ರಿಷಬ್ ಪಂತ್ ಬಿಟ್ಟು ರಿಷಬ್ ಶೆಟ್ಟಿ ಭೇಟಿಯಾದ ಊರ್ವಶಿ ರೌಟೇಲಾ; 'ಕಾಂತಾರ-2' ಲೋಡಿಂಗ್.. ಎಂದ ನಟಿ

By Shruthi KrishnaFirst Published Feb 11, 2023, 5:48 PM IST
Highlights

ಬಹುಭಾಷಾ ನಟಿ ಊರ್ವಶಿ ರೌಟೇಲಾ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಭೇಟಿಯಾಗಿದ್ದಾರೆ. ಫೋಟೋ ಶೇರ್ ಮಾಡಿ ಕಾಂತಾರ-2 ಲೋಡಿಂಗ್ ಎಂದು ಹೇಳಿದ್ದಾರೆ. 

ಬಹುಭಾಷಾ ನಟಿ ಊರ್ವಶಿ ರೌಟೇಲಾ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಪಂತ್ ಹಿಂದೆ ಬಿದ್ದಿರುವ ಊರ್ವಶಿ ಅವರನ್ನು ಬಿಟ್ಟು ಬಿಡದೆ ಕಾಡುತ್ತಿದ್ದಾರೆ. ಅಪಘಾತದಿಂದ ಆಸ್ಪತ್ರೆ ದಾಖಲಾಗಿದ್ದ ಪಂತ್ ಬಗ್ಗೆ ಊರ್ವಶಿ ಪರೋಕ್ಷವಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಊರ್ವಶಿ ನಡೆ ಪಂತ್ ಅಭಿಮಾನಿಗಳನ್ನು ಕೆರಳಿಸಿತ್ತು. ಇದೀಗ ಊರ್ವಶಿ ಪಂತ್ ಬಿಟ್ಟು ರಿಷಬ್ ಶೆಟ್ಟಿ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಊರ್ವಶಿ ರೌಟೇಲಾ ಶನಿವಾರ (ಫೆಬ್ರವರಿ 11) ರಿಷಬ್ ಜೊತೆಗಿನ ಫೋಟೋ ಶೇರ್ ಮಾಡಿ ಕಾಂತಾರ ಪ್ರಿಕ್ವೆಲ್ ಬಗ್ಗೆ ಸುಳಿವು ನೀಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಊರ್ವಶಿ ಕಾಂತಾರ ನಿರ್ದೇಶಕ ರಿಷಬ್ ಶೆಟ್ಟಿ ಜೊತೆ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಊರ್ವಶಿ ಹಳದಿ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಬಿಳಿ ಬಣ್ಣದ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಊರ್ವಶಿ ಫೋಟೋ ಶೇರ್ ಮಾಡಿ, 'ಕಾಂತಾರಾ-2 ರಿಷಬ್ ಶೆಟ್ಟಿ  ಮತ್ತು ಹೊಂಬಾಳಿ ಫಿಲ್ಮ್ಸ್ ಲೋಡಿಂಗ್' ಎಂದು ಹೇಳಿದ್ದಾರೆ. 

ಕಾಂತಾರ ತಂಡಕ್ಕೆ ಬಿಗ್ ರಿಲೀಫ್; ರಿಷಬ್ ಶೆಟ್ಟಿ, ಕಿರಗಂದೂರು ಬಂಧನಕ್ಕೆ ಸುಪ್ರೀಂ ಕೋರ್ಟ್ ತಡೆ

Latest Videos

ಊರ್ವಶಿ ಫೋಟೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ರಿಷಬ್ ಪಂತ್ ಹೆಸರು ಹೇಳಿ ಕಾಲೆಳೆದಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ,  'ರಿಷಬ್ ಪಂತ್ ಇಲ್ಲ ಎಂದು ರಿಷಬ್ ಶೆಟ್ಟಿಗೆ ಸಹಿ ಮಾಡಿದ್ದೀರಾ' ಎಂದು ಕೇಳಿದ್ದಾರೆ. ಅನೇಕರು ಪಂತ್ ಹೆಸರು ಹೇಳಿ ಟ್ರೋಲ್ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಓಯ್‌ ಅಕ್ಕ.. ನಿಮ್ಮ ಲೈಫ್‌ಅಲ್ಲಿ ಎಷ್ಟೆಲ್ಲಾ ರಿಷಬ್‌ ಇದ್ದಾರೆ..?' ಎಂದು ಕೇಳುತ್ತಿದ್ದಾರೆ. ಇಬ್ಬರ ಫೋಟೋ ವೈರಲ್ ಆಗಿದ್ದು ಭೇಟಿಯ ಕಾರಣ ಬಹಿರಂಗವಾಗಿಲ್ಲ. ಊರ್ವಶಿ ರೌಟೇಲಾ ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿಸುತ್ತಿದ್ದಾರಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. 

Rishabh Pant; ಪಂತ್ ಹಿಂದೆ ಬಿದ್ದಿರುವ ಊರ್ವಶಿ; ಆಸ್ಪತ್ರೆ ಫೋಟೋ ಶೇರ್ ಮಾಡಿದ ನಟಿಗೆ ನಟ್ಟಿಗರ ತರಾಟೆ

ಕಾಂತಾರ ಪ್ರೀಕ್ವೆಲ್ ಬಗ್ಗೆ 

ಕಾಂತಾರ ಸಿನಿಮಾದ ಪ್ರೀಕ್ವೆಲ್ ಬರುವ ಬಗ್ಗೆ ಇತ್ತೀಚಿಗಷ್ಟೆ ರಿಷಬ್ ಶೆಟ್ಟಿ ಬಹಿರಂಗ ಪಡಿಸಿದ್ದರು. ಈಗಾಗಲೇ ನೋಡಿದ್ದು ಕಾಂತಾರ-2, ಮುಂದೆ ಬರುವುದು ಪಾರ್ಟ್-1 ಎಂದು ಹೇಳಿದ್ದರು. ಈ ಮೂಲಕ ಕಾಂತಾರ ಪ್ರೀಕ್ವೆಲ್ ಬಗ್ಗೆ ರಿಷಬ್ ಶೆಟ್ಟಿ ಬಹಿರಂಗ ಪಡಿಸಿದ್ದರು. ರಿಷಬ್ ಶೆಟ್ಟಿ ಬಹಿರಂಗ ಪಡಿಸಿದ ಬೆನ್ನಲ್ಲೇ ಊರ್ವಶಿ ಭೇಟಿ ಮಾಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಕಾಂತಾರ ಸೂಪರ್ ಸಕ್ಸಸ್ ಆದ ಬಳಿಕ ರಿಷಬ್ ಶೆಟ್ಟಿ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ರಿಷಬ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಇದೀಗ ಪ್ರೀಕ್ವೆಲ್ ಬಗ್ಗೆ ಬಹಿರಂಗ ಪಡಿಸುವ ಮೂಲಕ ಕಾಂತಾರ ಪಾರ್ಟ್-1  ಮಾಡುವ ಸಾಧ್ಯತೆ ಹೆಚ್ಚಿದೆ.

ಊರ್ವಶಿ ಸಿನಿಮಾಗಳ ಬಗ್ಗೆ 

ಊರ್ವಶಿ ಇತ್ತೀಚೆಗೆ ವಾಲ್ಟೇರ್ ವೀರಯ್ಯ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಊರ್ವಶಿ ಮೆಗಾಸ್ಟಾರ್ ಚಿರಂಜೀವಿ ಜೊತೆ ಬಾಸ್ ಪಾರ್ಟಿ ಹಾಡಿನಲ್ಲಿ ಕಾಣಿಸಿಕೊಂಡರು. ಊರ್ವಶಿ ಸದ್ಯ ರಾಮ್ ಪೋತಿನೇನಿ ಜೊತೆ ನಟಿಸುತ್ತಿದ್ದಾರೆ. ಇನ್ನೂ ಇನ್ಸ್‌ಪೆಕ್ಟರ್ ಅವಿನಾಶ್ ಚಿತ್ರದಲ್ಲಿ ರಣದೀಪ್ ಹೂಡಾ ಜೊತೆ ನಟಿಸುತ್ತಿದ್ದಾರೆ. ಇನ್ನೂ ಮೂಲಗಳ ಪ್ರಕಾರ ಊರ್ವಶಿ ಹಾಲಿವುಡ್‌ಗೆ ಹಾರುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 
 

   

click me!