ಸಿನಿಮಾ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ಕಬ್ಬಿಣದ ರಾಡ್ ಬಿದ್ದು ನಟ ವರುಣ್ ಧವನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಆಗಾಗ್ಗೆ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇದೀಗ ಖ್ಯಾತ ಬಾಲಿವುಡ್ ನಟ ವರುಣ್ ಧವನ್ ಅವರ ಕಾಲಿನ ಮೇಲೆ ಕಬ್ಬಿಣದ ರಾಡ್ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಕಾಲಿನ ಫೋಟೋ ಶೇರ್ ಮಾಡಿಕೊಂಡು ಮಾಹಿತಿ ನೀಡಿದ್ದಾರೆ. ಅಂದಹಾಗೆ ವರುಣ್ ಧವನ್ ಅವರು, ಚಲನಚಿತ್ರ ನಿರ್ದೇಶಕರಾದ ಡೇವಿಡ್ ಧವನ್ ಅವರ ಪುತ್ರ. 2014 ರಲ್ಲಿ ಫೋರ್ಬ್ಸ್ ಇಂಡಿಯಾದ ಸೆಲೆಬ್ರೆಟಿ 100ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅವರು ನಟಿಸಿದ ಮೊದಲ ಹನ್ನೊಂದು ಚಿತ್ರಗಳು ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದು, ಸದ್ಯ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.
2010ರಲ್ಲಿ ಮೈ ನೇಮ್ ಈಸ್ ಖಾನ್ ಸಿನಿಮಾದಲ್ಲಿ ಕರಣ್ ಜೋಹರ್ ರವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ವರುಣ್ ಅವರು, ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಿಂದ ವ್ಯವಹಾರ ನಿರ್ವಹಣೆ ವಿಷಯವನ್ನು ಅಧ್ಯಯನ ಮಾಡಿದವರು. ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಈಚಿತ್ರದ ಮೂಲಕ ಎಂಟ್ರಿ ಕೊಟ್ಟ ಆಲಿಯಾ ಭಟ್ಗೆ ನಾಯಕರಾದರು. ಅಲ್ಲಿಂದ ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆದರು. 2012ರಲ್ಲಿ ಬಿಡುಗಡೆಗೊಂಡ ಈ ಚಿತ್ರದ ಬಳಿಕ, ಬಳಿಕ ಕಳಂಕ್, ಬದ್ರಿನಾಥ್ ಕಿ ದುಲ್ಹನಿಯಾ, ಹಮ್ಟಿ ಶರ್ಮಾ ಕಿ ದುಲ್ಹನಿಯಾ ಸಿನಿಮಾಗಳಲ್ಲಿ ವರುಣ್-ಆಲಿಯಾ ಜೊತೆಯಾಗಿ ಮಿಂಚಿದ್ದಾರೆ. ನಂತರ ಬವಾಲ್ (Bawal) ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ದಾವೂದ್ಗೆ ಬಾಲಿವುಡ್ ಲಿಂಕ್? ಆತ್ಮಕಥೆಯಲ್ಲಿ ನಟ ರಿಷಿ ಕಪೂರ್ ಬಹಿರಂಗಪಡಿಸಿದ್ದರೊಂದು ಸತ್ಯ!
2014ರಲ್ಲಿ ಹಮ್ಟಿ ಶರ್ಮಾ ಕಿ ದುಲ್ಹನಿಯಾ ಚಿತ್ರದಲ್ಲಿ ನಾಯಕನಾಗಿ ಮಿಂಚಿ ಸಕತ್ ಹೆಸರು ಮಾಡಿದರು. ಅದಾದ ಬಳಿಕ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವುಗಳ ಪೈಕಿ ಕೆಲವೊಂದನ್ನು ಹೆಸರಿಸುವುದಾದರೆ 2015ರಲ್ಲಿ ರಿಲೀಸ್ ಆದ ಎಬಿಸಿಡಿ 2. ಇದು ಡಾನ್ಸ್ ಸಿನಿಮಾ ಆಗಿದ್ದರೆ, ಇದೇ ಸಾಲಿನಲ್ಲಿ ಆ್ಯಕ್ಷನ್ ಚಿತ್ರವಾದ ದಿಲ್ವಾಲೆ ಮತ್ತು 2017ರಲ್ಲಿ ಜುಡ್ವಾ-2ದಲ್ಲಿ ಕಾಣಿಸಿಕೊಂಡರು. ವಿಭಿನ್ನ ಪಾತ್ರಗಳಿಗೆ ಸೈ ಎನಿಸಿಕೊಂಡಿರುವ ವರುಣ್ ಅವರು, 2015ರಲ್ಲಿ ಬಿಡುಗಡೆಯಾದ ಕ್ರೈಮ್ ಥ್ರಿಲ್ಲರ್ ಬದ್ಲಾಪುರ್ , ಬಳಿಕ ಭದ್ರಿನಾಥ್ ಕೀ ದುಲ್ಹನಿಯಾ, 'ಅಕ್ಟೋಬರ್' ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ ಇವರ ಕಾಲುವಳು ಊದುಕೊಂಡು ಕೆಂಪಗಾಗಿರುವುದನ್ನು ಚಿತ್ರದಲ್ಲಿ ನೋಡಬಹುದು. ಕುರ್ಚಿಯ ಮೇಲೆ ವಿಶ್ರಾಂತಿ ಪಡೆದ ಚಿತ್ರವನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಚಿತ್ರದ ವೇಳೆ ಕಬ್ಬಿಣದ ರಾಡ್ ಕಾಲಿಗೆ ಬಡಿದಿರುವುದಾಗಿ ತಿಳಿಸಿದ್ದಾರೆ. ಸಿನಿ 1 ಸ್ಟುಡಿಯೋಸ್ ಮತ್ತು ಎ ಫಾರ್ ಆಪಲ್ ಸ್ಟುಡಿಯೋಸ್ ಕೈಜೋಡಿಸಿ ವರುಣ್ ಧವನ್ ನಾಯಕತ್ವದ ತಾರಾಗಣದೊಂದಿಗೆ ಆಕ್ಷನ್ ಎಂಟರ್‌ಟೈನರ್‌ಗಳಲ್ಲಿ ಒಂದನ್ನು ತರಲು ತಂಡ ಕೈಜೋಡಿಸಿದೆ. ಈ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.
ನಾಯಿ, ನರಿ ಬೊಗಳಿದರೆ ಇತಿಹಾಸ ಬದಲಾಗುವುದೆ? ನಟ ಜಗ್ಗೇಶ್ ಟ್ವೀಟ್ ವೈರಲ್