* ದಕ್ಷಿಣ ಭಾರತದ ಖ್ಯಾತ ನಟಿಗೆ ಸ್ತನ ಕ್ಯಾನ್ಸರ್
* ಭಾವನಾತ್ಮಕ ಸಂದೇಶ ತಿಳಿಸಿದ ನಟಿ
* ಸೋಶಿಯಲ್ ಮೀಡಿಯಾ ಮೂಲಕ ಘಟನಾವಳಿಗಳ ವಿವರಣೆ
ಹೈದರಾಬಾದ್(ಡಿ. 20) ನಟಿಯೊಬ್ಬರು ಕ್ಯಾನ್ಸರ್ ಗೆ (Breast Cancer) ತುತ್ತಾಗಿದ್ದು ಭಾವನಾತ್ಮಕ ಪತ್ರ ಬರೆದು (Social Media) ಅಂತರಾಳವನ್ನು ಹಂಚಿಕೊಂಡಿದ್ದಾರೆ. ಕನ್ನಡ(Sandalwood) 'ಮೋಹಿನಿ 9886788888', ತೆಲುಗಿನ (Tollywood) 'ಈಗ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಹಂಸ ನಂದಿನಿ ಅವರಿಗೆ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
ಪೋಷಕ ಪಾತ್ರಗಳ ಮೂಲಕ ಹೆಸರು ಮಾಡಿದ್ದ ನಂದಿನಿ, ಐಟಂ ಸಾಂಗ್‌ಗಳಲ್ಲಿಯೂ ಹೆಜ್ಜೆ ಹಾಕಿದ್ದರು. 37 ವರ್ಷದ ನಟಿ ಕಳೆದ 4 ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗೆ ಭಾವುಕ ಸಂದೇಶವೊಂದನ್ನು ತಿಳಿಸಿದ್ದಾರೆ. ಅಭಿಮಾನಿಗಳು ಹಂಸ ಅವರಿಗೆ ಸಾಂತ್ವನ ಮತ್ತು ಧೈರ್ಯ ಹೇಳಿದ್ದಾರೆ.
undefined
ಜೀವನ ನನ್ನನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನಾನು ಇದಕ್ಕೆ ಗುರಿಯಾಕೆ ಆದೆ ಎನ್ನುವುದು ಗೊತ್ತಾಗುತ್ತಿಲ್ಲ. ಆದರೆ ನಾನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಧೈರ್ಯದಿಂದಲೇ ಎಲ್ಲವನ್ನು ಎದುರಿಸುತ್ತೇನೆ.
ನಾಲ್ಕು ತಿಂಗಳ ಹಿಂದೆ ನನ್ನ ಸ್ತನದಲ್ಲಿ ಸಣ್ಣ ಗಡ್ಡೆ ಕಾಣಿಸಿಕೊಂಡಿತು. ನನ್ನ ಜೀವನ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎನ್ನುವುದು ಆ ಸಂದರ್ಭದಲ್ಲಿ ಅರಿವಿಗೆ ಬಂದತು. ಹದಿನೆಂಟು ವರ್ಷಗಳ ಹಿಂದೆ ನನ್ನ ತಾಯಿಯನ್ನು ಕಳೆದುಕೊಂಡಿದ್ದೆ. ಇದೇ ರೋಗ ಅವರನ್ನು ಬಲಿ ಪಡೆದುಕೊಂಡಿತ್ತು. ಅದಮನ್ನೆಲ್ಲ ಮೆಟ್ಟಿ ಮುಂದಕ್ಕೆ ಸಾಗಿ ಬಂದಿದ್ದೆ.
ಸ್ತನ ಕ್ಯಾನ್ಸರ್ ಎಂಬ ಆರೋಗ್ಯದ ಶತ್ರುವಿನ ಬಗ್ಗೆ ಮಿಸ್ ಮಾಡದೇ ಈ ವಿಷ್ಯ ತಿಳ್ಕೊಳಿ.
ಅನುಮಾನ ಬಂದ ಕೆಲವೇ ಗಂಟೆಯಲ್ಲಿ ಚಿಕಿತ್ಸೆಗೆಂದು ತೆರಳಿದೆ. ಹಲವಾರು ಸ್ಕ್ಯಾನ್‌ಗಳು ಮತ್ತು ಪರೀಕ್ಷೆಗಳ ನಂತರ, ನಾನು ಧೈರ್ಯವಾಗಿ ಆಪರೇಷನ್ ಥಿಯೇಟರ್‌ಗೆ ಹೋದೆ. ಅಲ್ಲಿ ನನ್ನ ಗಡ್ಡೆಯನ್ನು ತೆಗೆದುಹಾಕಲಾಯಿತು. ಈ ಹಂತದಲ್ಲಿ ಯಾವುದೇ ಹರಡುವಿಕೆ ಇಲ್ಲ ಎಂದು ವೈದ್ಯರು ದೃಢಪಡಿಸಿದರು.
ನಾನು ಅದೃಷ್ಟವಂತೆ. ಯಾಕೆಂದರೆ, ಅದನ್ನು ನಾನು ಬಹುಬೇಗನೇ ಕಂಡುಹಿಡಿದುಬಿಟ್ಟಿದ್ದೆ. ನಾನು ಅನುವಂಶಿಕ ರೂಪಾಂತರವನ್ನು ಹೊಂದಿದ್ದೇನೆ. ಮುಂದೆ ನನ್ನ ಮತ್ತೊಂದು ಸ್ತನವು ಕ್ಯಾನ್ಸರ್ ಆಗುವ ಶೇ. 70 ಸಾಧ್ಯತೆ ಇದೆ. ಅಂಡಾಶಯದ ಕ್ಯಾನ್ಸರ್ ಆಗುವ ಸಾಧ್ಯತೆ ಶೇ. 45 ಇದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅಧಿಕ ರೋಗನಿರೋಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಿದೆ.
ನಾನು 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕೀಮೋಥೆರಪಿ ಮಾಡಿಸಿಕೊಳ್ಳಬೇಕಿದೆ. ನಾನು ಕೆಲವು ಭರವಸೆಗಳನ್ನು ನೀಡುತ್ತೇನೆ. ಇಂಥ ಚಿಕಿತ್ಸೆಗಳು ನನ್ನನ್ನು ಮತ್ತಷ್ಟು ಬಲಶಾಲಿಯನ್ನಾಗಿ ಮಾಡುತ್ತಿವೆ.
ಸ್ತನ ಕ್ಯಾನ್ಸರ್ (Hereditary Breast Cancer) ನನ್ನನ್ನು ಆವರಿಸಿರುವುದು ಗೊತ್ತಾಯಿತು. ನನ್ನಷ್ಟಕ್ಕೆ ನಾನು ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಂಡೆ. ಈ ರೋಗದೊಂದಿಗೆ ಹೋರಾಟಲು ಮಾನಸಿಕವಾಗಿ ಸಿದ್ಧಳಾದೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತ ಬೇರೆಯವರಿಗೂ ಧೈರ್ಯ ತುಂಬುವ ತೀರ್ಮಾನ ಮಾಡಿದೆ.
ನಾನು ಸಾಮಾಜಿಕ ಜೀವನದಿಂದ ದೂರವಾಗಿದ್ದಕ್ಕೆ ಅನೇಕರು ಕಾರಣ ಕೇಳಿ ಸಂದೇಶ ರವಾನಿಸಿದ್ದಾರೆ,. ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಚಿರಋಣಿ. ನಾನು ಹಿಂದಕ್ಕೆ ಸರಿಯುವ ಮಾತೇ ಇಲ್ಲ. ಹೋರಾಡುತ್ತಲೇ ಇರುತ್ತೇನೆ. ನನ್ನ ಜತೆ ನೀಮತ ನಿಮಗೆಲ್ಲ ಮತ್ತೊಂದು ಸುದ್ದಿತ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಪ್ರೀತಿಯ ಹಂಸ!
ಸ್ತನ ಕ್ಯಾನ್ಸರ್ ಸುಸೈಡ್: ಸ್ತನ ಕ್ಯಾನ್ಸರ್ ನಿಂದ ಬಳಲುತ್ತ ತನ್ನ ಕಾರಿನಲ್ಲಿ ವಾಸಿಸುತ್ತಿದ್ದ ಯುಎಸ್ ನೀಲಿ ತಾರೆ ಡೇಲಿಯಾ ಸ್ಕೈ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಏಂಜಲೀಸ್ ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿ ವಿಚಾರ ತಿಳಿಸಿತ್ತು.
ಸ್ತನ, ಕಂಕುಳು ಅಥವಾ ಎದೆಯ ಮೇಲ್ಭಾಗದಲ್ಲಿ ಊತ ಕಾಣಿಸಿಕೊಂಡರೆ, ಸ್ತನದ ಗಾತ್ರದಲ್ಲಿ ಬದಲಾವಣೆ (ಗಾತ್ರದಲ್ಲಿ ಹೆಚ್ಚಳವನ್ನು ಗಮನಿಸಬಹುದು) ಮೊಲೆ ತೊಟ್ಟು (ದದ್ದು ಅಥವಾ ಉರಿಯೂತ) ಅಥವಾ ಮೊಲೆತೊಟ್ಟುಗಳಿಂದ ಹೊರಸೂಸುವ ಯಾವುದೇ ಬದಲಾವಣೆಗಳು ಸ್ತನದ ನೋವು ಕ್ಯಾನ್ಸರ್ ಸಂಕೇತವಾಗಿರಲಿಕ್ಕಿಲ್ಲ. ಆದರೆ ಅಸಾಮಾನ್ಯ ನೋವು ಕ್ಯಾನ್ಸರ್ ಸಂಕೇತವಾಗಿರಬಹುದು ಎಚ್ಚರ ಎನ್ನುತ್ತಾರೆ ವೈದ್ಯರು.