ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ವಿಚಾರಣೆಗೆ ಒಳಪಡಿಸಿದೆ. ರಿಯಾ ಅವರನ್ನು ಸಿಬಿಐ ವಿಚಾರಣೆ ನಡೆಸಿದ್ದು ಇದೇ ಮೊದಲ ಬಾರಿ.
ಮುಂಬೈ: ವಿಚಾರಣೆ ವೇಳೆ ತನಿಖಾ ತಂಡವು ರಿಯಾ ಅವರನ್ನು ಮಾದಕ ವಸ್ತು ವ್ಯಸನ, ಹಣಕಾಸು ವ್ಯವಹಾರ, ಸುಶಾಂತ್ ಕುಟುಂಬಕ್ಕೂ ಆಕೆಗೂ ಇರುವ ಸಂಬಂಧ ಸೇರಿದಂತೆ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಸುಶಾಂತ್ ಮಾಜಿ ಗರ್ಲ್‌ಫ್ರೆಂಡನ್ನು ವಿಧವೆ ಎಂದ ನಟಿ ರಿಯಾ ಚಕ್ರವರ್ತಿ..!28ರ ಹರೆಯದ ರಿಯಾ ಬೆಳಗ್ಗೆ 10.30ಕ್ಕೆ ಸಾಂತಾಕ್ರೂಜ್‌ನಲ್ಲಿರುವ ಡಿಆರ್‌ಡಿಒ ಅತಿಥಿಗೃಹಕ್ಕೆ ಆಗಮಿಸಿ ವಿಚಾರಣೆಗೆ ಹಾಜರಾದರು. ಈ ನಡುವೆ, ಸುಶಾಂತ್ ಅವರ ರೂಮ್‌ಮೇಟ್ ಆಗಿದ್ದ ಸಿದ್ಧಾರ್ಥ ಪಿಠಾನಿ ಹಾಗೂ ಮನೆಗೆಲಸದ ಸಿಬ್ಬಂದಿ ದೀಪೇಶ್ ಸಾವಂತ್ ಅವರನ್ನೂ ಸಿಬಿಐ, ವಿಚಾರಣೆಗೆ ಒಳಪಡಿಸಿತು. ಇನ್ನೂ ಹಲವು ದಿನ ರಿಯಾ ವಿಚಾರಣೆ ಮುಂದುವರಿಯಲಿದೆ ಎಂದು ಮೂಲಗಳು ಹೇಳಿವೆ.
ರಿಯಾ ಸಂದರ್ಶನ ನಿರ್ಬಂಧಕ್ಕೆ ಆಗ್ರಹ:
ಈ ನಡುವೆ, ಸುಶಾಂತ್ ಕುಟುಂಬದ ಪರ ವಕೀಲರು ರಿಯಾ ಮಾಧ್ಯಮ ಸಂದರ್ಶನಕ್ಕೆ ನಿರ್ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ‘ಕಾನೂನಿನ ದೃಷ್ಟಿಯಿಂದ ಸಂದೇಹದಲ್ಲಿರುವ ವ್ಯಕ್ತಿಗಳು ಮಾಧ್ಯಮಗಳಿಗೆ ಸಂದರ್ಶನ ನೀಡುವುದನ್ನು ನಿರ್ಬಂಧಿಸಬೇಕು’ ಎಂದು ರಿಯಾ ಹೆಸರೆತ್ತದೇ ಆಗ್ರಹಿಸಿದ್ದಾರೆ. ಗುರುವಾರ ದಿನವಿಡೀ ರಿಯಾ ಹಲವಾರು ಟೀವಿ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದರು.
ದುಡ್ಡಿಗಾಗಿ ಸುಶಾಂತ್ ಸಿಂಗ್ ಜತೆ ಇರಲಿಲ್ಲವೆಂದ ರಿಯಾ..!
ರಿಯಾಗೆ ಸಿಬಿಐ ಕೇಳಿದ ಪ್ರಶ್ನೆಗಳು
- ಸುಶಾಂತ್ ಸಾವಿನ ಬಗ್ಗೆ ನಿಮಗೆ ಮೊದಲು ತಿಳಿಸಿದ್ದು ಯಾರು? ಆಗ ನೀವು ಎಲ್ಲಿದ್ದಿರಿ?
- ಸುಶಾಂತ್ ಸಾವು ಸಂಭವಿಸುವ 6 ದಿನ ಮುನ್ನ ಜೂನ್ 8ರಂದು ನೀವು ಅವರ ಮನೆಯನ್ನೇಕೆ ತೊರೆದಿರಿ?
- ಜಗಳವಾಡಿಕೊಂಡು ಸುಶಾಂತ್ ಮನೆ ಬಿಟ್ಟಿರಾ?
- ಜೂನ್ 8ರಂದು ಮನೆ ತೊರೆದ ಬಳಿಕ ಸುಶಾಂತ್ ಜತೆ ಫೋನ್‌ನಲ್ಲಿ ಮಾತನಾಡಿದಿರಾ? ಮಾತಾಡಿದ್ದರೆ ಯಾವ ವಿಚಾರದ ಬಗ್ಗೆ ಮಾತನಾಡಿದಿರಿ?
- ಸುಶಾಂತ್ ಮಾಡಿದ ಫೋನ್ ಕರೆಗಳನ್ನು ಸ್ವೀಕರಿಸದೇ ನಿರ್ಲಕ್ಷಿಸಿದ್ದಿರಾ? ಯಾಕೆ?
- ನಿಮ್ಮ ಕುಟುಂಬದವರ ಜತೆ ಸುಶಾಂತ್ ಮಾತನಾಡಿದ್ದರಾ? ನಿಮಗೂ ಸುಶಾಂತ್ ಕುಟುಂಬಕ್ಕೂ ಯಾವ ಥರದ ಸಂಬಂಧ ಇತ್ತು?
- ಸುಶಾಂತ್‌ಗೆ ಆರೋಗ್ಯ ಸಮಸ್ಯೆ, ಮಾನಸಿಕ ಸಮಸ್ಯೆ ಇತ್ತೇ? ಹಾಗಿದ್ದರೆ ವೈದ್ಯರು, ಔಷಧದ ವಿವರ ಕೊಡಿ
- ಸುಶಾಂತ್‌ಗೆ ನೀವು ಡ್ರಗ್ಸ್ ನೀಡಿದ್ದು ನಿಜವೇ? ಸಿಬಿಡಿ ಎಂಬುದು ನಿಷೇಧಿತ ಡ್ರಗ್. ಅದನ್ನು ನೀವು ಹೇಗೆ ಪಡೆದುಕೊಂಡಿರಿ?
- ಸಿಬಿಡಿ ಡ್ರಗ್ಸ್ ಅಡ್ಡಪರಿಣಾಮದ ಬಗ್ಗೆ ನಿಮಗೆ ಗೊತ್ತಿರಲಿಲ್ಲವೇ? ಎಷ್ಟುದಿನ ನೀವು ಸುಶಾಂತ್‌ಗೆ ಅದನ್ನು ನೀಡಿದ್ದಿರಿ?
- ನಿಮ್ಮ ಸೋದರ ಶೌವಿಕ್‌ನ ಸ್ನೇಹಿತನ ಜತೆ ಡ್ರಗ್ಸ್ ಖರೀದಿ ಬಗ್ಗೆ ಮಾತನಾಡಿದ್ದಿರಾ?
- ನಿಮ್ಮ ಹಣಕಾಸು ಅವಶ್ಯಕತೆಗಳನ್ನು ಸುಶಾಂತ್ ಪೂರೈಸುತ್ತಿದ್ದರಾ?
- ನೀವು ಸಿಬಿಐ ತನಿಖೆಗೇ ಏಕೆ ಒತ್ತಾಯಿಸಿದ್ದಿರಿ? ಸಾವಿನ ಹಿಂದೆ ಬೇರೇನೋ ಇದೆ ಎನ್ನಿಸಿತ್ತಾ?