
ಕಿರುತೆರೆ ನಟಿ ಮತ್ತು, ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಜಾವೇದ್ ಯಾರಿಗೆ ತಾನೆ ಗೊತ್ತಿಲ್ಲ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಫೇಮಸ್ ಆದವರು. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪಿನಲ್ಲಿ ಕಾಣಿಸಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಾರೆ. ಅರೆಬರೆ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಮನೆಯಿಂದ ಹೊರಬರುವಾಗ ವಿಚಿತ್ರವಾಗಿ ದರ್ಶನ ನೀಡುತ್ತಾರೆ.
ಎಲ್ಲಾ ರೀತಿಯ ಬಟ್ಟೆ ಧರಿಸಿ ಓಡಾಡಿದ ಉರ್ಫಿ ಇತ್ತೀಚಿಗೆ ಹೂವಿನಿಂದ ಮಾನ ಮುಚ್ಚಿಕೊಂಡು ಬಂದು ಅಚ್ಚರಿ ಮೂಡಿಸಿದ್ದರು. ಹೂವಿನ ಉಡುಪು ಧರಿಸಿ ಬಂದಿದ್ದ ಉರ್ಫಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದರ ಬೆನ್ನಲ್ಲೇ ಈಗ ಮತ್ತೊಂದು ವಿಚಿತ್ರ ಅವತಾರದ ಮೂಲಕ ದರ್ಶನ ನೀಡಿದ್ದಾರೆ. ಉರ್ಫಿ ಇದೀಗ ಜೀನ್ಸ್ ಮೇಲೆ ಚಡ್ಡಿ ಹಾಕಿ ಏರ್ ಪೋರ್ಟ್‌ಗೆ ಬಂದಿದ್ದಾರೆ. ಉರ್ಫಿ ಹೊಸ ಅವತಾರ ಕಂಡು ನೆಟ್ಟಿಗರು ಬೆರಗಾದಿದ್ದಾರೆ. ಇನ್ನೇನೇನು ಅವತಾರದಲ್ಲಿ ನೋಡಬೇಕಾಪ್ಪ ಎಂದು ತಲೆ ಚಚ್ಚಿಕೊಳ್ಳುತ್ತಿದ್ದಾರೆ.
Urfi Javed; ಈಕೆಯ ವಿಚಿತ್ರ ಅವತಾರಗಳನ್ನು ನೋಡೋಕೆ ಆಗ್ತಿಲ್ಲ ಗುರು ..
ಎಲ್ಲರೂ ಜೀನ್ಸ್ ಒಳಗೆ ಚಡ್ಡಿ ಹಾಕಿ ಬಂದರೇ ಉರ್ಫಿ ಜೀನ್ಸ್ ಮೇಲೆ ಹಾಕಿ ಬಂದಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಕಾಮೆಂಟ್ ಮಾಡಿ ಶೇಮ್‌ಲೆಸ್ ನೆಸ್ ಎಂದು ಹೇಳುತ್ತಿದ್ದಾರೆ. ಇನ್ನು ಅನೇಕರು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎನ್ನುತ್ತಿದ್ದಾರೆ. ಅದರೆ ಇದ್ಯಾವುದರ ಬಗ್ಗೆಯೂ ಉರ್ಫಿ ತಲೆಕೆಡಿಸಿಕೊಳ್ಳುತ್ತಿಲ್ಲ. ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಉರ್ಫಿ ಜನ ಏನು ಹೇಳುತ್ತಾರೆ ಎನ್ನುವುದು ನನಗೆ ಮ್ಯಾಟರ್ ಆಗಿಲ್ಲ ಎಂದಿದ್ದರು. ಇಷ್ಟ ಬಂದ ರೀತಿಯಲ್ಲಿ ಜನ ಬದುಕುತ್ತಾರೆ ಎಂದು ಹೇಳಿದ್ದರು.
ಉರ್ಫಿ ಜಾವೇದ್ ಮುಸ್ಲಿಂ ಕುಟುಂಬದಿಂದ ಬಂದವರು. ಉತ್ತರ ಪ್ರದೇಶದ ಉರ್ಫಿ ಈಗ ತನ್ನ ವಿಚಿತ್ರ ಉಡುಪಿನ ಮೂಲಕವೇ ಪ್ರಸಿದ್ಧರಾಗಿದ್ದಾರೆ. ಎಷ್ಟು ಬಾರಿ ಟ್ರೋಲ್ ಆದರು ತಲೆಕೆಡಿಸಿಕೊಳ್ಳದ ಉರ್ಫಿ ಪದೇ ಪದೇ ವಿಚಿತ್ರ ಲುಕ್ ನಲ್ಲೇ ದರ್ಶನ ನೀಡುತ್ತಾರೆ. ನಟಿ ಉರ್ಫಿ ಜಾವೇದ್ ಕಿರುತೆರೆ ಮೂಲಕ ಬಣ್ಣದ ಲೋಕ ಪ್ರವೇಶ ಮಾಡಿದರು. ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಉರ್ಫಿ ಬಳಿಕ ಬಿಗ್ ಬಾಸ್ ಒಟಿಟಿಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಖ್ಯಾತಿಗಳಿಸಿದರು. ಇದೀಗ ವಿಚಿತ್ರ ಉಡುಗೆ ತೊೆಡುಗೆ ಮೂಲಕವೇ ಸದ್ದು ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.