
ಬಾಲ್ಯ ಸ್ನೇಹಿತೆ ನತಾಶಾ ದಲಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಮದುವೆ ಮಹಾರಾಷ್ಟ್ರದ ಐಷಾರಾಮಿ ಹೋಟೆಲ್ ಆಗಿರುವ ದಿ ಮ್ಯಾನ್ಷನ್ ಹೌಸ್‌ನಲ್ಲಿ ನಡೆಯಿತು. ಆಪ್ತ ಕುಟುಂಬದವರು ಹಾಗೂ ಇಡೀ ತಾರಾ ಬಳಗವೇ ಸಮಾರಂಭದಲ್ಲಿ ಭಾಗಿಯಾಗಿತ್ತು. ಆದರೆ ಕರಣ್ ಅವತಾರ ನೋಡಿ ಅಲ್ಲಿದ್ದ ಜನರೆಲ್ಲಾ ಶಾಕ್ ಆಗಿದ್ದಾರೆ.
ವರುಣ್ ಧವನ್-ನತಾಶಾ ದಲಾಲ್ ಮದುವೆ: ಸಂಗೀತ್ ಸೆರೆಮನಿ ಆರೆಂಜ್ ಮಾಡಿರುವ ಕರಣ್ ಜೋಹರ್!
ಹೌದು! ಕರಣ್ ಜೋಹರ್ ಏನೇ ಮಾಡಿದರೂ ತುಂಬಾನೇ ಡಿಫರೆಂಟ್ ಆಗಿರುತ್ತದೆ ಕೆಲವರಿಗಂತೂ ಅದು ವಿಚಿತ್ರ ಎಂದೆನಿಸಿದರೂ ಆಶ್ಚರ್ಯವಿಲ್ಲ. ಯಾಕೆಂದರೆ ಹಿಂದೂ ಸಂಪ್ರದಾಯದ ಪ್ರಕಾರ ನಡೆದ ಮದುವೆ ಕಾರ್ಯಕ್ರಮಕ್ಕೆ ಹಾಲಿವುಡ್ ಪಾಪ್ ಕಿಂಗ್ ರೀತಿಯಲ್ಲಿ ಕರಣ್ ಆಗಮಿಸಿದ್ದರು.
ವೈಟ್ ಆಂಡ್ ವೈಟ್ ಪ್ಯಾಂಟ್ ಶರ್ಟ್ ಜೊತೆ ಒಂದು ಕಪ್ಪು ಬ್ಯಾಗ್ ಹಿಡಿದುಕೊಂಡಿದ್ದರು. ಕೆಲವರು ಇದನ್ನು ನೋಡಿ ಜಾಗಿಂಗ್ ಮಾಡುವ ಬಟ್ಟೆಯಂತಿದೆ, ಮದುವೆಗೆ ಬ್ಯಾಂಡ್ ಸೆಟ್ ಮಾಲೀಕ ಬಂದ ಎಂದರೆ ಇನ್ನೂ ಕೆಲವರು ನಿಮ್ದು ಯಾವ ದೇಶ ನಮ್ ಕಡೆ ಹೀಗೆಲ್ಲಾ ಮದುವೆಗೆ ಹೋಗಲ್ಲ ಎಂದು ಗೇಲಿ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.