ಸದಾ ಕಾಲ ತನ್ನ ಚಿತ್ರಿವಿಚಿತ್ರ ವೇಷಗಳಿಂದ ಮಾಧ್ಯಮಗಳು ಹಾಗೂ ಪಾಪರಾಜಿಗಳ ಕ್ಯಾಮರಾವನ್ನು ತನ್ನತ್ತ ಸೆಳೆಯುವ ಹಿಂದಿ ಬಿಗ್ಬಾಸ್ ಮಾಜಿ ಕಂಟೆಸ್ಟೆಂಟ್ ಉರ್ಫಿ ಜಾವೇದ್ ಇಂದು ಸ್ಮಾರ್ಟ್‌ಫೋನ್‌ಗಳನ್ನೇ ತಮ್ಮ ಉಡುಗೆಯಾಗಿಸಿಕೊಂಡು ತಮ್ಮ ಅಮೂಲ್ಯ ಆಸ್ತಿಯನ್ನು ರಕ್ಷಿಸಿಕೊಂಡಿದ್ದಾರೆ.
ಸದಾ ಕಾಲ ತನ್ನ ಚಿತ್ರಿವಿಚಿತ್ರ ವೇಷಗಳಿಂದ ಮಾಧ್ಯಮಗಳು ಹಾಗೂ ಪಾಪರಾಜಿಗಳ ಕ್ಯಾಮರಾವನ್ನು ತನ್ನತ್ತ ಸೆಳೆಯುವ ಹಿಂದಿ ಬಿಗ್ಬಾಸ್ ಮಾಜಿ ಕಂಟೆಸ್ಟೆಂಟ್ ಉರ್ಫಿ ಜಾವೇದ್ ಇಂದು ಸ್ಮಾರ್ಟ್‌ಫೋನ್‌ಗಳನ್ನೇ ತಮ್ಮ ಉಡುಗೆಯಾಗಿಸಿಕೊಂಡು ತಮ್ಮ ಅಮೂಲ್ಯ ಆಸ್ತಿಯನ್ನು ರಕ್ಷಿಸಿಕೊಂಡಿದ್ದಾರೆ. ಸ್ವಲ್ಪವೂ ಅಂಜಿಕೆ ಇಲ್ಲದೇ ಕೇವಲ ಖಾಸಗಿ ಭಾಗಗಳನ್ನು ಮಾತ್ರ ಮುಚ್ಚಿಕೊಂಡು ಫೋಸ್ ಕೊಡುವ ಉರ್ಫಿಯ ಫೋಟೋ ತೆಗೆಯಲು ಇದೇ ಕಾರಣಕ್ಕೆ ಪಾಪಾರಾಜಿಗಳು ಕಾದು ನಿಲ್ಲುತ್ತಾರೆ. ವಿಚಿತ್ರ ಅವಾತರದಲ್ಲಿ ತರ ತರ ವೇಷದಲ್ಲಿ ಮಾಧ್ಯಮಗಳ ಮುಂದೆ ಬರುವ ಉರ್ಫಿ ಇಂದು ಎರಡು ಮೊಬೈಲ್ ಫೋನ್ (Smart Phone) ನೇತಾಡಿಸಿಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ. ಅರ್ಥಾತ್ ಎದೆಯನ್ನು ಮೊಬೈಲ್ ಫೋನ್‌ನಿಂದಲೇ ಮುಚ್ಚಿಕೊಂಡಿದ್ದಾಳೆ. ಇದನ್ನು ನೋಡಿದ ಮೇಲೆ ನೆಟ್ಟಿಗರು ಸುಮ್ಮನೇ ಕೂರುವುದುಂಟೆ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ತನ್ನ ಹೆಸರನ್ನು Urfi Javed ಬದಲು Uorfi ಎಂದು ಬದಲಾಯಿಸಿಕೊಂಡ ಉರ್ಫಿ ಇಂದು ತನ್ನ ಈ ಹೊಸ ವೇಷದ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ್ದಾಳೆ. ವಿಡಿಯೋದಲ್ಲಿ ಕಾಣಿಸುವಂತೆ ಸಂಪೂರ್ಣ ಟಾಪ್‌ಲೆಸ್ ಆಗಿರುವ ಉರ್ಫಿ ಎದೆಯ (Cheast) ಭಾಗದಲ್ಲಿ ಎರಡು ಮೊಬೈಲ್ ಫೋನ್‌ಗಳನ್ನು ನೇತಾಡಿಸಿಕೊಂಡಿದ್ದಾಳೆ. ಬರೀ ಇಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಆದರೆ ಈ ವಿಡಿಯೋಗೆ ಫುಲ್ ಚಾರ್ಜ್‌ಡ್ ಎಂದು ಆಕೆ ನೀಡಿದ ಕ್ಯಾಪ್ಷನ್ ಗೆ ಅನೇಕರು ಬೆರಗಾಗಿದ್ದಲ್ಲದೇ ಬೇಕಾಬಿಟ್ಟಿ ಟ್ರೋಲ್ ಮಾಡ್ತಿದ್ದಾರೆ.
ರೇಪಿಸ್ಟ್‌ಗಳ ವಿರುದ್ಧ ಕೇಸ್ ಹಾಕಿ ನನ್ನ ಮೇಲಲ್ಲ, ಇದು ತಾಲಿಬಾನ್ ಅಲ್ಲ ಅಫ್ಘಾನಿಸ್ತಾನ ಅಲ್ಲ: ಉರ್ಫಿ ಜಾವೇದ್ ಗರಂ
ಚಿತ್ರ ವಿಚಿತ್ರ ಫ್ಯಾಷನ್‌ನಿಂದ ಸದಾ ಸುದ್ದಿಯಲ್ಲಿರುವ ಉರ್ಫಿಯ ಈ ಹೊಸ ವೇಷವೂ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗುತ್ತಿದೆ. ಕೆಲವರು ಸ್ಮಾರ್ಟ್ಫೋನ್ ಇಷ್ಟೊಂದು ಚೀಪ್ ಆಯ್ತಾ ಎಂದು ಪ್ರಶ್ನಿಸಿದರೆ ಮತ್ತೆ ಕೆಲವರು ಟಿಮ್ ಕುಕ್ ನಿಮ್ಮ ಲೋಕೇಷನ್ ಯಾವುದು ಎಂದು ತಿಳಿಯಲು ಬಯಸಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Urfi Javed ಚಿನ್ನದ ಬಳೆ ಅಲ್ಲ ಗುರು ಮಾರ್ಕೆಟ್ನಲ್ಲಿ ಸಿಗೋ 200 ರೂ. ಬಳೆ ಎಂದ ನಟಿ!
ಹಾಗಂತ ಉರ್ಫಿ ಈ ರೀತಿ ವೇಷ ಹಾಕುವುದು ಇದೇ ಮೊದಲೇನಲ್ಲ. ಈ ಮೊದಲೂ ಕೂಡ ಟಾಪ್‌ಲೆಸ್ (Topless) ಆಗಿದ್ದ ಉರ್ಫಿ ತನ್ನ ಎದೆಯ ಭಾಗವನ್ನು ಇನ್ನೊಬ್ಬರ ಕೈಗಳಿಂದ ಮುಚ್ಚಿಸಿಕೊಂಡಿದ್ದಳು. ಅಲ್ಲದೇ ಮತ್ತೊಂದು ಫೋಸ್ಟ್‌ನಲ್ಲಿಯೂ ಬ್ಯಾಕ್‌ಲೆಸ್ ಆದ ಉರ್ಫಿ ಖಾಸಗಿ ಭಾಗಕ್ಕೆ ಸ್ಟಿಕರ್ ಅಂಟಿಸಿಕೊಂಡು ಫೋಸ್ ನೀಡಿದ್ದಳು.
ಇಂತಹ ಉರ್ಫಿ ಇತ್ತೀಚೆಗಷ್ಟೇ ಒಂದು ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು. ಹಯೆ ಹಯೇ ಯೆಹ್ ಮಜ್ಬೂರಿ ಎಂಬ ವಿಡಿಯೋ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಕೆಲವು ಸೀರಿಯಲ್‌ಗಳಾದ ಮೇರಿ ದುರ್ಗಾ, ಬೆಪನ್ನಾ, ಪಂಚ್ ಬಿಟ್ ಸೀಸನ್ 2, ಚಂದ್ರ ನಂದಿನಿ, ಸಾತ್ ಫೆರೊ ಕಿ ಹೆರಾ ಫೆರ್ರಿ, ಯೆಹ್ ರಿಸ್ತಾ ಕ್ಯಾ ಕೆಹ್ಲಾತಾ ಹೈ (Yeh Rishta Kya Kehlata Hai) ಹಾಗೂ ಕಸೌಟಿ ಜಿಂದಗಿ ಕೇ (Kasautii Zindagii Kay) ಮುಂತಾದ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಕಳೆದ ವರ್ಷದ ಹಿಂದಿ ಬಿಗ್ ಬಾಸ್‌ನ ಒಟಿಟಿ (Bigboss OTT)ಸೀಸನ್‌ನಲ್ಲೂ ಭಾಗಿಯಾಗಿದ್ದಳು.
ಇತ್ತೀಚೆಗಷ್ಟೇ ಉರ್ಫಿ ಬಿಕಿನಿ ಧರಿಸಿಕೊಂಡು ರಸ್ತೆಗಳಿದಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಉರ್ಫಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತನ್ನ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸಿಟ್ಟಿಗೆದ್ದ ಉರ್ಫಿ ಇದು ಪಾಕಿಸ್ತಾನ ಅಫ್ಘಾನಿಸ್ತಾನ ಅಲ್ಲ ಭಾರತ, ನಾನು ಪ್ರಚಾರಕ್ಕೋಸ್ಕರ ಹೀಗೆ ಮಾಡುತ್ತಿದ್ದೇನೆ ಎಂದು ಬಹುತೇಕರು ಅಂದುಕೊಂಡಿದ್ದಾರೆ ಆದರೆ ನನ್ನಿಂದ ಆನೇಕರಿಗೆ ಪ್ರಚಾರ ಸಿಗುತ್ತಿದೆ ಎಂದೆಲ್ಲಾ ಬೊಬ್ಬೆ ಹೊಡೆದಿದ್ದಳು. ಅಲ್ಲದೇ ರೇಪಿಸ್ಟ್‌ಗಳ ಮೇಲೆ ಕೇಸ್ ಹಾಕಬೇಕು ನನ್ನ ಮೇಲೆ ಏಕೆ ಪ್ರಕರಣ ದಾಖಲಿಸುತ್ತೀರಿ ಎಂದು ಕೆಂಡ ಕಾರಿದ್ದಳು.