೆಯನ್ನು ಕೇಳಿದ್ದ. ನಿಮ್ಮ ಮದುವೆ ಯಾವಾಗ? ಏಳನೇ ಸಂಬಂಧ ಬೇಗ ಬರುತ್ತಾ ಎಂದು ಕೇಳಿದ್ದ. ಇದಕ್ಕೆ ಗರಂ ಆಗಿದ್ದ ಶ್ರುತಿ ಹಾಸನ್, ನಿಮಗೆ ಬೇರೆ ಕೆಲಸ ಇಲ್ವಾ? ಹೆಣ್ಣುಮಕ್ಕಳಿಗೆ ಈ ರೀತಿಯ ಸಿಲ್ಲಿ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿ, ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಗರಂ ಆಗಿಯೇ ಉತ್ತರಿಸಿದ್ದರು.
ಅಂದಹಾಗೆ, ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್, ಕೆಲ ದಿನಗಳ ಹಿಂದೆ ತಮ್ಮ ಕರಾಳ ಜೀವನದ ಕುರಿತು ಹೇಳಿಕೊಂಡಿದ್ದಾರೆ. ಅಪ್ಪ ಕಮಲ ಹಾಸನ್ ಮತ್ತು ಅಮ್ಮ ನಟಿ ಸಾರಿಕಾ ಇವರಿಬ್ಬರೂ ಪ್ರೀತಿಸಿ ಮದುವೆಯಾದವರು. ಆದರೆ 2004ರಲ್ಲಿ ಇವರ ವಿಚ್ಛೇದನವಾಗಿತ್ತು. 1986ರಲ್ಲಿ ಹುಟ್ಟಿರೋ ಶ್ರುತಿ ಹಾಸನ್ ಅವರಿಗೆ ಅಪ್ಪ-ಅಮ್ಮ ಬೇರೆಯಾದಾಗ ಇನ್ನೂ 18 ವರ್ಷ ವಯಸ್ಸು. ಬಾಲ್ಯಾವಸ್ಥೆಯಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಅಪ್ಪ-ಅಮ್ಮನ ಈ ರೀತಿಯ ಅಗಲಿಕೆಯಿಂದ ತಾವು ಹೇಗೆ ಕುಗ್ಗಿ ಹೋಗಿದ್ದೆ. ಈ ಘಟನೆಗಳಿಂದ ನಾನು ಮದ್ಯವ್ಯಸನಿಯಾಗಿದ್ದೆ. ಖಿನ್ನತೆಗೆ ಜಾರಿ ಹುಚ್ಚಿಯೂ ಆಗಿದ್ದೆ ಎಂದು ನಟಿ ಸಂದರ್ಶನದಲ್ಲಿ ಹೇಳಿದ್ದಾರೆ. ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎನ್ನುವ ಸುದ್ದಿ ಆಗ ಹಬ್ಬಿತ್ತು. ಅದು ನಿಜವೂ ಆಗಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಅಪ್ಪ-ಅಮ್ಮನ ಡಿವೋರ್ಸ್ ವಿಚಾರವೇ ಆಗಿತ್ತು. ಇದು ನನ್ನ ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿತ್ತು ಎಂದು ಶ್ರುತಿ ಹೇಳಿಕೊಂಡಿದ್ದರು.
ಮದುವೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಆಗ್ಲೇ ವ್ಯಂಗವಾಡಿದ್ದ ನಿಮ್ರತ್ ಕೌರ್! ಹಳೆಯ ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.