ಆತನಿಗೆ ಶೇಕ್‌ಹ್ಯಾಂಡ್‌ ಮಾಡ್ದೆ: ನನ್ನ ಕೈಯಿಂದ ಬಳ ಬಳ ಎಂದು ರಕ್ತ ಸೋರಲು ಶುರುವಾಯ್ತು! ಆ ಘಟನೆ ನೆನೆದ ಅಕ್ಷಯ್

By Suchethana D  |  First Published Nov 24, 2024, 8:10 AM IST

ಅಭಿಮಾನಿಗಳೆಂದು ಬಂದವರಿಗೆ ಶೇಕ್‌ಹ್ಯಾಂಡ್‌ ಮಾಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬ್ಲೇಡ್‌ನಿಂದ ಮಾಡಿದ ಕಿತಾಪತಿಯನ್ನು ನೆನಪಿಸಿಕೊಂಡಿದ್ದಾರೆ ನಟ ಅಕ್ಷಯ್‌ ಕುಮಾರ್‍‌. 
 


ಬಾಲಿವುಡ್ ಖಿಲಾಡಿ ಎಂದೇ ಫೇಮಸ್‌ ಆಗಿರೋ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ಮತದಾನ ಮಾಡಿ ಸದ್ಯ ಸುದ್ದಿಯಲ್ಲಿದ್ದಾರೆ.  ಮಹಾರಾಷ್ಟ್ರದಲ್ಲಿ ಮತದಾನ ಮಾಡಿದ್ದೂ ಅಲ್ಲದೇ, ಅಲ್ಲಿಯ ವೃದ್ಧರೊಬ್ಬರ ಅಹವಾಲು ಸ್ವೀಕರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹೀರೋ ಕೂಡ ಎನ್ನಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಈಚೆಗೆ ಪ್ರಾಣಾಂತಕರಾಗಿಯಾಗಿರುವ ಪಾನ್‌ ಮಸಾಲಾ ಜಾಹೀರಾತಿನಿಂದ ಹಿಂದಕ್ಕೆ ಸರಿದು ಕೂಡ ಮಾದರಿಯಾಗಿದ್ದಾರೆ. ಶಾರುಖ್‌ ಖಾನ್‌, ಅಜೆಯ್‌ ದೇವಗನ್‌ ಜೊತೆ ಅಕ್ಷಯ್‌ ಕುಮಾರ್‍‌ ಕೂಡ ಪಾನ್‌ ಮಸಾಲಾ ಜಾಹೀರಾತಿನ ರಾಯಭಾರಿಯಾಗಿದ್ದರು. ಆದರೆ ಸ್ಟಾರ್‍‌ ನಟರು ಹೀಗೆ ಯುವಕರ ದಾರಿ ತಪ್ಪಿಸಿ ಅವರನ್ನು ಮೃತ್ಯುಕೂಪಕ್ಕೆ ತಳ್ಳುವುದು ಸರಿಯಲ್ಲ ಎಂಬ ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ ತಾವು ಮಾಡುತ್ತಿರುವುದು ತಪ್ಪು ಎಂದು ಅಕ್ಷಯ್‌ ಕುಮಾರ್‍‌ ಅದರಿಂದ ಹಿಂದಕ್ಕೆ ಸರಿದಿದ್ದಾರೆ. ಈಗ ಉಳಿದ ಇಬ್ಬರು ನಟರ ಜೊತೆ ಈ ಜಾಹೀರಾತಿನಲ್ಲಿ ಟೈಗರ್‍‌ ಶ್ರಾಫ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಇಂತಿಪ್ಪ ಅಕ್ಷಯ್‌ ಕುಮಾರ್‍‌ ಇದೀಗ ಪಾಡ್‌ಕಾಸ್ಟ್‌ನಲ್ಲಿ ತಮಗೆ ಹಿಂದೊಮ್ಮೆ ಆಗಿರುವ ಭಯಾನಕ ಅನುಭವವನ್ನು ಶೇರ್‍‌ ಮಾಡಿಕೊಂಡಿದ್ದಾರೆ. ಜನರ ಮಧ್ಯೆ ಹೋದ ಸಂದರ್ಭದಲ್ಲಿ ಎಲ್ಲರೂ ಇವರ ಕೈಕುಲುಕುತ್ತಿದ್ದರು. ಆ ಸಮಯದಲ್ಲಿ ಕೈಗೆ ಏನೋ ನೋವಾಯಿತು. ನೋಡುವಷ್ಟರಲ್ಲಿ ಕೈಯಿಂದ ರಕ್ತ ಸೋರುತ್ತಿತ್ತು. ಆ ಬಳಿಕ ತಿಳಿದದ್ದು ಏನೆಂದರೆ, ಯಾರೋ ಒಬ್ಬ ಅಭಿಮಾನಿಯ ನೆಪದಲ್ಲಿ ಉಗುರಿನಲ್ಲಿ ಬ್ಲೇಡ್‌ ಇಟ್ಟುಕೊಂಡು ಬಂದಿದ್ದ. ನನಗೆ ಶೇಕ್‌ಹ್ಯಾಂಡ್‌ ಮಾಡುವ ಉದ್ದೇಶದಿಂದಲೇ ಆತ ಹಾಗೆ ಬಂದಿದ್ದ. ಶೇಕ್‌ಹ್ಯಾಂಡ್‌ ಮಾಡುತ್ತಿದ್ದಂತೆಯೇ ಬ್ಲೇಡ್‌ನಿಂದ ಕುಯ್ದಿದ್ದ. ಎರಡು ಮೂರು ಸೆಕೆಂಡ್‌ ಬಿಟ್ಟು ನೋವಿನ ಅರಿವಾಗಿ ಕೈ ನೋಡಿದಾಗ ರಕ್ತ ಬರುತ್ತಿತ್ತು ಎಂದಿದ್ದಾರೆ. ಹಾಗಿದ್ರೆ ಮಾಟ-ಮಂತ್ರದ ಪ್ರಯೋಗ ಇರಬಹುದಾ ಎಂದು ಸಂದರ್ಶಕ ಕೇಳಿದಾಗ, ಇದ್ದರೂಇರಬಹುದೇನೋ ಎಂದು ಅಕ್ಷಯ್ ಕುಮಾರ್‍‌ ನಕ್ಕಿದ್ದಾರೆ. 

Latest Videos

undefined

ಸುಧಾರಾಣಿಯ ಕ್ರಷ್‌ ಯಾರು? ಇಷ್ಟದ ಹಾಡು, ಸಿನಿಮಾ ಯಾವುದು? 90 ಸೆಕೆಂಡ್‌ನಲ್ಲಿ ಸಿಕ್ಕಿತು ಉತ್ತರ!

ಇನ್ನು ನಟನ ಕುರಿತು ಹೇಳುವುದಾದರೆ, ಇದಾಗಲೇ ಸಾಕಷ್ಟು ಬ್ಲಾಕ್‌ಬಸ್ಟರ್‍‌ ಚಿತ್ರಗಳನ್ನು ನೀಡಿದ್ದಾರೆ. ಜೇಮ್ಸ್ ಬಾಂಡ್‌ನ ಭಾರತೀಯ ಆವೃತ್ತಿಯಾದ ಮಿಸ್ಟರ್ ಬಾಂಡ್ (1992), ಖಿಲಾಡಿ (1992), ಮೈನ್ ಖಿಲಾಡಿ ತು ಅನಾರಿ (1994), ಮಿಸ್ಟರ್ & ಮಿಸೆಸ್ ಖಿಲಾಡಿ (1997) ಮತ್ತು ಖಿಲಾಡಿ 420 (1992) ನಂತಹ ಕಿಲಾಡಿ ಸರಣಿಗಾಗಿ ಅಕ್ಷಯ್‌ ಕುಮಾರ್‍‌ ಜನಪ್ರಿಯತೆಯನ್ನು ಗಳಿಸಿದರು.  ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪ್ರದರ್ಶನಗಳಲ್ಲಿ ಏರ್‌ಲಿಫ್ಟ್ (2016), ಬೇಬಿ (2015) ಮತ್ತು ರುಸ್ತಮ್ (2016) ಸೇರಿವೆ. ಅವರ ದೊಡ್ಡ ಸಾಧನೆಗಳಲ್ಲಿ,   2011 ರಲ್ಲಿ ದಿ ಏಷ್ಯನ್ ಅವಾರ್ಡ್ಸ್ ಅನ್ನು ಪಡೆದರು. 2017 ರಲ್ಲಿ ರುಸ್ತಮ್ ಮತ್ತು ಏರ್‌ಲಿಫ್ಟ್ ಚಿತ್ರಗಳಿಗಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದರು.   ನಟಿ ಟ್ವಿಂಕಲ್ ಖನ್ನಾ ಅವರೊಂದಿಗೆ ಎರಡು ಬಾರಿ ನಿಶ್ಚಿತಾರ್ಥ ಮಾಡಿಕೊಂಡ ನಂತರ, ಅವರನ್ನು 17 ಜನವರಿ 2001 ರಂದು ವಿವಾಹವಾಗಿದ್ದು ಈಗ ಇಬ್ಬರು ಮಕ್ಕಳಿದ್ದಾರೆ.  
 
ಈಚೆಗೆ ತಮ್ಮ ಮಗ ಆರವ್‌ ಕುರಿತು ವಿಷಯ ಶೇರ್‍‌ ಮಾಡಿಕೊಂಡಿದ್ದರು. ಮಗನ ಕೆಲವು ಒಳ್ಳೆಯ ಗುಣಗಳನ್ನು ಶ್ಲಾಘಿಸಿದ ಅಕ್ಷಯ್​ ಕುಮಾರ್​ ಅವರು,  ಮಗ ಆರವ್​  ತುಂಬಾ ಸರಳ ಹುಡುಗ. ತನ್ನ ಬಟ್ಟೆಯನ್ನು ತಾನೇ ಒಗೆಯುತ್ತಾನೆ, ಅವನು ಒಳ್ಳೆಯ ಅಡುಗೆಯವ ಕೂಡ,  ಪಾತ್ರೆಗಳನ್ನೂ ತೊಳೆಯುತ್ತಾನೆ.  ದುಬಾರಿ ಬಟ್ಟೆಗಳನ್ನು ಖರೀದಿಸಲು ಬಯಸುವುದಿಲ್ಲ. ವಾಸ್ತವವಾಗಿ, ಆತ  ವ್ಯರ್ಥ ಮಾಡಲು ಬಯಸುವುದಿಲ್ಲ. ಇದೇ  ಕಾರಣಕ್ಕೆ,  ಬಟ್ಟೆ ಖರೀದಿಸಲು ಸೆಕೆಂಡ್ ಹ್ಯಾಂಡ್ ಸ್ಟೋರ್​ಗೆ ಹೋಗುತ್ತಾನೆ. ಮಿತವ್ಯಯಕ್ಕೆ ಅವನ ಆದ್ಯತೆ ಎಂದಿದ್ದರು.  ಲಂಡನ್‌ನ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಇವರಿಗೆ ಚಿತ್ರರಂಗದಲ್ಲಿ ಆಸಕ್ತಿ ಇಲ್ಲ ಎಂದೂ ಹೇಳಿದ್ದಾರೆ.

ಹಣವೇ ಸರ್ವಸ್ವ, ಇದೇ ಬದುಕು ಎನ್ನೋದೇ ಸತ್ಯ- ಮಕ್ಕಳಿಗೂ ಇದನ್ನೇ ಹೇಳಿಕೊಡಿ ಎಂದ ನಟಿ ನೀನಾ ಗುಪ್ತಾ!

 
 
 
 
 
 
 
 
 
 
 
 
 
 
 

A post shared by Podcast Pub (@podcast.pub)

click me!