ರಾಣಾ ದಗ್ಗುಬಾಟಿ ನಿರ್ಮಾಣದ ಹೊಸ ಚಿತ್ರಕ್ಕೆ Vasuki Vaibhav ಸಂಗೀತ

By Suvarna NewsFirst Published Jan 8, 2022, 12:01 PM IST
Highlights

ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಇದೀಗ ಟಾಲಿವುಡ್‌ನತ್ತ ಹೆಜ್ಜೆ ಹಾಕಿದ್ದಾರೆ. ರಾಣಾ ದಗ್ಗುಬಾಟಿ ನಿರ್ಮಿಸುತ್ತಿರುವ ನಿವೇತಾ ಥಾಮಸ್‌ ಮುಖ್ಯಪಾತ್ರದಲ್ಲಿರುವ ‘35’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

'ರಾಮಾ ರಾಮಾ ರೇ', 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ', 'ಮುಂದಿನ ನಿಲ್ದಾಣ', 'ಫ್ರೆಂಚ್ ಬಿರಿಯಾನಿ', 'ಒಂದಲ್ಲ ಎರಡಲ್ಲ', 'ಬಡವ ರಾಸ್ಕಲ್', 'ಗರುಡಗಮನ ವೃಷಭವಾಹನ', 'ಮುಗಿಲ್ ಪೇಟೆ' ಎಲ್ಲವೂ ಪ್ರಯೋಗಾತ್ಮಕವಾಗಿ ಗೆದ್ದ ಚಿತ್ರಗಳೇ. ಜೊತೆಗೆ ಬಿಗ್ ಬಾಸ್ ಶೋನಲ್ಲಿ ಅವರೇ ಹಾಡಿದ್ದ ಮನ್ಸಿಂದ ಯಾರೂನೂ ಕೆಟ್ಟವ್ರಲ್ಲ ಹಾಡು. ಹೀಗೆ ಕ್ಲಾಸ್ ಚಿತ್ರಗಳಿಗೇ ಬ್ರಾಂಡ್ ಆಗಿದ್ದವರು ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ (Vasuki Vaibhav). ಇದೀಗ ವಾಸುಕಿ ಟಾಲಿವುಡ್‌ನತ್ತ (Tollwood) ಹೆಜ್ಜೆ ಹಾಕಿದ್ದಾರೆ. 

ಹೌದು! ರಾಣಾ ದಗ್ಗುಬಾಟಿ (Rana Daggubati) ನಿರ್ಮಿಸುತ್ತಿರುವ ನಿವೇತಾ ಥಾಮಸ್‌ (Nivetha Thomas) ಮುಖ್ಯಪಾತ್ರದಲ್ಲಿರುವ ‘35’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ವಾಸುಕಿ ವೈಭವ್‌, ‘ಇದು ಕಥೆಗೆ ಬದ್ಧವಾಗಿರುವ ಕಂಟೆಂಟ್‌ ಓರಿಯೆಂಟೆಡ್‌ ಚಿತ್ರ. ಇಲ್ಲಿ ಹೀರೋ, ಹೀರೋಯಿನ್‌ ಅಂತೆಲ್ಲ ಇಲ್ಲ. ಕಥೆಯೇ ಮುಖ್ಯ. ಜನಪ್ರಿಯ ನಟಿ ನಿವೇತಾ ಥಾಮಸ್‌ ನಟಿಸುತ್ತಿದ್ದಾರೆ. ನನ್ನ ಕೆಲಸ ಶುರುವಾಗಿದೆ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಅವುಗಳಿಗೆ ನಾನು ಸಂಗೀತ ಸಂಯೋಜನೆ ಮಾಡುತ್ತಿದ್ದೇನೆ. ನನ್ನ ಸಂಗೀತ ಜರ್ನಿಗೆ ಈ ಪ್ರಾಜೆಕ್ಟ್‌ನಿಂದ ಇನ್ನಷ್ಟು ಚೈತನ್ಯ ಬಂದಂತಾಗಿದೆ’ ಎಂದು ಹೇಳಿದ್ದಾರೆ.

Yash Birthday: ಕುಟುಂಬದ ಜೊತೆ ಸರಳವಾಗಿ ಬರ್ತ್‌ಡೇ ಆಚರಿಸಲಿರುವ ರಾಕಿಂಗ್ ಸ್ಟಾರ್

ಕನ್ನಡ ಬಿಗ್ ಬಾಸ್‌ (Bigg Boss) ಸೀಸನ್‌ 7ರ ರನ್ನರ್‌ ಅಪ್ ವಾಸುಕಿ ವೈಭವ್‌ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತಮ್ಮ ಮುಂದಿನ ಸಿನಿಮಾ ಹಾಡಿನ ಬಗ್ಗೆ, ನೆಚ್ಚಿನ ನಟನ ಜೊತೆ ಫೋಟೋ ಹೀಗೆ ವೆರೈಟಿಯಾಗಿ ಆಡಿಯನ್ಸ್‌ನ ಎಂಜೇಗ್‌ ಮಾಡುತ್ತಾರೆ. ವಾಸುಕಿ ತುಂಬಾನೇ ಫ್ರೆಂಡ್ಲಿ ವ್ಯಕ್ತಿ. ಎಲ್ಲರನ್ನೂ ಒಂದೇ ಸಮನಾಗಿ ಕಾಣುವ ಅಪರೂಪದ, ಟ್ಯಾಲೆಂಟೆಡ್‌ ಗಾಯಕ. ಕೆಲ ತಿಂಗಳ ಹಿಂದೆ ಖಾಸಗಿ ಹೋಟೆಲ್‌ನಲ್ಲಿ ಬಾಳೆ ಎಳೆ ಊಟ ಮಾಡಿದ್ದಾರೆ. ಫೋಟೋ ಕ್ಲಿಕ್ ಮಾಡುತ್ತಿದ್ದರೆ ಹೇಗಿರುವೆ ರಿಯಾಲಿಟಿಯಲ್ಲಿ ಹೇಗಿರುವೆ ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. 'ಭೋಜನ ಪ್ರಿಯಾ' ಎಂದು ಕ್ಯಾಪ್ಶನ್ ಬರೆದಿದ್ದಾರೆ.

RRR In Trouble: ರಾಜಮೌಳಿ ಸಿನಿಮಾಗೆ ಸ್ಟೇ ? ಬಿಗ್‌ಬಜೆಟ್ ಸಿನಿಮಾಗೆ ಕಾನೂನು ಸಂಕಟ

ಇನ್ನು 2016ರಲ್ಲಿ ನಟರಾಜ್ ಹಾಗೂ ಧರ್ಮಣ್ಣ ಕಡೂರ್ ಅಭಿನಯದ 'ರಾಮಾ ರಾಮಾ ರೇ' (Rama Rama Re) ಚಿತ್ರದ ಮೂಲಕ ಸಂಗೀತ ಸಂಯೋಜನೆ ಹಾಗೂ ಗಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಈಗ ಬಹುಬೇಡಿಕೆಯ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ  'ಮುಂದಿನ ನಿಲ್ದಾಣ'ದ (Mundina Nildana) 'ಇನ್ನೂ ಬೇಕಾಗಿದೆ' ಹಾಗೂ 'ಫ್ರೆಂಚ್ ಬಿರಿಯಾನಿ' (French Biryani) ಚಿತ್ರದ 'ಬೆಂಗಳೂರು' ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. ಜೊತೆಗೆ ವಾಸುಕಿ ಯುವ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕ. ನಾಟಕ ಮಾಡುವ ಅಪಾರ ಹುಚ್ಚು ಇದ್ದ ಇವರು ಗೀತರಚನೆಯೊಂದಿಗೆ ಅವುಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡುತ್ತಿದ್ದರು.

click me!