
ಫೋಟೋ ಶೂಟ್‌ನ ಬಿಹೈಂಡ್ ಸೀನ್ ವಿಡಿಯೋ ಒಂದು ವೈರಲ್ ಆಗಿದ್ದು, ಹೆಣ್ಮಕ್ಕಳ ಆಭರಣ ಪ್ರೀತಿಯನ್ನು ತೋರಿಸುತ್ತೆ ಊರ್ವಶಿ ರೌಟೇಲಾ ಅವರ ರಿಯಾಕ್ಷನ್. ಬಾಲಿವುಡ್ ನಟಿ ಊರ್ವಶಿ ರೌಟೇಲಾ ಫೋಟೋಗೆ ಪೋಸ್ ಕೊಡೋವಾಗ ಅವರ ಕೈಯಲ್ಲಿದ್ದ ದುಬಾರಿ ಆಭರಣ ಕಳಚಿ ಬಿದ್ದಿದೆ.
ರೂಪದರ್ಶಿ ನೀಲಿ ಬಣ್ಣದ ಡ್ರೆಸ್ ಧರಿಸಿ ಬೋಲ್ಡ್ ಪೋಸ್ ಕೊಡೋಕೆ ಕೈ ಎತ್ತೋ ಭರದಲ್ಲಿ ಕೈಯಲ್ಲಿದ್ದ ಬ್ರೇಸ್‌ಲೆಟ್ ಬಿದ್ದಿತ್ತು. ಸದ್ಯ ದುಬಾರಿ ಬ್ರೇಸ್ಲೆಟ್‌ಗೆ ಏನೂ ಹಾನಿಯಾಗಿಲ್ಲ. ಆದ್ರೆ ನಟಿ ಮಾತ್ರ ಒಮ್ಮೆ ಶಾಕ್ ಆಗಿದ್ದಾರೆ.
ಅಮ್ಮನಿಗೆ ಹೆಡ್ ಆಯಿಲ್ ಮಸಾಜ್ ಮಾಡಿದ KGF ಗಾಯಕಿ
ಬ್ರೇಸ್ಲೆಟ್ ಹಾನಿಯಾಗದೆ ಮರಳಿ ಸಿಕ್ಕಾಗ ನಗುತ್ತಾರೆ ಊರ್ವಶಿ. ನಿಮ್ಮ ಭಾರೀ ದುಬಾರಿ ಡೈಮಂಡ್ ಕೆಳಗೆ ಬೀಳಿಸ್ಕೊಂಡಾಗ ಹೀಗಾಗುತ್ತೆ, ಇದು ಹೆಣ್ಮಕ್ಕಳಿಗಷ್ಟೇ ಅರ್ಥವಾಗಬಲ್ಲದು ಎಂದಿದ್ದಾರೆ..
ಅಂದಹಾಗೆ ಇಲ್ಲಿ ಊರ್ವಶಿಯವರು ಧರಿಸಿರೋ ಉಡುಪಿನ ಬೆಲೆ ಬರೋಬ್ಬರಿ 7 ಲಕ್ಷ, ಇನ್ನು ಆಭರಣದ ಬೆಲೆ 52 ಲಕ್ಷ ರೂಪಾಯಿ. ಊರ್ವಶಿ ಓ ಚಾಂದ್ ಕಹಾಸೆ ಲಾವೋಗಿ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. 2020ರಲ್ಲಿ ರಿಲೀಸ್ ಆದ ವರ್ಜಿನ್ ಭಾನುಪ್ರಿಯ ಸಿನಿಮಾದಲ್ಲಿ ನಟಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.