"ಹುಡುಗರನ್ನು ಹಾದಿ ತಪ್ಪಿಸಲೆಂದೇ ರಾಖಿ ಇಂಥ ಹಾಟ್ ಹಾಟ್ ವಿಡಿಯೋ ಹರಿಬಿಡುವುದು ಮಾಮೂಲಿ" ಎನ್ನುವುದು ಹಲವರ ವಾದ. ಆದರೆ, ಇನ್ನು ಕೆಲವರದು ಬೇರೆಯದೇ ವಾದ. "ಅವಳಿಗೆ ಸುಮ್ಮನೇ ಇರಲು ಆಗುವುದಿಲ್ಲ, ಆ ಕಾರಣಕ್ಕೆ ಆಕೆ ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ಹಾಟ್ ಫೋಟೋ ಅಥವಾ ವೀಡಿಯೋ ತೇಲಿಬಿಡುತ್ತಾಳೆ" ಎನ್ನುತ್ತಾರೆ.
ಬಾಲಿವುಡ್ ಹಾಗೂ ಬಿಗ್ ಬಾಸ್ ಖ್ಯಾತಿಯ ಹಾಟ್ ತಾರೆ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಗೆ ಬಿದ್ದಿದ್ದಾಳೆ. ಅವಳೇ ಸುದ್ದಿ ಮಾಡಬೇಕೆಂದು ಜಿದ್ದಿಗೆ ಬಿದ್ದು ಹೀಗೆಲ್ಲ ಅವತಾರ ಎತ್ತುತ್ತ, ಆಟ ಆಡುತ್ತಾ ಬೇರೆಯವರನ್ನೂ ಆಟ ಆಡಿಸುತ್ತಾಳೋ ಅಥವಾ ಅವಳೇನೇ ಮಾಡಿದರೂ ಅದೇ ಸುದ್ದಿಯಾಗುತ್ತೋ ದೇವರೇ ಬಲ್ಲ! ಒಟ್ಟಿನಲ್ಲಿ ಗ್ರೀನ್ ಡ್ರೆಸ್‌ನಲ್ಲಿ ಮೈ-ಮಾಟ ತೋರಿಸುತ್ತ ಕುಣಿಯುತ್ತಿರುವ ರಾಖಿ ಸಾವಂತ್ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ರಾಖಿ ಸಾವಂತ್ ಎಂದರೆ ಪಡ್ಡೆಗಳಿಗೆ ರಸಗುಲ್ಲ ಎನ್ನಬಹುದು. ಅವಳ ಹೆಸರು ಕೇಳಿದರೂ ಸಾಕು, ಅದೆಷ್ಟೋ ರೋಡ್ ರೋಮಿಯೋಗಳು ಜೊಲ್ಲು ಸುರಿಸುವುದು ಗ್ಯಾರಂಟಿ ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ರಾಖಿ ಸಾವಂತ್ ಒಂದೇ ಒಂದು ಹಾಟ್ ಫೋಟೋ ಹಾಕಿದರೆ ಮುಗಿಯಿತು! ಒಂದು ವಾರ ಹಲವು ಹುಡುಗರಿಗೆ ಜ್ವರ, ಮಿಲಿಯನ್ ಗಟ್ಟಲೇ ವೀಕ್ಷಣೆ, ಲಕ್ಷಗಟ್ಟಲೇ ಲೈಕ್ಸ್. ಇಂತಿಪ್ಪ ರಾಖಿ ಇದೀಗ ಹಾಟ್ ವಿಡಿಯೋ ಹರಿಬಿಟ್ಟಿದ್ದಾಳೆ ಎಂದರೆ, ಹದಿಹರೆಯದ ಹಲವು ಹುಡುಗರು ಹಾದಿ ತಪ್ಪಿ ಹಳ್ಳದಲ್ಲಿ ಬೀಳುವುದು ಕನ್ಫರ್ಮ್!
BBK10 ಪ್ರೇಮಿಗಳು ಶಾಕ್: 'ದೊಡ್ಮನೆ'ಯಲ್ಲಿ ನಡೆಯಿತಾ ಘೋರ ದುರಂತ, ಕಾರ್ತಿಕ್-ಸಂಗೀತಾ ಮಧ್ಯೆ ಬಿಗ್ ಫೈಟ್?!
ಹುಡುಗರನ್ನು ಹಾದಿ ತಪ್ಪಿಸಲೆಂದೇ ರಾಖಿ ಇಂಥ ಹಾಟ್ ಹಾಟ್ ವಿಡಿಯೋ ಹರಿಬಿಡುವುದು ಮಾಮೂಲಿ ಎನ್ನುವುದು ಹಲವರ ವಾದ. ಆದರೆ, ಇನ್ನು ಕೆಲವರದು ಬೇರೆಯದೇ ವಾದ. "ಅವಳಿಗೆ ಸುಮ್ಮನೇ ಇರಲು ಆಗುವುದಿಲ್ಲ, ಆ ಕಾರಣಕ್ಕೆ ಆಕೆ ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ಹಾಟ್ ಫೋಟೋ ಅಥವಾ ವೀಡಿಯೋ ತೇಲಿಬಿಡುತ್ತಾಳೆ. ಇದರಿಂದ ಹರೆಯದ ಹುಡುಗರಿಗೆ ಎಷ್ಟು ಕಷ್ಟವಾಗುತ್ತದೆ, ಹುಡುಗರು ಏನು ಮಾಡುತ್ತಾರೆ ಎಂಬ ಬಗ್ಗೆ ಆಕೆ ತಲೆ ಕೆಡಿಸಿಕೊಳ್ಳಲಿಕ್ಕಿಲ್ಲ" ಎಂಬುದು ಹಲವರ ಅನಿಸಿಕೆ.
BBK10: ಅದೆಷ್ಟೇ ಟಾರ್ಗೆಟ್ ಮಾಡಿದ್ರೂ ಈ ಮೂವರನ್ನ 'ದೊಡ್ಮನೆ'ಯಿಂದ ಮನೆಗೆ ಕಳಿಸಲು ಆಗದು!
ರಾಖಿ ಸಾವಂತ್ ಯಾಕೆ ತಲೆ ಕೆಡಿಸಿಕೊಳ್ಳುತ್ತಾಳೆ ಅಥವಾ ತಲೆ ಕೆಡಿಸಿಕೊಳ್ಳಬೇಕು ಹೇಳಿ! ಅವಳಿಂದಲೇ ತಲೆ ಕೆಟ್ಟವರು, ಅವಳಿಗಾಗಿಯೇ ತಲೆ ಕೆಡಿಸಿಕೊಳ್ಳುವವರು ತುಂಬಾ ಮಂದಿ ಇದ್ದಾರೆ. ಅರ್ಧಂಬರ್ಧ ಬಟ್ಟೆ ತೊಟ್ಟು ಅವಳೊಂದು ಹಾಟ್ ವಿಡಿಯೋ ಹರಿಬಿಟ್ಟರಾಯ್ತು, ಮಿಕ್ಕಿದ್ದು ಏನಾಗಬೇಕೋ ಅದು ಆಗಿಯೇ ಆಗುತ್ತದೆ. ಕ್ಷಮಿಸಿ, ಏನಾಗಬಾರದೋ ಅದು ಆಗುತ್ತದೆ..! ಒಟ್ಟಿನಲ್ಲಿ, ಜನ ಮರುಳೋ ಜಾತ್ರೆ ಮರುಳೋ, ಉತ್ತರ ಹೇಳುವವರಾರು?