ಅಬ್ಬಾ..! 190 ಕೋಟಿ ಮೌಲ್ಯದ ಬಂಗ್ಲೆಗೆ ಶಿಫ್ಟ್ ಆದ ನಟಿ ಊರ್ವಶಿ ರೌಟೇಲಾ: ಈ ಐಷಾರಾಮಿ ಮನೆಯ ವಿಶೇಷತೆ ಏನು?

By Shruthi KrishnaFirst Published Jun 2, 2023, 12:38 PM IST
Highlights

190 ಕೋಟಿ ಮೌಲ್ಯದ ಬಂಗ್ಲೆಗೆ ನಟಿ ಊರ್ವಶಿ ರೌಟೇಲಾ ಶಿಫ್ಟ್ ಆಗಿದ್ದಾರೆ. ಈ ಐಷಾರಾಮಿ ಮನೆಯಲ್ಲಿ ಎಲ್ಲಾ ಸೌಕರ್ಯಗಳು ಇವೆ.

ನಟಿ ಊರ್ವಶಿ ರೌಟೇಲಾ ಸಿನಿಮಾಗಳು ಇಲ್ಲದಿದ್ದರೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಕಾನ್ ಫಿಲ್ಮ್ ಫೆಸ್ಟಿಲವ್‌ನಲ್ಲಿ ಹೆಜ್ಜೆ ಹಾಕಿ ಸದ್ದು ಮಾಡಿದ್ದ ಊರ್ವಶಿ ಇದೀಗ ದುಬಾರಿ ಬಂಗಲೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ನಟಿ ಊರ್ವಶಿ ಮುಂಬೈನ ಪ್ರತಿಷ್ಠಿತ ಜುಹು ಪ್ರದೇಶದ ಹೊಸ ಬಂಗಲೆಗೆ ಶಿಫ್ಟ್ ಆಗಿದ್ದಾರೆ. ಈ ಬಂಗ್ಲೆಯ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಹೌದು ಬರೋಬ್ಬರಿ 190 ಕೋಟಿ ಮೌಲ್ಯದ ಐಷಾರಾಮಿ ಮನೆಗೆ ಊರ್ವಶಿ ಶಿಫ್ಟ್ ಆಗಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ ದಿವಂಗತ ಯಶ್ ಚೋಪ್ರಾ ಅವರ ಮನೆಯ ಪಕ್ಕಕ್ಕೆ ಊರ್ವಶಿ ಹೊಸ ಬಂಗಲೆಯಿದೆ. ಐಷಾರಾಮಿ ಜೀವನಕ್ಕೆ ಮಾರುಹೋಗಿರುವ ಸೆಲೆಬ್ರಿಟಿಗಳಲ್ಲಿ ಊರ್ವಶಿ ಕೂಡ ಒಬ್ಬರು. ಸದ್ಯ ಸ್ಥಳಾಂತರಗೊಂಡಿರುವ ಮನೆಯಲ್ಲಿ ಅನೇಕ ಸೌಕರ್ಯಗಳು ಇದೆ ಎನ್ನಲಾಗಿದೆ. 

ಊರ್ವಶಿ ಹೊಸ ಬಂಗಲೆ ನಾಲ್ಕು ಅಂತಸ್ತನ್ನು ಹೊಂದಿದೆ. ಅದ್ದೂರಿ ಉದ್ಯಾನ, ಜಿಮ್ ಮತ್ತು ಮನೆಯ ಮುಂದೆ ದೊಡ್ಡ ಜಾಗವಿದೆ. ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ ಒಡೆತನದಲ್ಲಿದ್ದ ಜನಪ್ರಿಯ ಚೋಪ್ರಾ ಬಂಗಲೆಗೆ ಊರ್ವಶಿ ಹೊಸ ಬಂಗಲೆ ಅಂಟಿಕೊಂಡಿದೆ. ಊರ್ವಶಿ 190 ಕೋಟಿ ರೂಪಾಯಿ ಹೂಡಿಕೆ  ಮಾಡಿರುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಇಷ್ಟು ದೊಡ್ಡ ಮನೆಗೆ ಶಿಫ್ಟ್ ಆಗಿರುವ ನಟಿ ಅದನ್ನು ಖರೀದಿ ಮಾಡಿದ್ದಾರಾ ಅಥವಾ ಬಾಡಿಗೆಗೆ ಶಿಫ್ಟ್ ಆಗಿದ್ದಾರಾ ಎನ್ನುವ ಬಗ್ಗೆ ಮಾಹಿತಿ ರಿವೀಲ್ ಮಾಡಿಲ್ಲ. 

ಐಶ್ವರ್ಯಾ ರೈಯಿಂದ ಪ್ರಿಯಾಂಕಾ ಚೋಪ್ರಾವರೆಗೆ: ಬಣ್ಣ ಬಣ್ಣದ ಲಿಪ್ಸ್ಟಿಕ್‌ ಹಾಕಿ ಟ್ರೋಲ್ ಆದ ನಟಿಯರು

ನಟಿ ಊರ್ವಶಿ ತನ್ನ ಕನಸಿನ ಮನೆಗಾಗಿ ಏಳೆಂಟು ತಿಂಗಳಿಂದ ಹುಡುಕುತ್ತಿದ್ದರು. ಲೋಖಂಡ್‌ವಾಲಾ ಕಾಂಪ್ಲೆಕ್ಸ್‌ನ ಸೆಲೆಸ್ಟ್ ಎಂಬ ಹೆಸರಿನ ಬಂಗಲೆಯ ಮೇಲೆ ತುಂಬಾ ಆಸಕ್ತಿ ಹೊಂದಿದ್ದರು. ಆದರೀಗ ಜುಹು ಆಯ್ಕೆ ಮಾಡಿಕೊಂಡಿದ್ದಾರೆ. ಜುಹುವಿನಲ್ಲಿ ಬಾಲಿವುಡ್‌ನ ಜನಪ್ರಿಯ ವ್ಯಕ್ತಿಗಳು ವಾಸಿಸುತ್ತಿದ್ದಾರೆ.  ಜಲ್ಸಾದಲ್ಲಿ ಅಮಿತಾಬ್ ಬಚ್ಚನ್, ಶಿವಶಕ್ತಿಯಲ್ಲಿ ಅಜಯ್ ದೇವಗನ್ ಮತ್ತು ಕಾಜೋಲ್, ವಿಲ್ಲಾ ಇನ್ ದಿ ಸ್ಕೈನಲ್ಲಿ  ಹೃತಿಕ್ ರೋಷನ್, ಮನ್ನತ್ ಅಪಾರ್ಟ್‌ಮೆಂಟ್‌ನಲ್ಲಿ ಜಾನ್ ಅಬ್ರಹಾಂ, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ, ನಟ ಅನಿಲ್ ಕಪೂರ್ ಕೂಡ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅನೇಕರು ಸ್ಟಾರ್ಸ್ ಅಲ್ಲೇ ಸುತ್ತಮುತ್ತ ವಾಸಿಸುತ್ತಿದ್ದಾರೆ. ಇದೀಗ ಊರ್ವಶಿ ಕೂಡ ಶಿಫ್ಟ್ ಆಗಿದ್ದಾರೆ. 

ಅಬ್ಬಬ್ಬಾ..ಊರ್ವಶಿ ರೌಟೆಲಾ ಧರಿಸಿದ್ದ ಮೊಸಳೆ ನೆಕ್ಲೇಸ್ ಬೆಲೆ 270 ಕೋಟಿನಾ!

ಊರ್ವಶಿ ಇತ್ತೀಚೆಗೆ 76 ನೇ ಕಾನ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರು. ಪ್ರತಿಷ್ಠಿತ ಉತ್ಸವದಲ್ಲಿ ಕಾಣಿಸಿಕೊಂಡ ನಂತರ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ವಿಪ್ಸ್ಟಿಕ್ ಮತ್ತು ನೆಕ್ಲೆಸ್ ವಿಚಾರಕ್ಕೆ ಟ್ರೋಲ್ ಆಗಿದ್ದರು. ಕಾನ್ ಫೆಸ್ಟಿವಲ್ ಬಳಿಕ ಅಬುಧಾಬಿಯಲ್ಲಿ ನಡೆದ IIFA ಪ್ರಶಸ್ತಿ ಸಮಾರಂಭದಲ್ಲೂ ಭಾಗವಹಿಸಿದರು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ ಕೊನೆಯದಾಗಿ ತೆಲುಗು ಏಜೆಂಟ್‌ ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಆದರೆ ಸಿನಿಮಾಗಿಂತ ಹೆಚ್ಚಾಗಿ ಊರ್ವಶಿ ಐಷಾರಾಮಿ ಜೀವನದ ಮೂಲಕವೇ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ.   

click me!