ಉರ್ಫಿ ಜಾವೇದ್ ಹೇಳಿದಂತೆ ನಡೆದುಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ನಟಿ ನೀಡಿದ್ದೇನು?
ಜನರನ್ನು ಅಚ್ಚರಿಗೊಳಿಸುವ ಯಾವುದೇ ಅವಕಾಶವನ್ನು ಉರ್ಫಿ ಜಾವೇದ್ ಎಂದಿಗೂ ಕಳೆದುಕೊಳ್ಳುವುದಿಲ್ಲ. ಅವರು ಆಗಾಗ್ಗೆ ತಮ್ಮ ಅಸಾಮಾನ್ಯ ಕಲ್ಪನೆಗಳು ಮತ್ತು ಬಟ್ಟೆಗಳಿಂದ ಜನರನ್ನು ಆಶ್ಚರ್ಯಗೊಳಿಸುತ್ತಾರೆ. ಇತ್ತೀಚೆಗೆ ಉರ್ಫಿ ಇಡೀ ಬ್ರಹ್ಮಾಂಡವನ್ನು ತಮ್ಮ ಬಟ್ಟೆಯಲ್ಲಿ ಸುತ್ತಿಕೊಂಡು ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದರು. ವಾಕಿಂಗ್ ಸೈನ್ಸ್ ಪ್ರಾಜೆಕ್ಟ್‌ನಂತೆ ಕಾಣುತ್ತಿದ್ದ ಕಾರಣ ಎಲ್ಲರೂ ಉರ್ಫಿಯನ್ನು ನೋಡಿ ಬೆರಗಾಗಿದ್ದರು. ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಇದೀಗ ಉರ್ಫಿ ಜಾವೇದ್ ಅವರ ಮತ್ತೊಂದು ಹೊಸ ಕುತೂಹಲ ವಿಡಿಯೋ ಹೊರಬಿದ್ದಿದೆ. ಅದೇನೆಂದರೆ ನಟಿ, ಅಪರಿಚಿತ ವ್ಯಕ್ತಿಗೆ ಉಡುಗೊರೆ ನೀಡುತ್ತಿರುವುದು ಕಂಡುಬಂದಿದೆ.
ಹೌದು, ಈಗ ವೈರಲ್ ಆಗಿರೋ ವಿಡಿಯೋದಲ್ಲಿ, ಉರ್ಫಿ ಜಾವೇದ್ ಯುವಕನೊಬ್ಬನಿಗೆ ದುಬಾರಿ ಉಡುಗೊರೆ ನೀಡಿದ್ದಾರೆ. ಉರ್ಫಿ ಯಾರಿಗೆ,ಯಾಕಾಗಿ ಐ ಫೋನ್ ಗಿಫ್ಟ್ ಮಾಡಿದ್ದಾರೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಕಾಡುತ್ತಿದ್ದರೆ ಅದಕ್ಕೆ ಉತ್ತರವೂ ಈ ವಿಡಿಯೋದಲ್ಲಿ ಸಿಗಲಿದೆ. ವಾಸ್ತವವಾಗಿ, ಈ ಯುವಕನ ಹೆಸರು 'ಅಜಯ್ ಜೈಸ್ವಾಲ್'. ಈ ಅದೃಷ್ಟಶಾಲಿ ಯಾರು ಮತ್ತು ಉರ್ಫಿ ಅವರಿಗೆ ವಿಶೇಷ ಉಡುಗೊರೆಯನ್ನು ಏಕೆ ನೀಡಿದರು ಎಂದು ಹೇಳುವುದಾದರೆ. ಉರ್ಫಿ ಪಾಪರಾಜಿಯೊಂದಿಗೆ ಲಕ್ಕಿ ಡ್ರಾ ಆಡಿದ್ದರು. ಇದಾಗಲೇ ತಾವು ಲಕ್ಕಿ ಡ್ರಾ ಮಾಡುತ್ತಿರುವುದಾಗಿ ಎರಡು ದಿನಗಳ ಹಿಂದೆ ನಟಿ ಅನೌನ್ಸ್ ಮಾಡಿದ್ದರು. 20ರಂದು ಎಲ್ಲರಿಗೂ ಉಡುಗೊರೆ ನೀಡುತ್ತೇನೆ. ಎಲ್ಲರೂ ಬನ್ನಿ, ಎಲ್ಲರೂ ಬರಲೇಬೇಕು ಎಂದು ಮೊದಲೇ ಹೇಳುತ್ತಿದ್ದೇನೆ ನೋಡಿ. ಏಕೆಂದರೆ ಕೆಲವರು ಕೊನೆಯದಾಗಿ ಬರುತ್ತಾರೆ ಮತ್ತು ಕೆಲವರು ಬರುವುದಿಲ್ಲ ಮತ್ತು 20 ರಂದು ಎಲ್ಲರಿಗೂ ಆಶ್ಚರ್ಯ ಕಾದಿದೆ. ನಾನು ಎಲ್ಲರಿಗೂ ಒಳ್ಳೆಯ ಉಡುಗೊರೆ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಅದರಂತೆ ಜನರು ಬಂದಿದ್ದರು.
ಇದೇ 20ರಂದು ಉರ್ಫಿಯಿಂದ ಎಲ್ಲರಿಗೂ ಭರ್ಜರಿ ಉಡುಗೊರೆ! ವಿಡಿಯೋ ವೈರಲ್- ಬಿಸಿಬಿಸಿ ಚರ್ಚೆ ಶುರು!
ನಂತರ ಉರ್ಫಿ ಎಲ್ಲಾ ಜನರ ಹೆಸರುಗಳ ಚೀಟಿಗಳನ್ನು ಮಾಡಿದರು ಮತ್ತು ನಂತರ ಅವುಗಳನ್ನು ಮಿಕ್ಸ್ ಮಾಡಿ ರ್ಯಾಂಡಮ್ ಆಗಿ ಒಂದು ಚೀಟಿಯನ್ನು ಆಯ್ಕೆ ಮಾಡಿದರು. ಮೊದಲ ಸ್ಲಿಪ್‌ನಲ್ಲಿ ತ್ರಿಲೋಕ್ ಚೌಧರಿ ಹೆಸರು ಕಾಣಿಸಿಕೊಂಡಿದೆ. ಆದರೆ, ಆ ವ್ಯಕ್ತಿ ಅಲ್ಲಿ ಇರಲಿಲ್ಲವಾದ್ದರಿಂದ ಉರ್ಫಿ ಮತ್ತೊಂದು ಸ್ಲಿಪ್ ತೆಗೆದಿದ್ದು ಅದರಲ್ಲಿ ಅಜಯ್ ಜೈಸ್ವಾಲ್ ಅವರ ಹೆಸರಿತ್ತು. ಇದಾದ ನಂತರ ಉರ್ಫಿ ತಮ್ಮ ಕೈಯಿಂದಲೇ ಪಾಪರಾಜಿಗೆ ಉಡುಗೊರೆ ನೀಡಿದರು. ಅಷ್ಟೇ ಅಲ್ಲ, ಉರ್ಫಿ ಇತರರಿಗೆ ವ್ಯಾಲೆಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚಿತ್ರ ವಿಚಿತ್ರ ಡ್ರೆಸ್ಗಳಿಂದಲೇ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದಾರೆ ನಟಿ ಉರ್ಫಿ ಜಾವೇದ್. ಇದೀಗ ನಟಿ ಏಕ್ತಾ ಕಪೂರ್ ಅವರ ‘ಲವ್ ಸೆಕ್ಸ್ ಔರ್ ಧೋಕಾ-2’ ಚಿತ್ರದಲ್ಲಿ ಉರ್ಫಿ ಕಾಣಿಸಿಕೊಳ್ಳಲಿದ್ದಾರೆ. ಇಂಟರ್ನೆಟ್ ಯುಗದಲ್ಲಿ ಪ್ರೀತಿ ಮತ್ತು ಸಂಬಂಧಗಳ ಒಂದು ನೋಟವನ್ನು ನೀಡಲಿರುವ ಈ ಚಿತ್ರದಲ್ಲಿ ಇಂಟರ್ನೆಟ್ ಸೆನ್ಸೇಷನ್ ಉರ್ಫಿಗೆ ಯೋಗ್ಯ ಎಂಬುದನ್ನು ಅರಿತು ಅವರನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರವನ್ನು ದಿಬಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದಾರೆ. ಚಿತ್ರವು ಏಪ್ರಿಲ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉರ್ಫಿ ಅವರ ಅಭಿಮಾನಿಗಳು ಈ ಚಿತ್ರವನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಇದರ ನಡುವೆಯೇ ಪಾಪರಾಜಿಗಳನ್ನು ಉದ್ದೇಶಿಸಿ ನಟಿ 20ನೇ ತಾರೀಖು ಬಹುದೊಡ್ಡ ಗಿಫ್ಟ್ ಕೊಡುತ್ತೇನೆ ಎಲ್ಲರೂ ತಪ್ಪದೇ ಬನ್ನಿ ಎಂದಿದ್ದರು. ಇದೀಗ ನಟಿಯ ಔದಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಇತರ ಸೆಲೆಬ್ರಿಟಿಗಳಂತೆ ಕೋಪಗೊಳ್ಳುವುದಿಲ್ಲ. ಸದಾ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಗುಣಗಾನ ಮಾಡುತ್ತಿದ್ದಾರೆ.
ಡ್ರೆಸ್ ಒಳಗೇ ಬ್ರಹ್ಮಾಂಡ ತೋರಿದ ಉರ್ಫಿ ಜಾವೇದ್! ವೈರಲ್ ವಿಡಿಯೋಗೆ ಉಫ್ ಎಂದ ಫ್ಯಾನ್ಸ್...