
ನಟಿ ಊರ್ವಶಿ ರೌಟೇಲಾ ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಇರಾನಿ ಮಹಿಳೆಯ ಪರ ನಿಂತಿದ್ದಾರೆ. ಕೂದಲಿಗೆ ಕತ್ತರಿ ಹಾಕುವ ಮೂಲಕ ಇರಾನಿ ಮಹಿಳೆಯರಿಗೆ ಸಾಥ್ ನೀಡಿದ್ದಾರೆ. ಇರಾನನಲ್ಲಿ ಮಹಿಳೆಯರು ಹಿಜಾಬ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇರಾನ್ ಮಹಿಳೆಯರ ಹೋರಾಟ ವಿಶ್ವಾದ್ಯಂತ ಸುದ್ದಿ ಆಗುತ್ತಿದೆ. ಈ ಪ್ರತಿಭಟನೆಗೆ ವಿವಿಧ ದೇಶಗಳ ಮಹಿಳೆಯರು ಬೆಂಬಲ ಸೂಚಿಸುತ್ತಿದ್ದಾರೆ. ಇರಾನ್ ಮಹಿಳೆಯರ ಹೋರಾಟ ತೀವ್ರ ಸ್ವರೂಪ ಪಡೆದು ಒಂದು ತಿಂಗಳು ಕಳೆದಿದೆ. ಇದೀಗ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕೂಡ ಬೆಂಬಲ ನೀಡಿದ್ದಾರೆ.
ತಲೆ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಅವರು ಈ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಊರ್ವಶಿ ತಮ್ಮ ಅಭಿಪ್ರಾಯ ಏನು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಜೊತೆಗೆ ಕೂದಲಿಗೆ ಕತ್ತರಿ ಹಾಕುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
‘ನಾನು ನನ್ನ ಕೂದಲಿಗೆ ಕತ್ತರಿ ಹಾಕಿದ್ದೀನಿ. ಇರಾನಿನಲ್ಲಿ ನೈತಿಕ ಪೊಲೀಸ್ ಗಿರಿ ಮತ್ತು ಮಹ್ಸಾ ಅಮಿನಿಯ ಹತ್ಯೆ ನಂತರ ಪ್ರತಿಭಟನೆಯಲ್ಲಿ ಕೊಲ್ಲಲ್ಪಟ್ಟ ಇರಾನಿನ ಮಹಿಳೆಯರಿಗೆ ಬೆಂಬಲ ನೀಡಲು ಹಾಗೂ ಉತ್ತರಖಾಂಡದ 19ರ ಪ್ರಾಯದ ಯುವತಿ ಅಂತಿಕಾ ಭಂಡಾರಿ ಸಲುವಾಗಿ ಹೀಗೆ ಮಾಡಿದ್ದೇನೆ. ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಜಗತ್ತಿನಾದ್ಯಂತ ಅನೇಕ ಮಹಿಳೆಯರು ಇರಾನ್ ಸರ್ಕಾರದ ವಿರುದ್ಧದ ಪ್ರತಿಭಟನೆಗೆ ಸಾಥ್ ನೀಡುತ್ತಿದ್ದಾರೆ. ಮಹಿಳೆಯರಿಗೆ ಗೌರವ ನೀಡಿ' ಎಂದು ಊರ್ವಶಿ ರೌಟೇಲಾ ಬರೆದುಕೊಂಡಿದ್ದಾರೆ.
ನಗ್ನತೆ ಪ್ರಚಾರವಲ್ಲ, ಆಯ್ಕೆ ಸ್ವಾತ್ರಂತ್ರ್ಯ; ಬುರ್ಕಾ ಬಿಚ್ಚೆಸೆದು 'ಸೇಕ್ರೆಡ್ ಗೇಮ್' ನಟಿಯ ಬೆತ್ತಲೆ ಪ್ರತಿಭಟನೆ
'ಕೂದಲು ಮಹಿಳೆಯರ ಸೌಂದರ್ಯದ ಸಂಕೇತವಾಗಿ ನೋಡಲಾಗುತ್ತದೆ. ಸಾರ್ವಜನಿಕವಾಗಿ ಕೂದಲನ್ನು ಕತ್ತರಿಸುವ ಮೂಲಕ, ಮಹಿಳೆಯರು ಸಮಾಜದ ಸೌಂದರ್ಯದ ಮಾನದಂಡಗಳಿಗೆ ಕೇರ್ ಮಾಡುವುದಿಲ್ಲ ಮತ್ತು ಮಹಿಳೆಯರ ಬಟ್ಟೆ ಆಯ್ಕೆ, ಹೇಗೆ ವರ್ತಿಸಬೇಕು ಅಥವಾ ಹೇಗೆ ಬದುಕಬೇಕು ಎಂಬುದನ್ನು ನಿರ್ಧರಿಸಲು ಯಾರಿಗೂ ಹಕ್ಕಿಲ್ಲ. ಒಮ್ಮೆ ಮಹಿಳೆಯರು ಒಗ್ಗೂಡಿ, ಸ್ತ್ರೀವಾದವು ಹೊಸ ಚೈತನ್ಯವನ್ನು ಪಡೆಯುತ್ತದೆ' ಎಂದು ಹೇಳಿದ್ದಾರೆ.
ಊರ್ವಶಿ ರೌಟೇಲಾ ಪೋಸ್ಟ್‌ಗೆ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಮೊದಲು ಭಾರತೀಯ ಮಹಿಯರ ಪರ ಹೋರಾಟ ಮಾಡಿ ಎಂದು ಹೇಳುತ್ತಿದ್ದಾರೆ. ಹೇರ್ ಟ್ರಿಮ್ ಮಾಡಿಸಿಕೊಳ್ಳಬೇಕಿತ್ತು, ಹಾಗಾಗಿ ಕತ್ತರಿ ಹಾಕಿದ್ದೀರಿ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ರಿಷಬ್ ಪಂತು ಹೆಸರನ್ನು ಹಾಕಿ ಕಾಲೆಳೆಯುತ್ತಿದ್ದಾರೆ. ಆದರೆ ಊರ್ವಶಿ ಟ್ರೋಲ್ ಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.
Urvashi Rautela ಅವರನ್ನು ಗುರುತಿಸಲು ನಿರಾಕರಿಸಿದ ಪಾಕಿಸ್ತಾನಿ ಕ್ರಿಕೆಟಿಗ Naseem Shah
ಇರಾನಿ ಮಹಿಳೆಯರು, ಮನೆಯಿಂದ ಹೊರಬಂದು ಸಾಧನೆ ಮಾಡಿದವರೂ ಸಹ ಕುಖ್ಯಾತ ಪೊಲೀಸ್ ನೈತಿಕತೆಗೆ ಭಯಪಡುವಂತೆ ಆಗಿದೆ. ಹಾಗಾಗಿ ಬಟ್ಟೆಯ ಆಯ್ಕೆ ಸ್ವಾಸಂತ್ರ್ಯಕ್ಕಾಗಿ ಮಹಿಳೆಯರು ಪ್ರತಿಭಟನೆಗೆ ಇಳಿದಿದ್ದಾರೆ. ಇರಾನಿನಲ್ಲಿ ಮಹಿಳೆಯರ ಪರಿಸ್ಥಿತಿ ಭೀಕರವಾಗಿದೆ. ತಮ್ಮ ಹಕ್ಕು, ಬದುಕಿಗಾಗಿ ಹೋರಾಡುತ್ತಿದ್ದಾರೆ. ಹಿಜಾಬ್, ಬುರ್ಕಾಗಳನ್ನು ಕಿತ್ತೆಸೆದು ಸುಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ಊರ್ವಶಿ ಕೂಡ ಬೆಂಬಲ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.