
ಬಾಲಿವುಡ್ ಖ್ಯಾತ ನಟ ವರುಣ್ ಧವನ್ ವೆಸ್ಟಿಬುಲರ್ ಹೈಪೋಫಂಕ್ಷನ್ ಎನ್ನುವ ಕಾಯಿಲೆಯಿಂದ ಬಳಲುತ್ತಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಈ ಕಾಯಿಲೆಯಿಂದ ಕೆಲವು ತಿಂಗಳು ಶೂಟಿಂಗ್‌ನಿಂದ ಬ್ರೇಕ್ ಪಡೆಯ ಬೇಕಾಯಿತು ಎಂದು ವರುಣ್ ಧವನ್ ಹೇಳಿದ್ದಾರೆ. ವರುಣ್ ಸದ್ಯ ಭೇಡಿಯಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರ ವೇಳೆ ವರುಣ್ ಧವನ್ ಈ ವಿಚಾರವನ್ನು ಬಹಿರಂಗ ಪಡಿಸಿದರು. ಜಗ್ ಜಗ್ ಜಿಯೋ ಸಿನಿಮಾದ ವೇಳೆಯೇ ಈ ಕಾಯಿಲೆ ಕಂಡುಬಂದಿತ್ತು ಎಂದು ವಿವರಿಸಿರುವ ವರುಣ್ ಬಳಿಕ ಕೆಲವು ಸಮಯ ಸಿನಿಮಾದಿಂದ ಬ್ರೇಕ್ ಪಡೆದೆ ಎಂದು ಹೇಳಿದ್ದಾರೆ.
ವೆಸ್ಟಿಬುಲರ್ ಹೈಪೋಫಂಕ್ಷನ್ ಎಂದರೇನು?
ಈ ಕಾಯಿಲೆ ಸಾಮಾನ್ಯವಾಗಿ ಕಿವಿಗೆ ಸಂಬಂಧಪಟ್ಟಿದ್ದಾಗಿದೆ. ಇದು ತಲೆಯ ಒಂದು ಬದಿಯಲ್ಲಿ ಅಥವಾ ಎರಡೂ ಬದಿಗಳ ಮೇಲೂ ಪರಿಣಾಮ ಬೀರಲಿದೆ. ಇದು ದೈನಂದಿನ ಜೀವನ ಮತ್ತು ಕಾರ್ಯನಿರ್ವಹಣೆಯ ಮೇಲೆ ನೇರ ಮತ್ತು ಪರೋಕ್ಷ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಒಳಗಿನ ಕಿವಿಯ ಒಂದು ಭಾಗವು ಕಾರ್ಯನಿರ್ವಹಿಸದಿದ್ದರೆ, ಮೆದುಳಿಗೆ ಸರಿಯಾಗಿ ಸಂದೇಶ ಕಳುಹಿಸವಲ್ಲಿ ತೊಂದರೆಯನ್ನುಂಟಾಗುತ್ತದೆ.
ದುರಹಂಕಾರಿ ಆಗಿದ್ದೆ, ಆಡಿಯನ್ಸ್ ಮಾತು ಕೇಳದೆ ತಪ್ಪು ಮಾಡಿದೆ: ವರುಣ್ ಧವನ್ ಬೇಸರ
ಇದರಿಂದ ಆಗಾಗ ತಲೆತಿರುಗುವಿಕೆ, ಕಣ್ಣು ಕತ್ತಲಾದಂತೆ ಹಾಗು ನಡೆದಾಡುವಾಗ ಎತ್ತರ ತಗ್ಗುಗಳನ್ನು ಹೊಂದಿರುವಂತೆ ಕಾಣುವುದು, ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬರುತ್ತದೆ. ಈ ವೆಸ್ಟಿಬುಲರ್ ಹೈಪೋಫಂಕ್ಷನ್ ಕೆಲವೊಂದು ರೋಗಿಗಳಲ್ಲಿ ಒಂದು ಕಿವಿಯ ಭಾಗದಲ್ಲಿ ಮಾತ್ರ ಸಂಭವಿಸುತ್ತದೆ. ಆದರೆ ಕೆಲವೊಂದು ರೋಗಿಗಳಲ್ಲಿ ಈ ರೋಗ ಲಕ್ಷಣವು ತಲೆಯ ಎರಡು ಭಾಗಗಳಲ್ಲಿ ಕಂಡುಬರುತ್ತದೆ.
ಬ್ರೇಕಪ್ ಬಗ್ಗೆ ಮೌನ ಮುರಿದ Karan Johar; ಒಂಟಿಯಾಗಿರುವ ಬಿಟ್ಟು ಬಿಡಿ
ವರುಣ್ ಧವನ್ ಕೊನೆಯದಾಗಿ ಜಗ್ ಜಗ್ ಜಿಯೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಭೇಡಿಯಾ ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಜೊತೆಗೆ ಬವಾಲ್ ಸಿನಿಮಾ ಕೂಡ ಕೈಯಲ್ಲಿದೆ. ಇನ್ನು ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ನಟಿಸುತ್ತಿದ್ದಾರೆ. ಸಮಂತಾ ಜೊತೆ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ವರುಣ್ ಅಥವಾ ಸಮಂತಾ ಕಡೆಯಿಂದ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.