
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಹ್ ಕೊಹ್ಲಿ ತಾವು ಅಪ್ಪ ಅಮ್ಮ ಆಗಲಿದ್ದೇವೆಂಬ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಇದೀಗ ಅಮುಲ್ ಈ ಜೋಡಿಗೆ ಸುಂದರ ಗ್ರೀಟಿಂಗ್ ಮೂಲಕ ಶುಭಾಶಯ ಹೇಳಿದೆ.
ಇಂಟರ್‌ನೆಟ್ ಸೆನ್ಸೇಷನ್ ಸುದ್ದಿಯನ್ನು ತೆಗೆದುಕೊಂಡು ಅಮುಲ್ ಕೊಡೋ ಸುಂದರ ಡೂಡಲ್ ಆಕರ್ಷಕವಾಗಿರುತ್ತೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ವಿರುಷ್ಕಾಗೆ ಅಮುಲ್ ವಿಶ್ ಮಾಡಿದ ರೀತಿ ಸೂಪರ್
ರಾಣಾ ಮತ್ತು ಮಿಹಿಕಾಗೆ ಅಮುಲ್ ಕೊಟ್ಟ ಗಿಫ್ಟ್ ಇದು..! ಡೂಡಲ್ ಎಷ್ಟು ಕ್ಯೂಟ್ ನೋಡಿ
2021 ಜನವರಲ್ಲಿ ತಮ್ಮ ಕುಟುಂವಕ್ಕೆ ಹೊಸ ಅತಿಥಿ ಬರುವ ಸೂಚನೆ ನೀಡಿದ ಜೋಡಿ ಸುಂದರವಾದ ಫೋಟೋ ಹಂಚಿಕೊಂಡಿದ್ದರು. ಇಬ್ಬರಿಗೂ ಶುಭಾಶಯಗಳ ಸುರಿಮಳೆ ಹರಿದುಬಂದಿದೆ.
ಇದೇ ಸಂದರ್ಭ ಕ್ಯೂಟ್ ಶುಭಾಶಯ ಕಳುಹಿಸಿದ್ದು ಅಮುಲ್. ಅಟ್ಟರ್ಲಿ ಬಟ್ಟರ್ಲಿ ರೀತಿಯಲ್ಲಿ ಜೋಡಿಗೆ ಶುಭ ಕೋರಿದ ಅಮುಲ್ ಸುಂದರ ಗ್ರೀಟಿಂಗ್ ಪೋಸ್ಟ್ ಮಾಡಿದೆ. ವಿರುಷ್ಕಾ ಆನ್ ದಿ ವೇ ಎಂದು ಕ್ಯಾಪ್ಶನ್ ಕೊಟ್ಟು ಇಬ್ಬರ ಫೋಟೋ ಹಾಕಿ ಬಟರ್ ಫಾರ್ ಬೇಟಾ ಆರ್ ಬೇಟಿ ಎಂದು ಬರೆದಿದ್ದಾರೆ.
ಚೀನಾ ಟೀಕಿಸಿದ್ದಕ್ಕೆ ಅಮೂಲ್ ಟ್ವೀಟರ್ ಖಾತೆಯೇ ಬ್ಲಾಕ್!
ಮಂಗಳವಾರ ಅನುಷ್ಕಾ ಮತ್ತು ವಿರಾಟ್ ಫೋಟೋ ಹಾಕಿ ಪ್ರಗ್ನೆನ್ಸಿ ವಿಷಯ ಬಹಿರಂಗಪಡಿಸಿದ್ದರು. ಪ್ರಿಯಾಂಕ ಚೋಪ್ರಾ, ಆಲಿಯಾ ಭಟ್, ಪ್ರೀತಿ ಝಿಂಟಾ, ಸಮಂತಾ ಸೇರಿ ಹಲವು ಸೆಲೆಬ್ರಿಟಿಗಳು ಜೋಡಿಗೆ ಶುಭಾಶಯ ಕೋರಿದ್ದಾರೆ.
ಜಾಹೀರಾತು ಸೆಟ್‌ನಲ್ಲಿ ಮೊದಲ ಭೇಟಿಯಾಗಿ, ನಂತರ ಪ್ರೀತಿಯಾಗಿ 2017ರಲ್ಲಿ ಇಟಲಿಯಲ್ಲಿ ಡೆಸ್ಟಿನೇಷನ್ ವಿವಾಹ ಮಾಡಿಕೊಂಡಿದ್ದರು. ಅನುಷ್ಕಾ ಕೊನೆಗೆ ಝೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.