
ಇದೇ 14ರಂದು ಗುಜರಾತ್ನ ಅಹಮದಾಬಾದ್ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿ ವೇಳೆ, ಕ್ರೀಡೆ ನೋಡಲು ತೆರಳಿದ್ದ ಬಾಲಿವುಡ್ ಖ್ಯಾತ ನಟಿ ಊರ್ವಶಿ ರೌಟೇಲಾ (Uravashi Rautela) ಅವರು ತಮ್ಮ ಚಿನ್ನದ ಐಫೋನ್ ಅನ್ನು ಕಳೆದುಕೊಂಡಿದ್ದಾರೆ! ಸುಂದರವಾದ ನೀಲಿ ಬಣ್ಣದ ಡ್ರೆಸ್ ಧರಿಸಿ ಭಾರತ ಕ್ರಿಕೆಟ್ ತಂಡವನ್ನು ಬೆಂಬಲಿಸಲು ಬಂದಿದ್ದ ಊರ್ವಶಿ ರೌಟೇಲಾ ಬಂದಿದ್ದ ಊರ್ವಶಿಯವರು ಭಾರತ ಗೆದ್ದ ಖುಷಿಯಲ್ಲಿ ಇರುವಾಗಲೇ ಫೋನ್ ಕಳೆದುಕೊಂಡಿದ್ದಾರೆ. ಈ ಕುರಿತು ಅಂದೇ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ನನ್ನ 24 ಕ್ಯಾರೆಟ್ ಚಿನ್ನದ ಐಫೋನ್ ಅನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನಡೆಯುವಾಗ ಕಳೆದುಕೊಂಡಿದ್ದೇನೆ. ದಯವಿಟ್ಟು ಸಹಾಯ ಮಾಡಿ, ಯಾರಿಗಾದರೂ ಮೊಬೈಲ್ ಸಿಕ್ಕರೆ ಮರಳಿಸಿ, ಅಥವಾ ನನ್ನನ್ನು ಸಂಪರ್ಕಿಸಿ ಎಂದು ಊರ್ವಶಿ ಬರೆದುಕೊಂಡಿದ್ದಾರೆ. ತಮ್ಮ ಈ ಪೋಸ್ಟ್ ಅನ್ನು ಅಹಮದಾಬಾದ್ ಪೊಲೀಸರಿಗೆ ಹಾಗೂ ನರೇಂದ್ರ ಮೋದಿ ಸ್ಟೇಡಿಯಂನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿದ್ದರು.
ದಿನಗಳು ಕಳೆದರೂ ಫೋನ್ ಸಿಗದ ಕಾರಣ, ಪೊಲೀಸ್ ಠಾಣೆಗೆ ದೂರು ಕೊಟ್ಟು, ದೂರಿನ ಪ್ರತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದರ ಜೊತೆಗೆ, ಇದೀಗ ನಟಿ ತಮ್ಮ ಫೋನ್ ಹುಡುಕಿ ಕೊಟ್ಟವರಿಗೆ ಭರ್ಜರಿ ಬಹುಮಾನವನ್ನೂ ಘೋಷಿಸಿದ್ದರು. ಮೊಬೈಲ್ ತಂದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಹೇಳಿರುವ ಊರ್ವಶಿ, ಆ ಬಹುಮಾನ ಯಾವುದು ಎನ್ನುವುದನ್ನು ತಿಳಿಸಿರಲಿಲ್ಲ. ಮೊಬೈಲ್ ಕಳೆದುಕೊಂಡಿರುವ ಕುರಿತು ಪೊಲೀಸರು ಕೂಡ ಕಾಳಜಿ ವಹಿಸಿದ್ದು, ಊರ್ವಶಿ ಮೊಬೈಲ್ ಬೇಗ ಸಿಗಲಿ ಎಂದು ಹಾರೈಸಿದ್ದರು.
ನಾನು ಮಾಡಿದ್ದು ಸೆಕ್ಸ್ ಸೀನೆಂದು ಪ್ಲೀಸ್ ನೋಯಿಸಬೇಡಿ, ಅದು ರೇಪ್ ಸೀನ್ ಅಷ್ಟೇ: ನಟಿ ಮೆಹ್ರೀನ್
ಇದೀಗ ಅಜ್ಞಾತ ವ್ಯಕ್ತಿಯಿಂದ ನಟಿ ಊರ್ವಶಿಗೆ ಮೇಲ್ ಒಂದು ಬಂದಿದೆಯಂತೆ. ಆ ಮೇಲ್ ಅನ್ನು ನಟಿ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇ-ಮೇಲ್ ಕಳುಹಿಸಿರುವ ವ್ಯಕ್ತಿಯು, ನಿಮ್ಮ ಫೋನ್ ನನ್ನ ಬಳಿಯಿದೆ. ವಾಪಸ್ ಕೊಡುತ್ತೇನೆ. ಆದರೆ ನನಗೊಂದು ಸಹಾಯ ಮಾಡಿದೆ ಎಂದಿದ್ದಾನೆ. ಅಷ್ಟಕ್ಕೂ ಆ ವ್ಯಕ್ತಿ ಇಟ್ಟಿರುವ ಬೇಡಿಕೆ ಏನೆಂದರೆ, ಆ ಫೋನ್ ನನ್ನ ಬಳಿ ಇದೆ. ನಿಮಗೆ ಬೇಕಾದರೆ, ನೀವು ನನಗೆ ಸಹಾಯ ಮಾಡಬೇಕು. ನನ್ನ ಸಹೋದರ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾನೆ. ನೀವು ಅವನ ಕ್ಯಾನ್ಸರ್ ಚಿಕಿತ್ಸೆಗೆ ಸಹಾಯ ಮಾಡಬೇಕು ಎಂದಿದ್ದಾನೆ. ಈ ಮೇಲ್‌ಗೆ ನಟಿ ಓಕೆ ಎಂದು ಥಮ್ಸ್ ಅಪ್ ಎಮೋಜಿ ಹಾಕಿದ್ದಾರೆ. ಈಗ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಅಷ್ಟಕ್ಕೂ 24 ಕ್ಯಾರೆಟ್ ಚಿನ್ನ ಇರುವ ಫೋನ್ ಬೆಲೆ 7 ಲಕ್ಷದ 55 ಸಾವಿರದ 430ರೂಪಾಯಿ ಎಂದಿದ್ದಾರೆ ನಟಿ. ನಟಿ ಊರ್ವಶಿ ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಬೇರೆ ಬೇರೆ ವಿಚಾರಗಳಿಗೆ ಸುದ್ದಿ ಆಗುತ್ತಿರುವುದೇ ಹೆಚ್ಚು.ಈಗ ಫೋನ್ ಮೂಲಕ ಸುದ್ದಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಇವರು ಫೋನ್ ಕಳೆದುಹೋಗಿರೋ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದೇ ಹಲವರು ಹೇಳುತ್ತಿದ್ದಾರೆ. ಈಗ ಮೇಲ್ ಬಂದಿರುವ ವ್ಯಕ್ತಿಯ ಮೇಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ನಟಿ, ನಂತರ ಅದನ್ನು ಡಿಲೀಟ್ ಮಾಡಿರುವುದೂ ಹಲವು ಸಂದೇಹಕ್ಕೆ ಕಾರಣವಾಗಿದೆ.
ದೇಹದ ಆಕಾರ ಬದಲಿಸಿಕೊಂಡ ಹೃತಿಕ್ ರೋಷನ್: ಎಲ್ಲವೂ ಗರ್ಲ್ಫ್ರೆಂಡ್ನಿಂದ ಸಾಧ್ಯವಾಯ್ತು ಎಂದ ನಟ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.