ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟರ್ಸ್ ಬಯೋಪಿಕ್ ಮಾಡುವುದು ಟ್ರೆಂಡ್ ಆಗಿದೆ. ಫ್ಯಾಮಿಲಿ, ಲವ್, ಆಕ್ಷನ್ ಸ್ಟೋರಿ ಮಾತ್ರ ಆರಿಸಿಕೊಳ್ಳುತ್ತಿದ್ದಲ್ಲಿ ಈಗ ನಿರ್ಮಾಪಕರೂ(Producer), ನಿರ್ದೇಶಕರೂ ಕ್ರಿಕೆಟ್ ಆಟಗಾರರು, ಸ್ಟೋರ್ಟ್ಸ್ ಪರ್ಸನಾಲಿಟಿ ಜೀವನಾಧಾರಿತ ಸಿನಿಮಾಗಳನ್ನು ಮಾಡುವಲ್ಲಿ ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ. ಅದೇ ರೀತಿ ಸ್ಟಾರ್ ನಟರೂ ಇಂತಹ ಐತಿಹಾಸಿಕ ಲೆಜೆಂಡ್‌ಗಳ ಪಾತ್ರ ಮಾಡಲು ಹೆಚ್ಚು ಆಸಕ್ತಿ ತೋರಿಸಿ ಮುಂದೆ ಬರುತ್ತಾರೆ. ಎಂ.ಎಸ್ ಧೋನಿ(M.S. Dhoni) ಅನ್‌ಟೋಲ್ಡ್ ಸ್ಟೋರಿ, 83, ಸೈನಾ, ಮೇರಿಕೋಮ್, ದಂಗಲ್, ಬಾಗ್ ಮಿಲ್ಕಾ ಬಾಗ್ ಸೇರಿದಂತೆ ಬಹಳಷ್ಟು ಸ್ಟೋರ್ಟ್ಸ್ ಸಿನಿಮಾಗಳು ಬಿಡುಗಡೆಯಾಗಿವೆ. ಬಹುತೇಕ ಅಂತಹ ಸಿನಿಮಾಗಳು ಸಿಕ್ಕಾಪಟ್ಟೆ ಖ್ಯಾತಿಯನ್ನೂ ಗಳಿಸುತ್ತವೆ. ಸದ್ಯ ವಿರಾಟ್ ಕೊಹ್ಲಿ ಬಯೋಪಿಕ್ ಬಗ್ಗೆ ಸಾಕಷ್ಟು ಕುತೂಹಲವಿದೆ.
ಇದು ಬಾಲಿವುಡ್‌ನಲ್ಲಿ ಕ್ರಿಕೆಟ್ ಬಯೋಪಿಕ್‌ಗಳ ಕಾಲವಾಗಿದೆ. ಕಾರ್ತಿಕ್ ಆರ್ಯನ್(Kartik Aryan) ಅವರ ಆಸೆ ನೆರವೇರಿದರೆ, ಶೀಘ್ರದಲ್ಲೇ ಪೈಪ್‌ಲೈನ್‌ನಲ್ಲಿ ಇನ್ನೊಂದು ಸಿನಿಮಾ ಬರುವ ಸಾಧ್ಯತೆ ಇದೆ. ಇತ್ತೀಚಿನ ಸಂದರ್ಶನವೊಂದರಲ್ಲಿ(Interview) ಅಭಿಮಾನಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿರಾಟ್ ಕೊಹ್ಲಿ ಬಯೋಪಿಕ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಬಾಲಿವುಡ್(Bollywood) ಹಂಗಾಮಾದೊಂದಿಗಿನ ಮಾತನಾಡಿದ, ಕಾರ್ತಿಕ್ ಅವರು ಯಾವ ಕ್ರಿಕೆಟಿಗನ ಬಯೋಪಿಕ್‌ನಲ್ಲಿ ನಟಿಸಲು ಬಯಸುತ್ತೀರಿ ಎಂದು ಅವರಲ್ಲಿ ಒಬ್ಬರು ಕೇಳಿದಾಗ ನಾನು ಬಯೋಪಿಕ್ ಮಾಡಲು ಇಷ್ಟಪಟ್ಟರೆ ಅದು ವಿರಾಟ್ ಕೊಹ್ಲಿ ಅವರದ್ದು ಎಂದು ಉತ್ತರಿಸಿದ್ದಾರೆ. ವಿರಾಟ್ - ಟೆಸ್ಟ್‌ಗಳಲ್ಲಿ ಭಾರತೀಯ ನಾಯಕ - ಇಂದು ವಿಶ್ವದ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರು .ವ್ಯಾಪಕವಾಗಿ ಶ್ರೇಷ್ಠ ಆಟಗಾರ ಎಂದು ಕೊಹ್ಲಿ ಪರಿಗಣಿಸಲ್ಪಟ್ಟಿದ್ದಾರೆ.
ಇತ್ತೀಚೆಗೆ ಕಾರ್ತಿಕ್ ಅವರು ಕ್ರಿಕೆಟ್ ಗೇರ್‌ನಲ್ಲಿ ಸೆಟ್‌ನಲ್ಲಿರುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದು ನಟ ಕ್ರಿಕೆಟ್ ಆಧಾರಿತ ಸಿನಿಮಾದ ಭಾಗವಾಗಿದೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು. ಅವರು ನಿಜವಾದ ಕ್ರಿಕೆಟಿಗನ ಪಾತ್ರ ಆಡುತ್ತಿದ್ದಾರೋ ಅಥವಾ ಕಾಲ್ಪನಿಕ ಕಥೆಯನ್ನು ಮಾಡುತ್ತಿದ್ದಾರೋ ಎಂಬ ಚರ್ಚೆಗಳು ಹೆಚ್ಚಾಗುತ್ತಿದೆ. ಆದರೆ ನಂತರ ಕಾರ್ತಿಕ್ ಅವರ ಈ ಲುಕ್ ಸಿನಿಮಾಗೋಸ್ಕರ ಮಾಡಿದ್ದಲ್ಲ, ಜಾಹೀರಾತು ಶೂಟಿಂಗ್‌ಗಾಗಿ ಮಾಡಲಾಗಿದೆ ಎಂಬ ವಿಚಾರ ಬಹಿರಂಗವಾಗಿದೆ.
ಇತ್ತೀಚೆಗೆ ಬಾಲಿವುಡ್‌ನಲ್ಲಿ ಕ್ರಿಕೆಟ್ ಆಧಾರಿತ ಸಾಲು ಸಾಲು ಸಿನಿಮಾಗಳು ಸಿದ್ಧವಾಗಿವೆ. ಶಾಹಿದ್ ಕಪೂರ್ ಅವರ ಜೆರ್ಸಿ ಮುಂದಿನ ಸಾಲಿನಲ್ಲಿದೆ. ಇದು ನಾನಿ ನಟಿಸಿದ ಅದೇ ಹೆಸರಿನ ತೆಲುಗು ಚಿತ್ರದ ರಿಮೇಕ್ ಆಗಿದೆ. ಎರಡು ಇತರ ಬಯೋಪಿಕ್‌ಗಳು--ಎರಡೂ ಮಹಿಳಾ ಭಾರತೀಯ ಕ್ರಿಕೆಟ್ ದಂತಕಥೆಗಳನ್ನು ಆಧರಿಸಿದೆ. ಈ ಸಿನಿಮಾಗಳ ಕೆಲಸಗಳು ಇನ್ನೂ ನಡೆಯುತ್ತಿವೆ. ಮಿಥಾಲಿ ರಾಜ್ ಆಧಾರಿತ ಶಭಾಶ್ ಮಿಥು, ತಾಪ್ಸಿ ಪನ್ನು ಇದರಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾಗಳು ಫೆಬ್ರವರಿ 4 ರಂದು ಬಿಡುಗಡೆಯಾಗಲಿದೆ. ಜೂಲನ್ ಗೋಸ್ವಾಮಿ ಅವರ ಕಥೆಯನ್ನು ಹೇಳುವ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಅನುಷ್ಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಕಪಿಲ್ ಐಕಾನಿಕ್ ಕ್ಯಾಚ್‌ಗೆ 6 ತಿಂಗಳು ಪ್ರಯತ್ನಿಸಿದ ರಣವೀರ್ ಸಿಂಗ್
ಕಾರ್ತಿಕ್ ಆರ್ಯನ್ ತನ್ನ ಕೊನೆಯ ಸಿನಿಮಾ ಧಮಾಕಾ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದಾರೆ. 2022 ರಲ್ಲಿ ಭೂಲ್ ಭುಲೈಯಾ 2, ಫ್ರೆಡ್ಡಿ ಮತ್ತು ಶೆಹಜಾದಾ ಸೇರಿದಂತೆ ಹಲವಾರು ಇತರ ಚಿತ್ರಗಳಲ್ಲಿ ಅವರನ್ನು ನೋಡಲಿದ್ದಾರೆ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಕೊಟ್ಟ ಪ್ರತಿಕ್ರಿಯೆಯು ಕಾರ್ತಿಕ್ ಹೊಸ ಪ್ರಕಾರದ ಕ್ರಿಕೆಟ್ ಬಯೋಪಿಕ್‌ಗಳಲ್ಲಿ ಪ್ರಯತ್ನಿಸಲು ಉತ್ಸುಕರಾಗಿದ್ದಾರೆಂಬುದು ಅರ್ಥವಾಗುತ್ತದೆ.
ಅನುಷ್ಕಾ ಶರ್ಮಾ(Anushka Sharma) ಅಭಿಮಾನಿಗಳಿಗೆ ಗುಡ್‌ನ್ಯೂಸ್ ಇದೆ. ಬಾಲಿವುಡ್(Bollywood) ನಟಿ ಸಿನಿಮಾ ಮಾಡದೆ ಮೂರು ವರ್ಷಗಳಾದವು. ಮದುವೆ, ಫ್ಯಾಮಿಲಿ, ಮಗು ಎಂದು ಬ್ಯುಸಿಯಾದ ಅನುಷ್ಕಾ ಶರ್ಮಾ ಈಗ ಮತ್ತೆ ಬೆಳ್ಳಿ ತೆರೆಯ ಮೇಲೆ ಮಿಂಚೋದಕ್ಕೆ ಸಿದ್ಧರಾಗಿದ್ದಾರೆ. ಹೌದು. ಅನುಷ್ಕಾ ಬ್ಯಾಕ್ ಎಟ್ ವರ್ಕ್. ನಟಿ ಗರ್ಭಿಣಿಯಾಗಿದ್ದಾಗ ಜಾಹೀರಾತು ಶೂಟಿಂಗ್ ಮಾಡುತ್ತಿದ್ದರು. ಆದರೆ ಸಿನಿಮಾ ಮಾಡಲಿಲ್ಲ. 2018ರಲ್ಲಿ ಝೀರೋ ಸಿನಿಮಾ ಮಾಡಿದ ನಂತರ ಅನುಷ್ಕಾ ಯಾವುದೇ ಸಿನಿಮಾ ಪ್ರಾಜೆಕ್ಟ್‌ಗೆ ಸೈನ್ ಮಾಡಲಿಲ್ಲ. ಇದೀಗ ನಟಿ ತಮ್ಮ ಮುಂದಿನ ಪ್ರಾಜೆಕ್ಟ್ ಎನೌನ್ಸ್ ಮಾಡಿದ್ದು ಇದಕ್ಕೆ ಚಕ್ದಾ ಎಕ್ಸ್‌ಪ್ರೆಸ್(Chakda Xpress) ಎಂದು ಹೆಸರಿಡಲಾಗಿದೆ. ಭಾರತದ ಮಾಜಿ ಕ್ಯಾಪ್ಟನ್ ಜುಲ್ಹಾನ್ ಗೋಸ್ವಾಮಿ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ನಟಿ ಸಿನಿಮಾದ ಟೀಸರ್ ಶೇರ್ ಮಾಡಿದ್ದಾರೆ.