ಮೂರು ವರ್ಷಗಳಿಂದ ಸೆಕ್ಸೇ ಮಾಡಿಲ್ಲ ಅಂದ ಉರ್ಫಿ ಎದೆ ಮೇಲೆ ಉಡ ಬಿಟ್ಕೊಂಡಿರೋ ವಿಡಿಯೋ ವೈರಲ್ ಆಗಿದೆ. ಇಷ್ಟಾದ ಮೇಲೆ ತರ್ಲೆ ಕಮೆಂಟಿಗರು ಸುಮ್ನೆ ಇರ್ತಾರಾ?
ಕೆಲ ದಿನಗಳ ಹಿಂದಷ್ಟೇ ನನ್ನದು ಫ್ಲ್ಯಾಟ್ ಚೆಸ್ಟ್ ಎಂದು ಹೇಳುವ ಡಿಜಿಟಲ್ ಬೋರ್ಡ್ ಹಾಕಿಕೊಂಡು ಸುತ್ತಾಡಿದ್ದ ಉರ್ಫಿ ಇದೀಗ ಎದೆ ಮೇಲೆ ಉಡ ಬಿಟ್ಕೊಂಡು ಸದ್ದು ಮಾಡುತ್ತಿದ್ದಾರೆ. ಉಡ ಅವರ ಮೈಮೇಲೆ ಹರಿದಾಡುವಂತೆ ಕಾಣುವ ವಿಡಿಯೋ ಇದಾಗಿದೆ. ಅಷ್ಟಕ್ಕೂ ಇದೇನು ಅಸಲಿ ಉಡ ಅಲ್ಲ ಬಿಡಿ, ಆದರೂ ತಲೇ ನೆಟ್ಟಿಗರು ಸುಮ್ಮನೇ ಇರಬೇಕಲ್ಲ. ಅಲ್ಲಿ ಏನಿದೆ ಅಂತ ಹುಡ್ತಾ ಇದ್ದಿಯಾ ಎಂದು ಕೇಳ್ತಿದ್ದಾರೆ. ಇನ್ನು ಕೆಲವರು ನಟಿಯ ತಲೆಗೆ ಭೇಷ್ ಭೇಷ್ ಎನ್ನುತ್ತಿದ್ದಾರೆ. ಇದರ ವಿಡಿಯೋ ಸಕತ್ ವೈರಲ್ ಆಗಿದ್ದು, ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕುತ್ತಿದ್ದಾರೆ. ಇತ್ತೀಚೆಗೆ ಅಮೆಜಾನ್ ಪ್ರೈಮ್‌ನಲ್ಲಿ ಪ್ರಾರಂಭವಾದ ಫಾಲೋ ಕಾರ್ಲೋ ಯಾರ್ ಶೋನಲ್ಲಿ ಉರ್ಫಿ ಜಾವೇದ್ ಕಳೆದ ಮೂರು ವರ್ಷಗಳಿಂದ ಯಾರ ಜೊತೆಯೂ ಸೆಕ್ಸ್ ಮಾಡಿಲ್ಲ ಎಂದಿದ್ದರು. ಯಾವುದೇ ಪುರುಷನಿಗೆ ಕಿಸ್ ಕೂಡ ನೀಡಿಲ್ಲ. ಯಾರ ಜೊತೆಯೂ ಆಕೆ ರೋಮ್ಯಾಂಟಿಕ್ ಆಗಿ ಮಾತನಾಡಿಲ್ಲ ಎಂದೂ ಬಹಿರಂಗಪಡಿಸಿದ್ದರು. ಇದನ್ನು ಕೇಳಿದ ನೆಟ್ಟಿಗರು ಅದೆಲ್ಲಾ ಸರಿ, ಉಡ ಯಾಕೆ ಬಿಟ್ಕೊಂಡಿದ್ದು ಕೇಳ್ತಿದ್ದಾರೆ!
ಅಷ್ಟಕ್ಕೂ, ಕೆಲ ದಿನಗಳ ಹಿಂದೆ ನಟಿ ಉರ್ಫಿ ಜಾವೇದ್ ಬಟ್ಟೆಯಲ್ಲಿ ಬ್ರಹ್ಮಾಂಡ ತೋರಿಸಿದ್ದರು. ಬಳಿ ಎದೆ ಭಾಗದಲ್ಲಿ ಎರಡು ಫ್ಯಾನ್ ಸಿಕ್ಕಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಬಟ್ಟೆಯಲ್ಲಿನ ಬ್ರಹ್ಮಾಂಡದಲ್ಲಿ ಹಲವು ವಿಷಯಗಳನ್ನು ಅವರು ತೋರಿಸಿದ್ದರೆ, ಎದೆ ಮೇಲೆ ಹಾಕಿಕೊಂಡಿದ್ದ ಫ್ಯಾನ್ಸ್ ತಿರುಗುತ್ತಿತ್ತು. ಅದೂ ಸಾಲದು ಎಂಬಂತೆ ಮೈಮೇಲಿಂದಲೇ ಉದುರುವ ಹೂವು-ಎಲೆ ಹಾರಾಡುವ ಚಿಟ್ಟೆಗಳ ಬಟ್ಟೆ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು. ನಟಿ ಬಟ್ಟೆಯ ಮೇಲೆ ಹೂವು, ಎಲೆಗಳನ್ನು ಇರಿಸಿಕೊಂಡು, ಅದು ಮ್ಯಾಜಿಕ್ ರೀತಿಯಲ್ಲಿ ಉದುರುವ ಹಾಗೆ ಮಾಡಿದ್ದಂತೂ ನೋಡಿ ಉರ್ಫಿ ಜಾವೇದ್ ಫ್ಯಾನ್ಸ್ ಫಿದಾ ಆಗಿದ್ದು, ನಿಮಗೆ ನೀವೇ ಸಾಟಿ ಎನ್ನು್ತಿದ್ದಾರೆ. ಒಮ್ಮೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ ಅರೆಬರೆ ಡ್ರೆಸ್ ರುಚಿ ನೋಡಿ ಅದನ್ನು ಮಾತ್ರ ಬಿಡುತ್ತಿಲ್ಲ.
ಮಗಳು ಸಾರಾ ಅಲಿಗೆ ಸೆಕ್ಸ್ ಬಗ್ಗೆ ಹೀಗೆ ಪ್ರಶ್ನೆ ಕೇಳೋದಾ ನಟಿ ಕರೀನಾ ಕಪೂರ್? ನೆಟ್ಟಿಗರು ಗರಂ
ಅದಾ ಬಳಿಕ ನಟಿ ಚೈನೀಸ್ ಫುಡ್ ಇರುವ ಬಟ್ಟೆ ತೊಟ್ಟಿದ್ದರು. ಅಸಲಿಗೆ ಇದು Hot & Spicy Desi Chinese from Chinese Wok ಜಾಹೀರಾತಿನಂತೆ ಇದು ತೋರುತ್ತಿದೆ. ಇವರು ಧರಿಸಿರುವ ಬಟ್ಟೆಯ ತುಂಬಾ ಚೈನೀಸ್ ಫುಡ್ಗಳು ತುಂಬಿ ಹೋಗಿದ್ದವು. ಚಿಕ್ಕ ಬಕೆಟ್ನಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ಇರಿಸಲಾಗಿದ್ದು, ಚೈನೀಸ್ ದೇಸಿ ಫುಡ್ಗಳ ಕುರಿತು ನಟಿ ಮಾತನಾಡಿದ್ದರು. ತಮಗೆ ಇವುಗಳ ಪೈಕಿ ಯಾವ ಆಹಾರ ತುಂಬಾ ಇಷ್ಟ ಎಂಬುದನ್ನೂ ಹೇಳಿದ್ದಾರೆ. ಇದನ್ನು ನೋಡಿ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಕೆಲವು ತರ್ಲೆ ನೆಟ್ಟಿಗರು ಅಲ್ಲೇ ತಿನ್ನಲು ಅವಕಾಶ ಇದ್ಯಾ ಕೇಳುತ್ತಿದ್ದಾರೆ. ಇನ್ನು ಕೆಲವರು ಈ ರೀತಿ ಮೈಮೇಲೆ ಸರ್ವ್ ಮಾಡಿದ್ದರೆ ತಿನ್ನಲು ನಾವು ರೆಡಿ ಅಂತಿದ್ದರು.
ಅಷ್ಟಕ್ಕೂ ಉರ್ಫಿ ಬಗ್ಗೆ ಬೇರೆ ಹೇಳುವುದೇ ಬೇಡ ಬಿಡಿ. ಉರ್ಫಿ ಎಂದರೆ, ಚಿತ್ರ ವಿಚಿತ್ರ ಡ್ರೆಸ್ಗಳಿಂದಲೇ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆದವರು. ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ.
ದುಡ್ಡಿಗಾಗಿ ಮದ್ವೆಯಾದ ಶಿಲ್ಪಾ ಶೆಟ್ಟಿ, ಅನಿಲ್ ಕಪೂರ್! ವೈರಲ್ ವಿಡಿಯೋದಿಂದ ರಟ್ಟಾಯ್ತು ಗುಟ್ಟು